ಮಹಾತ್ಮಗಾಂಧಿ ಜಗತ್ತಿಗೆ ಶಾಂತಿ ಸಾರಿದ ಸಂತ: ಸಾಹಿತಿ ಮದರಿ ಜ. 31 ಶನಿವಾರ ಬೆಳಿಗ್ಗೆ ಬಲ್ಡೋಟ ವಿಸ್ತರಣೆ ವಿರೋಧಿ ಸಭೆ

ಮಹಾತ್ಮಗಾಂಧಿ ಜಗತ್ತಿಗೆ ಶಾಂತಿ ಸಾರಿದ ಸಂತ: ಸಾಹಿತಿ ಮದರಿ ಜ. 31 ಶನಿವಾರ ಬೆಳಿಗ್ಗೆ ಬಲ್ಡೋಟ ವಿಸ್ತರಣೆ ವಿರೋಧಿ ಸಭೆ Mahatma Gandhi was a saint who preached peace to the world: Sahitya Madari Jan. 31 Saturday morning


ಕೊಪ್ಪಳ: ನಗರಸಭೆ ಆವರಣದ ಬಲ್ಡೋಟ ಕಾರ್ಖಾನೆ ವಿರೋಧಿ 92ನೇ ದಿನದ ಧರಣಿ ಸತ್ಯಾಗ್ರಹದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 68ನೇ ವರ್ಷದ ಹುತಾತ್ಮ ಸ್ಮರಣೆ ದಿನ ಅಚರಿಸಲಾಯಿತು.  ಸಾಹಿತಿ ಎ.ಎಂ. ಮದರಿ ಮಾತನಾಡಿ 'ಇಂದು ಸತ್ಯ, ಅಹಿಂಸೆ ಮತ್ತು ತ್ಯಾಗಮಯ ಜೀವನವನ್ನು ಗೌರವಿಸುವ ದಿನವಾಗಿದೆ. ಬ್ರಿಟಿಷರನ್ನು ದೇಶದಿಂದ ಓಡಿಸಲು ಯಾವುದೇ ಆಯುಧ ಬಳಸಿಲ್ಲ. ಅವರು ಅಹಿಂಸಾ ಮಾರ್ಗದ ಅಸ್ತ್ರ ಬಳಸಿ ಆಂಗ್ಲರ ಎದೆ ನಡುಗಿಸಿದರು. ರಕ್ತಪಾತದಿಂದ ಅಸಂಖ್ಯಾತ ಜನರ ಸಾವುನೋವು ಆಗುವುದನ್ನು ತಪ್ಪಿಸಿದರು. ಇಂತ ಸಂತನ ಹೋರಾಟದ ಮಾರ್ಗ ಜಗತ್ತಿಗೆ ಮಾದರಿಯಾಯಿತು.  ಈ ಮಹಾತ್ಮನ ಹೋರಾಟದ ದಾರಿ ನಮಗೂ ಆದರ್ಶವಾಗಿದೆ. ಈ ಹೋರಾಟವನ್ನು ಅದೇ ಮಾರ್ಗದಲ್ಲಿ ಗೆಲ್ಲೋಣ ಎಂದರು.  

ಇಂದು ಜನವರಿ 30  ಗಾಂಧೀಜಿಯವರ ಹುತಾತ್ಮ ದಿನಾಚರಣೆಯಾಗಿ ಆಚರಿಸಿ, ಅಹಿಂಸಾತ್ಮಕ ಹೋರಾಟಗಾರನಿಗೆ ಭಕ್ತಿಪೂರ್ವಕವಾಗಿ ಸ್ಮರಿಸಿಕೊಳ್ಳುತ್ತಾ  ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ 'ಶನಿವಾರ 31.01.2026ರಂದು ಬೆಳಿಗ್ಗೆ 10:30ಕ್ಕೆ ನಗರದ ಭಾಗ್ಯನಗರ ರೈಲ್ವೆ ಬ್ರಿಡ್ಜ್‌ ಹತ್ತಿರದ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ಸಭೆ ಕರೆಯಲಾಗಿದೆ.  ಈ ವಿಸ್ತ್ರುತ ಸಭೆಗೆ ನಗರದ ಪುರ ಪ್ರಮುಖರು, ಸಂಘ, ಸಂಸ್ಥೆಯ ಪ್ರಮುಖರು, ಸಮಾಜದ ಹಿರಿಯರು ಹಾಗೂ ಬಾಧಿತ 20 ಹಳ್ಳಿಗಳ ಹೋರಾಟದ ಪ್ರಮುಖರನ್ನು ಆಹ್ವಾನಿಸಲಾಗಿದೆ.  

ಬಲ್ಡೋಟ, ಎಂಎಸ್ಪಿಎಲ್, ಕಲ್ಯಾಣಿ ಸ್ಟೀಲ್, ಕಿರ್ಲೊಸ್ಕರ್, ಮುಕುಂದ ಸುಮಿ, ಎಕ್ಸ್‌ ಇಂಡಿಯಾ ಮುಂತಾದ ಕಾರ್ಖಾನೆಗಳ ವಿಸ್ತರಣೆ ವಿರೋಧಿಸುತ್ತಿರುವ ಧರಣಿ ಸತ್ಯಾಗ್ರಹ ಫೆಬ್ರವರಿ 7ನೇ ತಾರೀಖಿನಂದು 100ನೇ ದಿನ ಕ್ರಮಿಸುತ್ತದೆ. ಅಂದು ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಗದುಗಿನ ತೊಜಠದ ಶ್ರೀ ಸಿದ್ಧರಾಮ ಸ್ವಾಮಿಗಳು, ಕೊಪ್ಪಳ ಜಿಲ್ಲೆಯ ಮೈನಳ್ಳಿ ಸ್ವಾಮಿಗಳು, ಸಾಹಿತಿ, ಚಿಂತಕರಾದ ಧಾರವಾಡದ ರಮಜಾನ್ ದರ್ಗಾ, ಬೆಂಗಳೂರು ನಿವಾಸಿ ಖ್ಯಾತ ರಂಗ ನಿರ್ದೇಶಕ ಸೂರ್ಯಕಾಂತ ಗುಣಕೀಮಠ, 

ಧಾರವಾಡದ ಲೇಖಕರಾದ ಅಸ್ಲಂ ದರ್ಗಾ ರವರು ಆಗಮಿಸುತ್ತಾರೆ. ಕಾರ್ಯಕ್ರಮದ ಯಶಸ್ವಿಗಾಗಿ ಅದರ  ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಕೊಪ್ಪಳ ಭಾಗ್ಯನಗರದ ಮತ್ತು ಬಾಧಿತ ಹಳ್ಳಿಯ ಪ್ರಮುಖರು ಈ ಸಭೆಗೆ ಆಗಮಿಸಬೇಕೆಂದು ಕೋರಿದರು.  

ಇಂದಿನ ಧರಣಿಯಲ್ಲಿ ಸಂಚಾಲಕರಾದ ಡಿ.ಎಂ.ಬಡಿಗೇರ, ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಎಸ್‌.ಬಿ.ರಾಜೂರು, ಶಂಭುಲಿಂಗಪ್ಪ ಹರಗೇರಿ, ಬಿ.ಜಿ.ಕರಿಗಾರ, ಸಿ.ಬಿ.ಪಾಟೀಲ್, ಮಹಾದೇವಪ್ಪ ಮಾವಿನಮಾಡು, ಮಂಜುನಾಥ ಕವಲೂರು, ಭೀಮಪ್ಪ ಯಲಬುರ್ಗಾ, ರತ್ನಮ್ಮ ದೊಡ್ಡಮನಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಂಗಳೇಶ ರಾಠೋಡ್, ಯಮನೂರ​‍್ಪ ಹಾಲಳ್ಳಿ ಬಸಾಪುರ, ಮಖ್ಬುಲ್ ರಾಯಚೂರು, ಶಿವಪ್ಪ ಜಲ್ಲಿ ಇತರರು ಪಾಲ್ಗೊಂಡಿದ್ದರು.