ರಾಯಬಾಗ 13: ಚಿಕ್ಕೋಡಿ ಪಟ್ಟಣದಲ್ಲಿ ಡಿ.14 ರಿಂದ 16 ರವರೆಗೆ ಜರುಗಲಿರುವ ಸತೀಶ ಶುಗರ್ಸ್ ಅವಾರ್ಡ ಕಾರ್ಯಕ್ರಮಕ್ಕೆ ಕುಡಚಿ ಮತಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ಸುಗೊಳಿಸಬೇಕೆಂದು ವಕೀಲರು ಮತ್ತು ಬಿಮ್ಸ್ ನಾಮನಿರ್ದೇಶಿತ ಸದಸ್ಯ ರಾಜು ಶಿರಗಾಂವೆ ತಿಳಿಸಿದರು.
ಶುಕ್ರವಾರ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಾರ್ಯಕ್ರಮದ ಪ್ರಚಾರವನ್ನು ಅಮೀತ ಘಾಟಗೆ ಅವರ ನೇತೃತ್ವದಲ್ಲಿ ಕೈಗೊಂಡಿದ್ದು, ಡಿ.14 ಮತ್ತು 15 ರಂದು ನಡೆಯಲಿರುವ ಸತೀಶ ಶುಗರ್ಸ್ ಅವಾರ್ಡ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಕುಡಚಿ ಭಾಗದಿಂದ ಆಯ್ಕೆಯಾದ ವಿದ್ಯಾರ್ಥಿಗಳ ಪಾಲಕರು ಭಾಗವಹಿಸಬೇಕು ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರೇಕ್ಷಕರಿಗೆ ಯುವ ಧುರೀಣ ಅಮೀತ ಘಾಟಗೆ ಅವರು ವಾಹನದ ವ್ಯವಸ್ಥೆ ಮಾಡಿದ್ದು, ಇದರ ಸದುಪಯೋಗವನ್ನು ಕುಡಚಿ ಮತಕ್ಷೇತ್ರ ಜನರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹರೀಶ ಕುಲಗುಡೆ, ಗೀರೀಶ ದರೂರ, ಮಹೇಶ ಕೊರವಿ, ಜೀನೇಂದ್ರ ಖೆಮಲಾಪೂರೆ, ರೇವಣ್ಣ ಸರವ, ಕೇದಾರಿ ಚೌಗುಲೆ, ಸಾಗರ ಝೆಂಡೆನ್ನವರ, ಬಸವರಾಜ ಕಾಂಬಳೆ, ಗಜಾನನ ಕೋಕಾಟೆ, ಅನೀಲ ಮೋಹಿತೆ, ವಿಷ್ಣು ಕಾಂಬಳೆ ಇದ್ದರು.