ಸರಕಾರಿ ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕರನ್ನು ಖಾಯಂಗೊಳಿಸಿ

     ಸರಕಾರಿ ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕರನ್ನು ಖಾಯಂಗೊಳಿಸಿ Make Kannada teachers permanent in government Urdu schools


    ಸರಕಾರಿ ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕರನ್ನು ಖಾಯಂಗೊಳಿಸಿ 

ಹಲಗತ್ತಿ 15:ಶಾಲೆಗಳಲ್ಲಿ  ಪಾಠ ನೀಡುವ ಗುರುಗಳು ನಿವೃತ್ತಿಯಾಗುತ್ತಿದ್ದಂತೆ,  ಖಾಲಿ ಆಗಿರುವ ಸ್ಥಾನಗಳಿಗೆ ತಕ್ಷಣವೆ ನೇಮಕಮಾಡುವ ಪ್ರವೃತ್ತಿ ಅಧಿಕಾರಿಗಳು ಬೆಳೆಸಿಕೊಂಡಲ್ಲಿ,  ಖಂಡಿತವಾಗಿಯೂ ಆ ಸ್ಕೂಲಿನ ಮಕ್ಕಳ ಫಲಿತಾಂಶ ಅಧಿಕವಾಗುವುದರಲ್ಲಿ ಸಂದೇಹವೇ ಇಲ್ಲ  ಎಂದು ಶಂಕರ ಹಲಗತ್ತಿ ನುಡಿದರು.  

     ನಗರದ ಇಂಡಿಪೆಂಡೆಂಟ್ ಸಂಗ್ರಾಮ ನ್ಯೂಸ್ ಟ್ರಸ್ಟ್‌  ಹಾಗೂ ಕಂಠಿಗಲ್ಲಿ ಉರ್ದು ಶಾಲಾ ಸುಧಾರಣಾ ಸಮೀತಿಯ ಸರಕಾರಿ  ಶಾಲೆಯಲ್ಲಿ 14-11- 2025 ರಂದು  70ನೇ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ  ಅಂಗವಾಗಿ ಏರಿ​‍್ಡಸಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಸರ್ಕಾರಿ ಉರ್ದುಶಾಲೆಗಳಲ್ಲಿ  ಕನ್ನಡ ಶಿಕ್ಷಕರನ್ನು ಖಾಯಂಗೊಳಿಸುವುದರೊಂದಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶ್ರಮವಹಿಸಬೇಕು ಎಂದರು.   

     ಕೇಂದ್ರ ಸಾಹಿತ್ಯವೇದಿಕೆ ಧಾರವಾಡ ಜಿಲ್ಲಾ ಅಧ್ಯಕ್ಷ ಎ.ಎ.ದರ್ಗಾ ಮಾತನಾಡಿ  ಕರ್ನಾಟಕ ರಾಜ್ಯದಲ್ಲಿ ಮುಸಲ್ಮಾನರು 70 ಲಕ್ಷ 50 ಸಾವಿರ ಜನಸಂಖ್ಯೆ ಇದ್ದು, ಅದರಲ್ಲಿ ಪ್ರತಿಶತ 40 ರಷ್ಟು ಜನರು ಮಾತ್ರ ಕನ್ನಡವನ್ನು ಮಾತನಾಡುತ್ತಾರೆ. ನಮ್ಮ ರಾಜ್ಯ ಭಾಷೆ ಕನ್ನಡ ಇರುವುದರಿಂದ  ಉರ್ದು ಜೊತೆಗೆ ಕನ್ನಡವನ್ನು ಕಲಿಯಯಲೇ ಬೇಕು. ಎಂದರು.  

     ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕರಾದ ರಾಜಶೇಖರ ಕಮತಿ ಮಾತನಾಡಿ, ಶಾಲಾ ಸುಧಾರಣೆಗಾಗಿ ಸಹಾಯ ಸಹಕಾರ ಸದಾ ನೀಡಲು,  ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿದರು. ಪತ್ರಕರ್ತ ಹಾಗೂ ಸಾಹಿತಿಗಳಾದ ಎಂ ಆರ್ ನದಾಫ ಮಾತನಾಡಿದಿಂದಿನ ದಿನಮಾನಗಳಲ್ಲಿ ಮಕ್ಕಳಲ್ಲಿ ಕನ್ನಡದ ಸಾಹಿತ್ಯ ಅಭಿರುಚಿ ಬೆಳೆಸುವುದು ತುಂಬಾ  ಅಗತ್ಯವಿದೆ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಪ್ರಮೀಳಾ ಜಕ್ಕಣ್ಣವರ ಮಾತನಾಡಿ, ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರು ಮಕ್ಕಳಿಗೆ ಆಟ ಪಾಠದ ಜೊತೆ ಜೊತೆಗೆ, ಹಾಡಿನ ಮೂಲಕ ಕನ್ನಡ ಅರಿವನ್ನು ಮೂಡಿಸಬೇಕಾಗಿದೆ.  ಎಂದು ಹೇಳಿದರು. 

     ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ಕೆ. ಜಿ ಹಳಿಯಾಳ ಅವರು ಸಭೆಯ  ಅಧ್ಯಕ್ಷತೆ ವಹಿಸಿ ಮಾತನಾಡಿದರು.   ಉರ್ದು ಶಾಲೆಯ ಕೆಲವು ಮಕ್ಕಳು ಕನ್ನಡದಲ್ಲಿ ಭಾಷಣ ಮಾಡಿದರು. ಮಕ್ಕಳು ಕನ್ನಡ ಹಾಡಿನ ಸೊಗಸಿಗೆ ತಕ್ಕಂತೆ  ನೃತ್ಯಮಾಡುವುದರ ಮೂಲಕ ಎಲ್ಲರನ್ನು ರಂಜಿಸಿದರು. ಕಾರ್ಯಕ್ರಮದ ನಿರೂಪಣೆ  ಸಾಹಿತಿ ಮಹಮ್ಮದಅಲಿ ಗೂಡುಭಾಯಿ ಹಾಗೂ ಎಂ.ಎಂ. ಜಮಾದಾರ  ನಿರೂಪಿಸಿದರು. ಕುಮಾರಿ ಎಂ. ಎಂ. ನದಾಫ ವಂದಿಸಿದರು. ಇಂಡಿಪೆಂಡೆಂಟ್ ಸಂಗ್ರಾಮ ನ್ಯೂ ಟ್ರಸ್ಟ ಅಧ್ಯಕ್ಷರು ಮತ್ತು ಮಕ್ಕಳ ಪಾಲಕರು ಉಪಸ್ಥಿತರಿದ್ದರು.  ವಂದಿಸಿದರು.