ಶಿಲ್ಲಾಂಗ್: ನ್ಯಾಯಮೂತರ್ಿ ಮುಹಮ್ಮದ್ ರಫೀಕ್ ಬುಧವಾರ ಮೇಘಾಲಯ ಹೈಕೋಟರ್್ ಮುಖ್ಯ ನ್ಯಾಯಮೂತರ್ಿಯಾಗಿ ಅಧಿಕಾರ ವಹಿಸಿಕೊಂಡರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನ್ಯಾಯಮೂತರ್ಿ ರಫೀಕ್ ಅವರಿಗೆ ರಾಜ್ಯಪಾಲ ತಥಾಗತ ರಾಯ್ ಪ್ರಮಾಣ ವಚನ ಬೋಧಿಸಿದರು. ಇದಕ್ಕೂ ಮೊದಲು ರಫೀಕ್ ರಾಜಸ್ತಾನ ಹೈಕೋಟರ್್ನ ಹಿರಿಯ ನ್ಯಾಯಾಧೀಶರಾಗಿದ್ದರು.
ಮೇಘಾಲಯ ಹೈಕೋಟರ್್ನ ಮುಖ್ಯ ನ್ಯಾಯಮೂತರ್ಿಯಾಗಿದ್ದ ಎ.ಕೆ.ಮಿತ್ತಲ್ ಅವರನ್ನು ಮಧ್ಯಪ್ರದೇಶ ಹೈಕೋಟರ್್ನ ಮುಖ್ಯ ನ್ಯಾಯಮೂತರ್ಿಯಾಗಿ ವಗರ್ಾವಣೆ ಮಾಡಲಾಗಿತ್ತು. ಪ್ರಮಾಣವಚನ ಸಮಾರಂಭದಲ್ಲಿ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ, ಸಚಿವ ಸಂಪುಟದ ಸದಸ್ಯರು, ಮೇಘಾಲಯ ಹೈಕೋಟರ್್ ನ್ಯಾಯಾಧೀಶ ಹಮರ್ಸನ್ ಸಿಂಗ್ ಥಾಂಗ್ಖೀವ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು. ರಾಜಸ್ತಾನದ ಚುರು ಎಂಬಲ್ಲಿ ಜನಿಸಿರುವ ರಫೀಕ್ 1984ರಲ್ಲಿ ವಕೀಲ ವೃತ್ತಿ ಆರಂಭಿಸಿದರು. ಅವರು ರಾಜಸ್ತಾನ ಹೈಕೋಟರ್್ನ ಎಲ್ಲಾ ಪೀಠಗಳಲ್ಲೂ ಅಭ್ಯಾಸ ಮಾಡಿದ್ದಾರೆ. 1999ರಿಂದ 2006ರವರೆಗೆ ಅವರು ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ರಾಜಸ್ತಾನ ಹೈಕೋಟರ್್ನ ನ್ಯಾಯಾಧೀಶರನ್ನಾಗಿ ಅವರನ್ನು ನೇಮಿಸಲಾಯಿತು. ರಫೀಕ್ ಅವರು ರಾಜಸ್ತಾನ ಹೈಕೋಟರ್್ನ ಹಂಗಾಮಿ ಮುಖ್ಯ ನ್ಯಾಯಮೂತರ್ಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. ನ್ಯಾಯಮೂತರ್ಿ ರಫೀಕ್ ಸುದ್ದಿಗಾರರೊಂದಿಗೆ ಮಾತನಾಡಿ, ಐದು ವರ್ಷಗಳಿಗಿಂತ ಹೆಚ್ಚಿನ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚಿನ ಗಮನ ಹರಿಸುವುದಾಗಿ ಹೇಳಿದರು. ರಾಜ್ಯದ ಅಧೀನ ನ್ಯಾಯಾಲಯದಲ್ಲಿ 2500 ಪ್ರಕರಣಗಳು ಬಾಕಿ ಇವೆ. ಹೈಕೋಟರ್್ ಮತ್ತು ಅಧೀನ ನ್ಯಾಯಾಲಯದ ಗಣಕೀಕರಣವನ್ನು ಬಲಪಡಿಸಲು ನಾನು ಪ್ರಯತ್ನಿಸುತ್ತೇನೆ. ಇದು ನನ್ನ ಆದ್ಯತೆಯಾಗಿರುತ್ತದೆ ಎಂದು ಅವರು ಹೇಳಿದರು. ಲೋಕ ಅದಾಲತ್ ಆಂದೋಲನ ಬಲಪಡಿಸಲು ಮತ್ತು ನ್ಯಾಯಾಲಯದಲ್ಲಿನ ವೈದ್ಯಕೀಯ ಕೋಶವನ್ನು ಹೆಚ್ಚಿಸಲು ಪ್ರಯತ್ನಿಸುವುದಾಗಿ ಮುಖ್ಯ ನ್ಯಾಯಮೂತರ್ಿ ಹೇಳಿದರು.