ಅದ್ಧೂರಿಯಾಗಿ ಜರುಗಿದ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ

ಅದ್ಧೂರಿಯಾಗಿ ಜರುಗಿದ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ  Mailaralingeshwara Jatra festival celebrated on a grand scale

                        ಮುಂಡಗೋಡ 30: ಪಟ್ಟಣದ  ಗಣೇಶ ನಗರದಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ  ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಮತ್ತು ಧಾರ್ಮಿಕ ಸಡಗರದಿಂದ ಜರಗಿತ್ತು. 27ನೇ ವರ್ಷದ ಮೈಲಾರಲಿಂಗೇಶ್ವರ ಜಾತ್ರೆಯಾಗಿರುವುದರಿಂದ,ಆಯೋಜಕರು ವಿಶೇಷ ಸಿದ್ಧತೆಗಳನ್ನು ಮತ್ತು ದೇವಸ್ಥಾನ ಸುತ್ತಮುತ್ತಲ ಪ್ರದೇಶವನ್ನು ತಳಿರು ತೋರಣಗಳಿಂದ ಮತ್ತು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. 28/11/2025ದಿನದಂದು ಶುಕ್ರವಾರ ಸಾಯಂಕಾಲ ಮೈಲಾರ ಲಿಂಗೇಶ್ವರನ ಪಲ್ಲಕ್ಕಿ ಉತ್ಸವವು ಮುಂಡಗೋಡ ಪಟ್ಟಣದ ಮಾರಿಕಾಂಬಾ ದೇವಿಗೆ ಉಡಿ ತುಂಬಿ ನಗರದ ಎಲ್ಲಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿ.

                        ನಂತರ  ಮೈಲಾರಲಿಂಗೇಶ್ವರನ ದೇವಸ್ಥಾನಕ್ಕೆ ಆಗಮಿಸಿತ್ತು. ನಂತರ  ಶನಿವಾರ  ಬೆಳಿಗ್ಗೆ  ಮೈಲಾರಲಿಂಗೇಶ್ವರ ದೇವರಿಗೆ ಮಹಾ ಅಭೀಷೇಕ ಹಾಗೂ ಮೈಲಾರಲಿಂಗೇಶ್ವರ ಪಲ್ಲಕ್ಕಿ ಉತ್ಸವವು ನಗರದಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಪ್ರವೇಶಿಸಿತ್ತು. ನಂತರ ಮಧ್ಯಾಹ್ನ 1-05 ಗಂಟೆಗೆ ಕಾರಣಿಕೋತ್ಸವ, ಡೋಣಿ ತುಂಬಿಸುವುದು, ಸರಪಕ ಪವಾಡ, ಶಿವದಾರದ ಪವಾಡ,ಆರತಿ ಪವಾಡ ಕಾರ್ಯಕ್ರಮಗಳು ನಡೆದವವು. ನಂತರ ಅನ್ನಸಂತರೆ​‍್ಣ  ಜಾತ್ರೆಯ ಪ್ರಮುಖ ದಿನದಂದು ಸಹಸ್ರಾರು ಭಕ್ತರಿಗೆ ಮಹಾ ಅನ್ನಸಂತರೆ​‍್ಣ ಏರಿ​‍್ಡಸಲಾಗಿತ್ತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ಈ ಮಹೋತ್ಸವವು ಭಕ್ತಿ ಪರಕಾಷ್ಠೆಗೆ ಸಾಕ್ಷಿಯಾಯಿತು.