ಹಡಗಲಿಯಲ್ಲಿ ಮಹಾವೀರ ಜಯಂತಿ, ಮೆರವಣಿಗೆ
Mahavir Jayanti, procession on a boat
ಲೋಕದರ್ಶನ ವರದಿ
ಹೂವಿನ ಹಡಗಲಿ 30: ಭಗವಾನ್ ಮಹಾವಿ?ರರ ಜಯಂತಿಯನ್ನು ಪಟ್ಟಣದಲ್ಲಿ ಜೈನ ಸಮುದಾಯದಿಂದ ಅದ್ದೂರಿಯಾಗಿ ಆಚರಿಸಲಾಯಿತು.ಜಯಂತಿ ಪ್ರಯುಕ್ತ ಪಟ್ಟಣದ ಮುಖ್ಯ ರಸ್ತೆಗಳ ಮೂಲಕ ಮೆರವಣಿಗೆ ಆರಂಭವಾಗಿ ಜೈನ್ ಮಂದಿರದವರೆಗೆ ಸಾಗಿ ಬಂತು. ಮಹಾವಿ?ರ ಮೂರ್ತಿ ಭವ್ಯ ಮೆರವಣಿಗೆ ಜರುಗಿತು. ಸಮುದಾಯದ ಸಂಪ್ರದಾಯದಂತೆ ನಂತರ ಶ್ರೀ ಪಾರ್ಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ಶ್ರೀ ಮಹಾವೀರತೀರ್ಥಂಕರರಿಗೆ ತೊಟ್ಟಿಲು ತೂಗುವ ಕಾರ್ಯಕ್ರಮ ನಾಮಕರಣ, ಪಂಚಾಮೃತ ಪೂಜೆ ಹೀಗೆ ವಿಧಿ ವಿಧಾನದ ಪೂಜೆಗಳು ನಡೆದವು. ಅಲಂಕೃತ ವಾಹನದಲ್ಲಿ ಭವ್ಯ ಮೂರ್ತಿಯ ಮೆರವಣಿಗೆ ನಡೆಯಿತು. ವಿವಿಧ ಹೂಗಳಿಂದ ಮೂರ್ತಿಯನ್ನು ಸಿಂಗರಿಸಲಾಗಿತ್ತು.
ಸಮುದಾಯ ಜನರು ದಾರಿಯುದ್ದಕ್ಕೂ ವಾದ್ಯಗಳ ಸಂಗೀತಕ್ಕೆ ನೃತ್ಯ ಮಾಡುತ್ತ ಹಾಡುತ್ತ ನಕ್ಕು ನಲಿದು ಭಕ್ತಿಪೂರ್ವಕವಾಗಿ ಮಹಾವಿ?ರರನ್ನು ಸ್ಮರಿಸಿದರು.ಬಹುತೇಕ ಪುರುಷರು ಬಿಳಿ ಬಣ್ಣದ ವಸ್ತ್ರಗಳನ್ನು ಧರಿಸಿದ್ದರು. ಮೆರವಣಿಗೆಯಲ್ಲಿ ತಹಸೀಲ್ದಾರ ಕೆ.ಎಂ. ಗುರುಬಸವರಾಜ್ , ಸಂತೋಷ ಜೈನ ದಿಗಂಬರ ಜೈನ್ ಸಮಾಜ ಅಧ್ಯಕ್ಷ ಎಚ್‌ಎಸ್ ಪ್ರಶಾಂತ್, ಉಪಾಧ್ಯಕ್ಷ ವಿಜಯಕುಮಾರ್ ಜೈನ್, ಅಮಿತ್ ಹೆಚ್ ಜೆ, ಅಜಿತ್ ಎಚ್ ಡಿ, ಎಚ್ ಡಿ ರಾಯಪ್ಪ, ಪ್ರಸನ್ನ, ಡಾ. ಧರ್ಮಣ್ಣ, ಬಾಹುಬಲಿ ಪಾಟೀಲ್, ಪದ್ಮರಾಜ್ ಜೈನ್, ಎಂ. ಭರತೇಶ್, ರತ್ನಾಕರ್ ಜೈನ್, ರಾಜಣ್ಣ, ಪಾಶನಾಥ್ ನಾಗರಾಜ್. ಡಿ, ಜ್ವಾಲಾ ಮಾಲಿನಿ ಮಹಿಳಾ ಸಮಾಜದ ಎಚ್ ಸೀಮಾ, ಪದ್ಮಾವತಿ ಎಂ.ಡಿ, ಚಂಪರಾಯಪ್ಪ,ಹಾಗೂ ಜೈನ ಸಮಾಜದ ಶ್ರಾವಕ ಶ್ರಾವಕೀಯರು ಭಾಗವಹಿಸಿದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 