ಮಹಾವೀರ ಜಯಂತಿ ಕಾರ್ಯಕ್ರಮ

ಮಹಾವೀರ ಜಯಂತಿ ಕಾರ್ಯಕ್ರಮ  Mahavir Jayanti program

ಲೋಕದರ್ಶನ ವರದಿ 

ಜಮಖಂಡಿ 02: ಜೈನ ಧರ್ಮದ 24ನೇ ತೀಥಂರ್ಕರರಾದ ಮಹಾವೀರರು ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಬೋಧಿಸಿದವರು ಅವರು ಬದುಕು ಮತ್ತು ಬದುಕಲು ಬಿಡು ಎಂಬ ಸರ್ವಕಾಲಿಕ ಸಂದೇಶವನ್ನು ಸಾರಿದರು ಎಂದು ತಹಸೀಲ್ದಾರ ಅನೀಲ ಬಡಿಗೇರ ಹೇಳಿದರು. 

ನಗರದ ತಾಲೂಕಾಡಳಿತ ಸಭಾ ಭವನದಲ್ಲಿ ನಡೆದ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾವೀರರು ತಮ್ಮ ಜೀವನ ಕಾಲದ 30ನೇ ವಯಸ್ಸಿನಲ್ಲಿ ಸಂಸಾರ ಮತ್ತು ರಾಜ್ಯವನ್ನು ತ್ಯಜಿಸಿ ಸನ್ಯಾಸಿಯಾದರು. ಸುಮಾರು 12 ವರ್ಷಗಳ ಕಾಲ ತಪಸ್ಸು ಆಚರಿಸಿ ಕೈವಲ್ಯ ಜ್ಞಾನ ಪಡೆದರು. ಅವರ ತೋರಿಸಿದ ಮಾರ್ಗದಲ್ಲಿ ನಡೆದು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಅಹಿಂಸಾ ಪರಮೋಧರ್ಮ ಎಂಬಂತೆ ಎಲ್ಲ ಪ್ರಾಣಿಗಳ ಮೇಲೆ ದಯೆ ಇರಬೇಕು ಎಂದರು. 

ಸಮಾಜದ ಮುಖಂಡ ವರ್ಧಮಾನ ಮಹಾವೀರರ ಕುರಿತು ಮಾತನಾಡಿ, ಮೋಕ್ಷ ಪಡೆಯಲು ಸಮ್ಯಕ ದರ್ಶನ, ಜ್ಞಾನ, ಚಾರಿತ್ಯ್ರ ಹೊಂದಿರಬೇಕೆಂಬ ತತ್ವವನ್ನು ಬೋದಿಸಿದರು. ಅವರು ತೋರಿಸಿದ ಮಾರ್ಗದಲ್ಲಿ ನಡೆದು ಜೀವನ ಸಾರ್ಥಕ ಪಡಿಸಿಕೊಳ್ಳ ಬೇಕು ಎಂದರು. 

ಮುಖಂಡ ದಯಾನಂದ ಶಿರಗಾರ, ರಾಜು ಕಡೊಲಿ, ಪಿ.ಪಿ.ನಂದಗಾಂವ, ವರ್ಧಮಾನ ಯಲಗುದ್ರಿ, ಚಂದ್ರಗುಪ್ತ ಬೆಳಗಲಿ, ಸುರೇಶ ನ್ಯಾಮಗೌಡ, ಮಯೂರ ಓಸ್ವಾಲ, ಆರ್‌.ಪಿ.ನ್ಯಾಮಗೌಡ, ಪದ್ದು ಅಕ್ಕಿವಾಟ, ಭರತೇಶ ಪಾಟೀಲ, ಸೀತಲ ನ್ಯಾಮಗೌಡ, ಬಸವರಾಜ ಆಲಗೂರ, ವಿನಯ ಸೇರಿದಂತೆ ಅನೇಕರು ಇದ್ದರು.