ರಾಕ್ ಗಾರ್ಡನಲ್ಲಿ ಮಹಷರ್ಿ ವಾಲ್ಮೀಕಿ ಜಯಂತಿ
ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ನ ರಾಜ್ಕುಮಾರ್
ಸರ್ಕಲ್ನಲ್ಲಿ ನಡೆದ ವಾಲ್ಮೀಕಿ ಜಯಂತಿಯನ್ನು
ಬುಧವಾರ ಉದ್ಘಾಟಿಸಿ ಮಾತನಾಡಿದ ನಾರದಮುನಿಯವರು ಹೇಳಿಕೊಟ್ಟ ತಪ್ಪಾದ 'ಮರ,ಮರ,ಮರ'
ಎಂಬ ಮಂತ್ರವನ್ನು ಪಠಿಸುತ್ತ ದೇವರಿಂದ ವಾಲ್ಮೀಕಿ ಎಂಬ ಹೆಸರು ಪಡೆದ
ರತ್ನಾಕರ(ವಾಲ್ಮೀಕಿ ಮೂಲ ಹೆಸರು) ಜೀವನ
ನಿಜಕ್ಕೂ ಆದರ್ಶಪ್ರಾಯವಾಗಿದೆ ಎಂದು ನುಡಿದರು.
ಪಾಪದ ಕೆಲಸ ಯಾವುದೇ
ಆಗಿರಲಿ ಅದರ ಹೊಣೆ ಮಾಡಿದವನದ್ದೆ
ಆಗಿರುತ್ತದೆ ಹೊರತು, ಅದನ್ನು ಕುಟುಂಬ ಸದಸ್ಯರು ಹೊರಲಾರರು ಎಂಬ ಸತ್ಯವನ್ನು ತೋರಿಸಿಕೊಟ್ಟ
ಮಹಷರ್ಿ
ನಾರದಮುನಿಯವರ ಸಂದೇಶ ಅರ್ಥಪೂರ್ಣವಾಗಿದೆ ಎಂದ ಅಲ್ತಾಫ ಯತ್ನಳ್ಳಿ,
ಇದಕ್ಕೆ ಕಾಡಿನ ಮಾರ್ಗದಲ್ಲಿ ಹೋಗುತ್ತಿದ್ದ ಜನರನ್ನು ದೋಚುತ್ತಿದ್ದ ರತ್ನಾಕರನ ಜೀವನವೇ ಸಾಕ್ಷಿ ಎಂದರು. ಕಲಾವಿದ ಸಿ.ಬಿ.ಹಿರೇಮಠ
ಮಾತನಾಡಿ, ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳಬಹುದು ಎಂದು ವಾಲ್ಮೀಕಿಯವರು ತೋರಿಸಿಕೊಟ್ಟಿದ್ದಾರೆ.
ಇದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಕಿಯರಾದ ಶ್ರುತಿ ಪೊಲೀಸ್ಗೌಡರ,ಜಯಶ್ರೀ ಹಿರೇಮಠ, ಮಂಜುಳಾ ಹಾವಣಗಿ, ಕಲಾವಿದರಾದ ಪ್ರವೀಣ ಗಾಯ್ಕರ್, ನಾಗರಾಜ ಕಮ್ಮಾರ, ಗಂಗಾಧರ ಹಿರೇಮಠ ಮತ್ತಿತರರು ಭಾಗವಹಿಸಿದ್ದರು.
ಶಾಲಾ ವಿದ್ಯಾಥರ್ಿಗಳು ವಾಲ್ಮೀಕಿ
ಶಿಲ್ಪಕ್ಕೆ ಪೂಜೆ ಮಾಡಿದರು.ದಿವ್ಯಾ
ಜಕ್ಕಣ್ಣನವರ ಸ್ವಾಗತಿಸಿದರು. ಅಕ್ಕಮಹಾದೇವಿ ಹಿರೇಮಠ ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 