ಗ್ರಂಥಾಲಯ ಸದ್ಭಳಕೆ ಮಾಡಿ ಎಲ್ ಕೃಷ್ಣನಾಯಕ

ಗ್ರಂಥಾಲಯ ಸದ್ಭಳಕೆ ಮಾಡಿ ಎಲ್ ಕೃಷ್ಣನಾಯಕ  Make good use of the library, L Krishnanayak

ಹೂವಿನ ಹಡಗಲಿ 22:  ವಿದ್ಯಾರ್ಥಿಗಳು ಸಾರ್ವಜನಿಕ ಗ್ರಂಥಾಲಯದ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಲ್ ಕೃಷ್ಣನಾಯಕ ಅಭಿಮತ ವ್ಯಕ್ತಪಡಿಸಿದರು.ಸಾರ್ವಜನಿಕ ಗ್ರಂಥಾಲಯ ಜಿಲ್ಲಾ ಕೇಂದ್ರ ಗ್ರಂಥಾಲಯ ಇಲಾಖೆಯ ವತಿಯಿಂದ 2022-23 ನೇ ಸಾಲಿನ ಎಸ್ ಇ ಪಿ ಹಾಗೂ ಟಿ ಎಸ್ ಪಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಪಟ್ಟಣದ ಶಾಖಾ ಗ್ರಂಥಾಲಯದಮೊದಲ ಮಹಡಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ತಾಲೂಕಿನ ಗ್ರಾಮೀಣ ಗ್ರಂಥಾಲಯಗಳು ಸಾರ್ವಜನಿಕರಿಗೆ ಓದಿನ ಅರಿವು ಮೂಡಿಸುವ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು. ಗ್ರಂಥಾಲಯಾಧಿಕಾರಿಗಳಾದ ಬಿ ನಾರಾಯಣ್ ದಾಸ್ ಹರಪನಹಳ್ಳಿ ಗ್ರಂಥಾಲಯಾಧಿಕಾರಿ ಮಂಜುನಾಥ ಬೋವಿ ಮತ್ತು ಬೀರಬ್ಬಿ ಬಸವರಾಜ ಶಂಕರ್ ಬೆಟಗೇರಿ ಮುಖಂಡ ಕೆ ಪುತ್ರೇಶ್, ಸಿ ಚಂದ್ರ​‍್ಪ, ಲ್ಯಾಂಡ್ ಆರ್ಮಿ ಎ ಇ ಇ ಜಯನಾಯ್ಕ್‌ ,ಗ್ರಾ.ಪಂ. ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಕುರಿ, ತಾಲೂಕು ಅಧ್ಯಕ್ಷ ದೊಡ್ಡಬಸಪ್ಪ ಮೇಲ್ವಿಚಾರಕರಾದ ಮರಿಯಪ್ಪ, ಮಲ್ಲಿಕಾರ್ಜುನ ಲಿಂಗನಗೌಡ, ಗಿರಿಜಮ್ಮ,ಉಮಾ, ಶಾಂತಿಬಾಯಿ,ಡಯಾನ, ಪಂಚಾಕ್ಷರಿ ಅಯ್ಯನಗೌಡ, ಶಿವಕುಮಾರ್ , ಸುರೇಶ ಇತರರು ಇದ್ದರು. ಇದೇ ವೇಳೆ ಹೊಸ ಪುಸ್ತಕಗಳ ಪ್ರದರ್ಶನಕ್ಕೆ ಶಾಸಕರು ಚಾಲನೆ ನೀಡಿದರು. ಶಾಖಾ ಗ್ರಂಥಾಲಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಮೇಲ್ವಿಚಾರಕರ ವತಿಯಿಂದ ಶಾಸಕರನ್ನು ಗೌರವಿಸಲಾಯಿತು.