ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನವಣೆಯಲ್ಲಿ ಮಹೇಶ ಧರಮಪ್ಪ ಹೊರಕೇರಿ ಆಯ್ಕೆ
Mahesh Dharmappa elected in Karnataka Vidyavardhaka Sangha triennial election
ಹುಬ್ಬಳ್ಳಿ 19: ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನವಣೆಯಲ್ಲಿ ನಾಡಿನ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸಾಮಾನ್ಯ ಸ್ಥಾನದ ಸದಸ್ಯರಾಗಿ ಚುನಾವಣೆಯಲ್ಲಿ ಆಯ್ಕೆಯಾದವರಿಗೆ ಪ್ರಮಾಣ ಪತ್ರ ನೀಡಲು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಅಭೂತಪೂರ್ವ ವಿಜಯ ದಾಖಲಿಸಿದ ಡಾ. ಮಹೇಶ ಧರಮಪ್ಪ ಹೊರಕೇರಿ ಅವರಿಗೆ ಚುನಾವಣಾಧಿಕಾರಿ ನ್ಯಾಯವಾದಿ
ಸಿ.ಎಸ್.ನೇಗಿನಹಾಳ ಅವರು ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಡಾ. ಮಹೇಶ ಧರ್ಮಪ್ಪ ಹೊರಕೇರಿ ಅವರು ಕಲಘಟಗಿಯ ಗುಡ್‌ನ್ಯೂಜ್ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾಗಿ ಅಮೋಘ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಷಯದಲ್ಲಿ ಪಿ.ಎಚ್.ಡಿ. ಪಡೆದಿರುವ ಡಾ. ಮಹೇಶ ಧರ್ಮಪ್ಪ ಹೊರಕೇರಿ ಅವರು ವೃತ್ತಿಯಿಂದ ಗ್ರಂಥಪಾಲಕರು. ಪ್ರವೃತ್ತಿಯಲ್ಲಿ ಕವಿ, ಹವ್ಯಾಸಿ ರಂಗಭೂಮಿ ಕಲಾವಿದರು, ಉತ್ತಮ ನಿರೂಪಕರು, ಸಿನೆಮಾ ನಟರು, ಉತ್ತಮ ಭಾಷಣಗಾರರು, ಅತ್ಯಂತ ಕ್ರೀಯಾಶೀಲರು, ಉತ್ತಮ ಸಂಘಟಕರು, ಶಿಕ್ಷಕರ ಮುಖಂಡರು, ಕಲೆ, ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ ಆಸಕ್ತಿಯುಳ್ಳವರು. ಬಡವರಿಗೆ, ಅಸಹಾಯಕರಿಗೆ ಸದಾ ಸಹಾಯ ಹಸ್ತ ನೀಡುವವರು.
ಹಾಸ್ಯ ಮಾಡುವ ಕಲೆಯುಳ್ಳವರು, ಸಮಾಜ ಮುಖಿ ಚಿಂತಕರು, ಹಲವಾರು ಸಂಘ, ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಮೇಲಾಗಿ ಹೃದಯವಂತರು ಆಗಿರುವ ಡಾ. ಮಹೇಶ ಅವರು ಉತ್ತಮ ಭಾಷಣಕಾರರು, ಹಾಸ್ಯ ಕಲಾವಿಧರು, ನಾಟಕ, ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹಲವಾರು ಸಂಘಟನೆಯಲ್ಲಿದ್ದಾರೆ. ಡಾ. ಮಹೇಶ ಧರ್ಮಪ್ಪ ಹೊರಕೇರಿ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಗೆ ಪುನರಾಯ್ಕೆಯಾಗಿದ್ದಕ್ಕೆ ಕುಟುಂಬದವರು, ಆತ್ಮೀಯ ಸ್ಮೇಹಿತರು, ಹಿರಿಯರು, ಕಿರಿಯರು ಅತೀವ ಸಂತೋಷ ವ್ಯಕ್ತಪಡಿಸಿ, ಅಭಿನಂದನೆಗಳನ್ನು ತಿಳಿಸಿದ್ದಾರೆ. ಶುಭ ಕೋರಿದ್ದಾರೆ. ಅವರೆಲ್ಲರಿಗೂ ಅಭಿಮಾನ, ಹೆಮ್ಮೆ ಪಡುವ ಸಂಗತಿಯಾಗಿದೆ. ಪ್ರಾಚಾರ್ಯ ಡಾ. ಮಹೇಶ ಧರಮಪ್ಪ ಹೊರಕೇರಿ ಅವರ ತಂದೆ ನಿವೃತ್ ಮುಖ್ಯೋಪಾಧ್ಯಾಯರಾಗಿದ್ದ ಸ್ಮರಣೀಯ ಶ್ರೀ ಧರಮಪ್ಪ ಡಿ. ಹೊರಕೇರಿ ಅವರ ದ್ವಿತೀಯ ಪುತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಧರಮಪ್ಪ ಡಿ. ಹೊರಕೇರಿ ಅವರು ಇದ್ದಿದ್ದರೆ ಅಪಾರ ಸಂತೋಷ ಪಡುತ್ತಿದ್ದರು. ಹಿರಿಯ ಸಹೋದರ ನಿವೃತ್ ಪ್ರಾಚಾರ್ಯ ಡಾ. ಲಿಂಗರಾಜ ಧರಮಪ್ಪ ಹೊರಕೇರಿ, ತಾಯಿ, ಸಹೋದರರು, ಸಹೋದರಿಯರು, ಅಪಾರ ಬಂಧು, ಬಳಗದವರು, ಪ್ರಾಚಾರ್ಯ ಡಾ. ಮಹೇಶ ಧರಮಪ್ಪ ಹೊರಕೇರಿ ಅವರಿಗೆ ಅಭಿನಂದಿಸಿ, ಶುಭ ಹಾರೈಸಿದ್ದಾರೆ. ಪ್ರಾಚಾರ್ಯ ಡಾ. ಮಹೇಶ ಧರಮಪ್ಪ ಹೊರಕೇರಿ ಅವರ ಸಂಸಾರದ ವಿವರ, ತಾಯಿ ರತ್ನವ್ವ ಧರಮಪ್ಪ ಹೊರಕೇರಿ, ಅಣ್ಣ ಡಾ. ಲಿಂಗರಾಜ ಧರಮಪ್ಪ ಹೊರಕೇರಿ ಅವರು ಕೆ.ಎಲ್.ಇ. ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಮ್ಮ ಡಾ. ಸುರೇಶ ಧರಮಪ್ಪ ಹೊರಕೇರಿ ಅವರು ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿದ್ದಾರೆ, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ವೃತ್ತಿಪರ ಸಂಘಟನೆ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ಗ್ರಂಥಪಾಲಕರ ಮುಂತಾದ ಸಂಘಟನೆಗಳ ಚಟುವಟಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
ಸಹೋದರಿಯರಾದ ಶಕುಂತಲಾ ಧರಮಪ್ಪ ಹೊರಕೇರಿ (ಶಕುಂತಲಾ ಶಾಂತಪ್ಪ ಹೂಗಾರ) ಅವರು ಲ್ಯಾಮಿಂಗ್ಟನ್ ಪ್ರೌಢಶಾಲೆಯಲ್ಲಿ ಶಿಕ್ಷಕಿ ಆಗಿದ್ದಾರೆ. ಜಯಶ್ರೀ ಧರಮಪ್ಪ ಹೊರಕೇರಿ (ಸುಮಂಗಲಾ ಬಸವರಾಜ ಅಳ್ಳಗಿ) ಅವರು ವಿಜಯಪುರ ಬಿ.ಎಲ್.ಡಿ.ಇ ಸಂಸ್ಥೆಯ ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಪತ್ನಿ ಮಮತಾ ಮಹೇಶ ಹೊರಕೇರಿ, ಹಿರಿಯ ಮಗಳು ಅಕ್ಷತಾ ಅವರು ಎಂಬಿಎ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಳೆ. ಮಗಳು ಅಕ್ಷತಾಳ ಮದುವೆಯನ್ನು ಮಾಡಿದ್ದಾರೆ. ಮಕ್ಕಳಾದ ಅಪೂರ್ವ, ಅನೂಷಾ ಅವರು ಇನ್ನೂ ಓದುತ್ತಿದ್ದಾರೆ. ಅತ್ತಿಗೆ ಸುಮನ್ ಲಿಂಗರಾಜ ಹೊರಕೇರಿ, ಅಣ್ಣನ ಮಕ್ಕಳಾದ ಇಂಜಿನಿಯರ್ ನಿಖಿಲ್, ಇಂಜಿನಿಯರ್ ನಿಕಿತಾ, ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಹೋದರಿಯರ ಯಜಮಾನರಾದ, ಮಾವ ಶಾಂತಪ್ಪ ವಿ. ಹೂಗಾರ ಅವರು ರೇಲ್ವೆ ಇಲಾಖೆಯಲ್ಲಿದ್ದಾರೆ. ಮಾವ ಬಸವರಾಜ ಡಿ. ಅಳ್ಳಗಿ ಅವರು ವಿಜಯಪುರದಲ್ಲಿ ಗಣ್ಯ ವ್ಯಾಪಾರಸ್ಥರಾಗಿದ್ದಾರೆ. ತಮ್ಮನ ಮಕ್ಕಳಾದ ಸಹನಾ, ಸೋಹನ, ಸುಜಯ ಪ್ರಾಥಮಿಕ ಶಿಕ್ಷಣ ಹಂತದಲ್ಲಿದ್ದಾರೆ. ಅಕ್ಕನ ಮಗ ಅಭಿಷೇಕ ಬಿ.ಇ ಪದವೀದರರಾಗಿದ್ದಾರೆ. ತಂಗಿಯ ಮಕ್ಕಳಾದ ಪ್ರಜ್ವಲ್, ಪ್ರಗತಿ, ಅವರು ಓಷದ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.
1890ರಲ್ಲಿ ಪ್ರಾರಂಭಗೊಂಡು ನಿರಂತರವಾಗಿ ಕನ್ನಡ ನಾಡು- ನುಡಿ ಸಾಹಿತ್ಯ-ಸಂಗೀತ, ಕಲೆ ಸಂಸ್ಕೃತಿ ಹಾಗೂ ನೆಲ-ಜಲ, ಗಡಿಗಳಿಗಾಗಿ ಶ್ರಮಿಸುತ್ತಿರುವ ಕನ್ನಡಿಗರ ಹೆಮ್ಮೆಯ ಪ್ರಾನಿನಿಧಿಕ ಹಿರಿಯ ಸಂಸ್ಥೆ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘ. ಹಿಂದಿನ ಅವಧಿಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ಎಲ್ಲ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತು ತಮ್ಮ ಸಹಾಯ, ಸಹಕಾರ, ಪ್ರೊತ್ಸಾಹ ನೀಡುವ ಮೂಲಕ ಕಾರ್ಯಗಳು ಯಶಸ್ವಿಯಾಗುವಂತೆ, ಸಂಘದ ಘನತೆ, ಗೌರವವನ್ನು ಹೆಚ್ಚಿಸಲು ಪ್ರಾಮಾಣಿಕ ಕಾರ್ಯಮಾಡಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಶಾಂತೇಶ ವಾಚನಾಲಯಕ್ಕೆ ಹೊಸ ಕಳೆ ಹಾಗೂ ಆಧುನಿಕತೆಯ ಮೆರಗು ನೀಡಿದ್ದಾರೆ. ಡಾ. ಮಹೇಶ ಅವರ ವಿಶೇಷ ಆಸಕ್ತಿಯಿಂದ ವಾಚನಾಲಯ ಗಣಕೀಕೃತಗೊಂಡು ಶತ ಶತಮಾನಗಳ ಹಳೆಯ ಅಮೂಲ್ಯವಾದ ಗ್ರಂಥಗಳು ಸುಲಭವಾಗಿ ಕೈಗೆ ಸಿಗುವ ಹಾಗೆ ಮಾಡಿದ್ದಾರೆ. ವಾಚನಾಲಯದ ಅಭಿವೃದ್ದಿಯ ಶ್ರೇಯಸ್ಸು ಡಾ. ಮಹೇಶ ಅವರಿಗೆ ಸಲ್ಲುತ್ತದೆ. ಈ ಅವಧಿಯಲ್ಲಿಯು ಇನ್ನೂ ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಗಳು ಡಾ. ಮಹೇಶ ಅವರಿಂದ ಜರುಗಲಿ ಎಂದು ಶುಭ ಹಾರೈಸೋಣ.
ನಾಡಿನ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಗುರ್ಪ ಬೆಲ್ಲದ, ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ, ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಕೋಶಾಧ್ಯಕ್ಷ ಸತೀಶ ಗಂ. ತುರಮರಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಹ ಕಾರ್ಯದರ್ಶಿ ಶಂಕರ ಕುಂಬಿ, ಕಾರ್ಯಕಾರಿ ಸಮಿತಿಯಲ್ಲಿ ಮಹಿಳಾ ಮೀಸಲು ಸ್ಥಾನದ ವಿಶ್ವೇಶ್ವರಿ ಹಿರೇಮಠ, ಎಸ್‌ಸಿ ಎಸ್‌ಟಿ ಮೀಸಲು ಸ್ಥಾನದ ಪ್ರೊ ಧನವಂತ ಹಾಜವಗೋಳ, ಸಾಮಾನ್ಯ ಸ್ಥಾನದ ಶಿವಾನಂದ ಭಾವಿಕಟ್ಟಿ, ಡಾ. ಶೈಲಜಾ ತಮ್ಮಣ್ಣ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಡಾ. ಜಿನದತ್ತ ಅ. ಹಡಗಲಿ, ಗುರು ಹಿರೇಮಠ, ಪ್ರೊ ಶಶಿಧರ ತೋಡಕರ ಅವರ ಸಹಾಯ ಸಹಕಾರವನ್ನು ಸದಾ ಸ್ಮರಿಸುತ್ತಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 