ಅಹಿಂಸೆ ಮತ್ತು ಸತ್ಯದ ಮಾರ್ಗ ಜಗತ್ತಿಗೆ ಸಾರಿದ್ದ ಮಹಾನ್ ಜ್ಞಾನಿ ಮಹಾವೀರರು : ಬಸವರಾಜ್ ಶಿವಣ್ಣನವರು

ಅಹಿಂಸೆ ಮತ್ತು ಸತ್ಯದ ಮಾರ್ಗ ಜಗತ್ತಿಗೆ ಸಾರಿದ್ದ ಮಹಾನ್ ಜ್ಞಾನಿ ಮಹಾವೀರರು : ಬಸವರಾಜ್ ಶಿವಣ್ಣನವರು Mahavira, the great sage who preached the path of non-violence and truth to the world: Basavaraj Shi

ಬ್ಯಾಡಗಿ 01 : ತ್ಯಾಗ ಎಂದರೆ ಏನೆಂದು ತೋರಿಸಿದ ಭಗವಾನ್ ಮಹಾವೀರರು ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಜಗತ್ತಿಗೆ ಸಾರಿದ್ದ ಮಹಾನ್ ಜ್ಞಾನಿ’ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು. ತಾಲೂಕು ಜೈನ ಸಮಾಜದ ವತಿಯಿಂದ ಸೋಮವಾರ ಕಳಗೊಂಡ ಗ್ರಾಮದಲ್ಲಿ ಮಹಾವೀರ ತೀರ್ಥಂಕರರ  ಜಯಂತಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 

‘ಮಹಾರಾಜರಾಗಿದ್ದ ವ್ಯಕ್ತಿ, ತ್ಯಾಗಮಯಿಯಾಗಿ ಜೀವನದ ಪರಮೋಚ್ಚ ಮೌಲ್ಯಗಳನ್ನು ಸಮಾಜಕ್ಕೆ ನೀಡಿದರು. ತಮ್ಮ 30ನೇ ವಯಸ್ಸಿನಲ್ಲಿ ಸಂಸಾರ ಸುಖ ತ್ಯಜಿಸಿ ಸನ್ಯಾಸಿಯಾದ ಅವರು 12 ವರ್ಷ ಕಠಿಣ ತಪಸ್ಸು ಮಾಡಿದರು. ನಂತರ ಅವರಿಗೆ ಪರಿಪೂರ್ಣ ಜ್ಞಾನ ಪ್ರಾಪ್ತಿಯಾಗಿತ್ತು. ಇಂದ್ರಿಯಗಳನ್ನು ಗೆದ್ದಿದ್ದರಿಂದ ಅವರನ್ನು ಜಿನ ಮತ್ತು ಮಹಾವೀರ ಎಂದು ಕರೆಯಲಾಗುತ್ತದೆ’ ಎಂದರು.

ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ ಮಹಾವೀರರು ‘ಆಸ್ತಿ ಮಾಡುವುದಕ್ಕಿಂತ ನಮ್ಮ ಮಕ್ಕಳನ್ನೇ ಸಮಾಜದ ಆಸ್ತಿ ಮಾಡುವಂತೆ ತಿಳಿಸಿ ಹೋದ ಇವರೇ ಸಮಾಜಕ್ಕೆ ಒಂದು ಸಂದೇಶವಾಗಿದ್ದಾರೆ. ಜೈನ ಸಮಾಜಕ್ಕೆ ಕೇಳಿದ್ದನ್ನು ಕೊಡುವಂತಹ ಶಕ್ತಿ ಇದ್ದು, ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ’ ಎಂದು ತಿಳಿಸಿದರು.ಮಹಾವೀರ ತೀರ್ಥಂಕರರ ಭಾವಚಿತ್ರವನ್ನು ಜೈನಮಂದಿರದಿಂದ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಸಮಾಜದ ಎಲ್ಲ ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಗಣ್ಯವರ್ತಕರಾದ ಆರ್ ಜಿ ಪಾಟೀಲ್‌. ತಾಲೂಕು ಅಧ್ಯಕ್ಷ ದಾನಪ್ಪ ಚೂರಿ. ತಾಲೂಕು ಗ್ಯಾರಂಟಿ ಅಧ್ಯಕ್ಷ ಶಂಭನಗೌಡ ಪಾಟೀಲ. ಚನ್ನಬಸಪ್ಪ ಹುಲ್ಲತ್ತಿ. ಜೈನ ಸಮುದಾಯದ ತಾಲೂಕು ಅಧ್ಯಕ್ಷ ರಾಮಣ್ಣ ಮಾಸಣಗಿ. ಜಿಲ್ಲಾ ಉಪಾಧ್ಯಕ್ಷ ಶಿವ ರಾಯಪ್ಪ ಅಪ್ಪಣ್ಣನವರ್‌. ಹೈಕೋರ್ಟ್‌ ನ್ಯಾಯವಾದಿ ನಾಗರಾಜ್ ಅಪ್ಪಣ್ಣನವರ್‌. ಶಾಂತಕುಮಾರ ಕಡೂರ.ಶ್ರೇಣಿಕರಾಜ ಯಳವತ್ತಿ.ಜಯಪ್ಪ ಕಡೂರ.ಅಣ್ಣಪ್ಪ ಜೈನರ.ಮಹೇಶ ಜೈನರ.ಗುಣಪಾಲ ತವನಪ್ಪನವರ.ಸಂಜಿವ ದುಂಡಶಿ.ಮಹಾವೀರ ಕಾಡಣ್ಣನವರ.ಬಾಹುಬಲಿ ಜೈನರ.ಜಯಪ್ಪ ಮಾಸಣಗಿ.ಮಹಾವೀರ​‍್ಪ ಮಾಸಣಗಿ.ರಮೇಶ ಜಿವಣ್ಣನವರ.ರಮೇಶ ಬಿದರಗೇರಿ. ಹಾಗೂ ತಾಲೂಕಿನ ಎಲ್ಲಾ ಸಮಾಜದವರು ಉಪಸ್ಥಿತರಿದ್ದರು