ಗ್ರಾಮದ ಮುಖಂಡರಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
Maharishi Valmiki Jayanti celebrated by village leaders
ಲೋಕದರ್ಶನ ವರದಿ
ಗ್ರಾಮದ ಮುಖಂಡರಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಯಮಕ್ಕನಮರಡಿ 07: ಸಮೀಪದ ಆರ್ ಸಿ ಯಮಕ್ಕನಮರಡಿ ಗ್ರಾಮದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮದ ಮುಖಂಡರು ಹಾಗೂ ಯುವ ದೂರಿಣರು ಆದ ರವೀಂದ್ರ ಜಿಂದ್ರಾಳಿ ಅವರು ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮದ ಮದಕರಿ ನಾಯಕ ವಾಲ್ಮೀಕಿ ಯುವಕ ಮಂಡಲದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಗ್ರಾಮದ ಮಾಜಿ ತಾಪಂ ಅಧ್ಯಕ್ಷರಾದ ದಸ್ತಗಿರ್ ಬಸಾಪೂರಿ ರಾಜು ಹಿರೇಮಠ ಸೇರಿದಂತೆ ಮಹಿಳಾಮಂಡಲದ ಸದಸ್ಯರು ಹಾಗೂ ವಾಲ್ಮೀಕಿ ಸಮುದಾಯದ ಸರ್ವ ಮುಖಂಡರು ಯುವಕಮಂಡಲದ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದು ಪ್ರಾಸ್ತಾವಿಕವಾಗಿ ಪತ್ರಕರ್ತರಾದ ಗೋಪಾಲ ಚೆಪ್ಪನಿ ಮಾತನಾಡಿದರು. ಅದರಂತೆ ಯುವ ಮುಖಂಡರಾದ ರವೀಂದ್ರ ಜಿನರಾಳಿ ಮಾತನಾಡುತ್ತಾ ಪ್ರತಿ ವರ್ಷವೂ ಉತ್ಸಾಹಪೂರ್ವಕವಾಗಿ ಜಯಂತಿಯನ್ನು ಆಚರಿಸಲು ಯುವಕರು ಮುಂದೆ ಬರಬೇಕೆಂದು ಹೇಳಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 