ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ: ರಾವುತ್ ಮರಬಿ

ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ: ರಾವುತ್ ಮರಬಿ Make a sincere effort to protect children's rights: Rawut Marabi

  

ದೇವರಹಿಪ್ಪರಗಿ 22:  ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಸ್ಥಳೀಯ ಸರಕಾರ ಮತ್ತು ಸಂಬಂಧಪಟ್ಟ ವಿವಿಧ ಇಲಾಖೆಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕ ಮತ್ತು ಪಾರದರ್ಶಕತೆಯಿಂದ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಸ್ನೇಹ ಸಂಸ್ಥೆ ಸಂಪನ್ಮೂಲ ವ್ಯಕ್ತಿಗಳಾದ ರಾವುತ್ ಮರಬಿ ಹೇಳಿದರು ಹೇಳಿದರು.            

ತಾಲೂಕಿನ ಕೆರೂಟಗಿ ಕೆ.ಬಿ.ಎಚ್‌.ಪಿ.ಎಸ್ ಶಾಲೆಯಲ್ಲಿ  ಸ್ನೇಹ ಸಂಸ್ಥೆ ಐ ಎಲ್ ಪಿ ಯೋಜನೆ ಹಾಗು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಸಮುದಾಯದಲ್ಲಿ ನವಗ್ರಹದಂತೆ ಇರುವ ಒಂಭತ್ತು ಇಲಾಖೆಗಳನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ. ಇವರೆಲ್ಲರ  ಮೂಲಕ ಒಗ್ಗಟ್ಟಾಗಿ ಮಕ್ಕಳ ಹಾಗೂ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವ ಕೆಲಸ ಮತ್ತು ಸಮುದಾಯದಲ್ಲಿ  ಅರಿವು ಮೂಡಿಸುವ ಕಾರ್ಯ ನಮ್ಮದಾಗಬೇಕು. ಮಕ್ಕಳ ಹಕ್ಕುಗಳ ಇತಿಹಾಸ ಮಕ್ಕಳ ಹಕ್ಕುಗಳ ರಕ್ಷಣೆಗೆ ಇರುವ ಕಾನೂನುಗಳು,ಮಕ್ಕಳ ಸಮಸ್ಯೆಗಳು ಮಕ್ಕಳಿಗೆ ಸಂಬಂಧಿಸಿದ ಇಲಾಖೆಗಳ ಜವಾಬ್ದಾರಿಗಳ ಬಗ್ಗೆ ವಿವರವಾಗಿ ತಿಳಿಸಿದರು.       

ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳಾದ ಪುಷ್ಪಾವತಿ ಬಿರಾದಾರ ಮಾತನಾಡಿ, ಶಾಲಾ ಮಕ್ಕಳ  ಕಡ್ಡಾಯ ಹಾಜರಾತಿ, ಅಪೌಷ್ಠಿಕ ಮಕ್ಕಳ ರಕ್ಷಣೆ, ವಲಸೆ ಹೋಗುವ ಮಕ್ಕಳ ರಕ್ಷಣೆ ಮತ್ತು ಪಾಲಕರ ಕರ್ತವ್ಯ  ಮತ್ತು  ಜವಾಬ್ದಾರಿಗಳ ಬಗ್ಗೆ ತಿಳಿಸಿದರು.           ಶಾಲಾ ಮುಖ್ಯ ಗುರುಗಳಾದ ಎಸ್‌.ಎಸ್‌. ಸಾತಿಹಾಳ ಅವರು ಮಾತನಾಡಿ,ನಮ್ಮ ಮಕ್ಕಳಿಗೆ ನೈತಿಕ ಶಿಕ್ಷಣವನ್ನು ಕೊಡಬೇಕು. ಹಿಂದೆ ಗುರುಕುಲ ಶಿಕ್ಷಣ ಪದ್ಧತಿಯಂತೆ ಇಂದು ನಾವು ನಮ್ಮ ಕುಟುಂಬಗಳಲ್ಲಿ ಮಕ್ಕಳಿಗೆ ಹೇಳಬೇಕಿದೆ ಎಂದರು. ನಾವು ಬಾಲ್ಯ ವಿವಾಹ, ಭ್ರೂಣ ಹತ್ಯೆ, ಅರಿವು ಮೂಡಿಸಿ, ಹೆಣ್ಣು ಮಕ್ಕಳಲ್ಲಿ ನೈತಿಕ ಶಿಕ್ಷಣವನ್ನು ನೀಡುವ ಅಗತ್ಯವಿದೆ. ಇದರ ಬಗ್ಗೆ ಸಮುದಾಯದ ಪಾಲಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.            

ಕುದರಗುಂಡ ಶಾಲೆಯ ಶಿಕ್ಷಕರಾದ ಎಸ್‌.ಎಸ್‌. ಬಿರಾದಾರ ಮಾತನಾಡಿ, ತಮ್ಮ ಶಾಲೆಯ ಸಮಸ್ಯೆಗಳು ಮಕ್ಕಳ ಬೇಡಿಕೆಗಳು ಹಾಗೂ ಶಾಲಾ ಪ್ರಗತಿಯ ಬಗ್ಗೆ ತಿಳಿಸಿದರು.  ಮಕ್ಕಳಾದ ಭಾಗ್ಯಶ್ರೀ ಹಿರೇಮಠ, ಮುತ್ತುರಾಜ ಪೂಜಾರಿ ಈ ಸಭೆಯಲ್ಲಿ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳು ಹಾಗೂ ಬೇಕಾದ ಸೌಲಭ್ಯಗಳ ಕುರಿತು ಮಾತನಾಡಿದರು.ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎ.ಎಸ್‌.ಮುಜಾವಾರ ಭರವಸೆ ನೀಡಿದರು.          

ಸಭೆಯಲ್ಲಿ ಅಂಗನವಾಡಿ ಮೇಲ್ವಿಚಾರಕಿ ಎ.ಎಂ ಸಜ್ಜನ್, ನಿವೃತ್ತ ಮುಖ್ಯ ಗುರುಗಳಾದ ಬಾಬುಗೌಡ ಪಾಟೀಲ, ಪೊಲೀಸ್ ಇಲಾಖೆಯ ಬಿ.ಡಿ.ಖಾನಾಪುರ,ಶಿಕ್ಷಕರಾದ ಎಚ್‌.ಎ.ಯಂಕಂಚಿ, ಆರ್‌.ಎಂ.ಕಾಸರ್, ಆಯ್‌.ಎಸ್‌. ಬಾಡಗಿ, ಎ.ಎ.ಮುಲ್ಲಾ, ಎಮ್‌.ಎಸ್‌. ಸಗರ, ಶಾಲಾ ಶಿಕ್ಷಕರು,ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮಕ್ಕಳು ಉಪಸ್ಥಿತರಿದ್ದರು. ಶ್ರೇಷ್ಟಾ ಪಾಟೀಲ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿ ಗೌಡಪ್ಪ ಬಿರಾದಾರ ಸ್ವಾಗತಿಸಿದರು. ಸನ್ನಿಧಿ ಹಿರೇಮಠ ವಂದಿಸಿದರು.