ಗ್ರಾಮದೇವಿ ಜಾತ್ರೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಿ: ಡಿವೈಎಸ್ಪಿ ಚಿದಂಬರ ಮಡಿವಾಳ

ಗ್ರಾಮದೇವಿ ಜಾತ್ರೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಿ: ಡಿವೈಎಸ್ಪಿ ಚಿದಂಬರ ಮಡಿವಾಳ Maintain peace and order at the Grama Devi fair: DySP Chidambaram Madiwala

ಸವದತ್ತಿ 27 : ನಗರದ ಮೂಲಿಮಠದಲ್ಲಿ ಜರುಗಲಿರುವ ಗ್ರಾಮದೇವಿಯ ಜಾತ್ರಾ ಮಹೋತ್ಸವವು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಶಾಂತಿಯುತವಾಗಿ ನಡೆಯಲು ಸಾರ್ವಜನಿಕರು ಹಾಗೂ ಭಕ್ತಾದಿಗಳು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರ ಹೇಳಿದರು. ನಗರದ ಮೂಲಿಮಠದಲ್ಲಿ ಆಯೋಜಿಸಿದ ಗ್ರಾಮದೇವಿ ಜಾತ್ರಾ ಪೊಲೀಸ್ ಬಂದೋಬಸ್ತ್‌ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾತ್ರಾ ಸಮಯದಲ್ಲಿ ಅತೀ ಹೆಚ್ಚು ಜನಸಂದಣಿ ಸೇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.  

ಭಕ್ತಾದಿಗಳಿಗೆ ತೊಂದರೆಯಾಗದಂತೆ ವಾಹನ ನಿಲುಗಡೆ  ಮತ್ತು ಸಂಚಾರ ಮಾರ್ಗ ಬದಲಾವಣೆ ಕುರಿತು ಈಗಾಗಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಾತ್ರಾ ನಡೆಯುವ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಪ್ರತಿಯೊಂದು ಚಟುವಟಿಕೆಯ ಮೇಲೆ ಸದಾ ನಿಗಾ ಇಡಲಾಗುವುದು. ಜಾತ್ರೆ ಎನ್ನುವುದು ಭಕ್ತಿ ಮತ್ತು ಸಂಭ್ರಮದ ಸಂಕೇತ. ಇಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಕೇವಲ ಪೊಲೀಸರ ಜವಾಬ್ದಾರಿಯಲ್ಲ, ಸಾರ್ವಜನಿಕರ ಕರ್ತವ್ಯವೂ ಆಗಿದೆ, ಎಂದರು. ಇದೇ ಸಂದರ್ಭದಲ್ಲಿ ಪಿಐ ಸುರೇಶ ಬೆಂಡೆಗುಂಬಳ ಅವರು ಮಾತನಾಡಿ, ಜಾತ್ರೆಯ ಯಶಸ್ವಿಗಾಗಿ ಇಲಾಖೆಯು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಸಾರ್ವಜನಿಕರು ಕಾನೂನು ಪಾಲಿಸುವ ಮೂಲಕ ಸಹಕರಿಸಬೇಕು ಎಂದು ವಿನಂತಿಸಿದರು.ಈ ಸಂದರ್ಭದಲ್ಲಿ ಅಶ್ವಥ್ ವೈದ್ಯ, ವಿರೂಪಾಕ್ಷ ಮಾಮನಿ, ಚಂದ್ರು ಶ್ಯಾಮರಾಯನವರ, ಪ್ರವೀಣ ಪಟ್ಟಣಶೆಟ್ಟಿ, ಕೆ.ಎಮ್‌.ಬನ್ನೂರ, ಸದಾಶಿವ ಕೌಜಲಗಿ, ಶಿವಾನಂದ ಹೂಗಾರ, ಭರ​‍್ಪ ಅಣಿಗೇರಿ, ಎನ್‌.ಸಿ.ಬೆಂಡಿಗೇರಿ, ಸಂಜೀವಕುಮಾರ ನವಲಗುಂದ, ಬಿ.ಎನ್‌.ಪ್ರಭುನವರ, ಮದನಲಾಲ ಚೋಪ್ರಾ, ಮಲ್ಲಿಕಾರ್ಜುನ ಬೀಳಗಿ, ಇನ್ನೂ ಅನೇಕ ಪ್ರಮುಖ ಮುಖಂಡರು, ಉಪಸ್ಥಿತರಿದ್ದರು.