ಮಹರ್ಷಿ ಭಗೀರಥ ಉಪ್ಪಾರ ಸಮಾಜ ಜಯಂತ್ಯೋತ್ಸವ ಆಚರಣೆ
Maharishi Bhagiratha Uppara Samaj Jayanti Celebration
ಲೋಕದರ್ಶನ ವರದಿ
ಕಂಪ್ಲಿ 23 : ಉಪ್ಪಾರ ಸಮಾಜದ ಅಭಿವೃದ್ಧಿ ದೃಷ್ಠಿಯಿಂದ ಪೋಷಕರು ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ಕೊಡಿಸಿದಾಗ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು. ಪಟ್ಟಣದ ಕೆರೆ ಬಳಿಯ ಐತಿಹಾಸಿ ಸೋಮೇಶ್ವರ ದೇವಸ್ಥಾನಕ್ಕೆ ತೆರಳುವ ಮುಖ್ಯರಸ್ತೆಯಲ್ಲಿರುವ ಹಳೇ ಮಹರ್ಷಿ ಭಗೀರಥ ವೃತ್ತದಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ಭಗೀರಥ ಜಯಂತ್ಯೋತ್ಸವ ಆಚರಣೆ ಜೊತೆಗೆ ನಾಮಫಲಕ ಉದ್ಘಾಟಿಸಿ ಮಾತನಾಡಿ, ಉಪ್ಪಾರ ಸಮಾಜವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದೆ. ಉಪ್ಪಾರ ಸಮುದಾಯವರು ಶ್ರಮಜೀವಿಗಳಾಗಿದ್ದಾರೆ.
ಹಸಿದ ಸಮುದಾಯಗಳಿಗೆ ಸೌಲಭ್ಯಗಳನ್ನು ಕಲ್ಪಿಸಿದರೆ ಹೊಟ್ಟೆ ತುಂಬಲು ಸಾಧ್ಯ. ಗ್ರಾಮೀಣ ಭಾಗದ ಉಪ್ಪಾರ ಸಮಾಜದವರು ಸೇರಿಕೊಂಡು ತಾಲೂಕು ಕೇಂದ್ರದ ಪಟ್ಟಣದಲ್ಲಿ ಜಯಂತ್ಯೋತ್ಸವ ಮಾಡಿದರೆ ಒಳ್ಳೆಯ ಸಂದೇಶ ರವಾನಿಸಲು ಸಾಧ್ಯ. ಈಗಾಗಲೇ ಕುರುಗೋಡಿನಲ್ಲಿ ಉಪ್ಪಾರ ಸಮುದಾಯ ಭವನಕ್ಕೆ ಸುಮಾರು 1 ಕೋಟಿ ಅನುದಾನ ನೀಡಲಾಗಿದೆ. ಕಂಪ್ಲಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗದ ಸಮಸ್ಯೆ ಎದುರಾಗಿದೆ. ಮುಂದಿನ ದಿನದಲ್ಲಿ ಜಾಗ ಗುರುತಿಸಿ, ಕೋಟ್ಯಾಂತರ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಿಕೊಡುವ ಭರವಸೆ ನೀಡಿದರು.
ತಾಲೂಕು ಭಗೀರಥ ಉಪ್ಪಾರ ಸಮಾಜದ ಅಧ್ಯಕ್ಷ ಯು. ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜವು ಎಲ್ಲಾ ರಂಗದಲ್ಲಿ ಹಿಂದುಳಿದ್ದು, ಸರ್ಕಾರ ವಿಶೇಷ ಯೋಜನೆಗಳನ್ನು ಪ್ರತ್ಯೋಕವಾಗಿ ಜಾರಿಗೆ ತರುವ ಜೊತೆಗೆ ಮಾನ್ಯ ಸ್ಥಳೀಯ ಶಾಸಕ ಗಣೇಶ ಇವರು ಪಟ್ಟಣದಲ್ಲಿ ನಿವೇಶನ ಜೊತೆಗೆ ಸಮುದಾಯ ಭವನ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಮಾಜದ ಉಪಾಧ್ಯಕ್ಷ ಯು.ವೆಂಕಟೇಶ, ಪ್ರಧಾನ ಕಾರ್ಯದರ್ಶಿ ಕೆ.ಗೋವಿಂದಪ್ಪ, ಜಿಂಟಿ ಕಾರ್ಯದರ್ಶಿ ಯು.ಬಸವರಾಜ, ಉಪಾನ್ಯಾಸಕ ರಾಘವೇಂದ್ರ, ಮುಖಂಡರಾದ ಗೋಪಾಲ, ವೆಂಕಟಪತಿ, ಜಾನೂರು ಸುರೇಶ, ಯು.ತಿಮ್ಮಪ್ಪ, ಯು.ಮಹೇಶ, ಯು.ಮಂಜುನಾಥ, ಗ್ಯಾನಪ್ಪ, ಪೂಜಾರಿ ಮಂಜುನಾಥ, ರಾಮಾಂಜಿನಿ, ನಾಗನಹಳ್ಳಿ ರಮೇಶ, ಕೆ.ಮಂಜುನಾಥ ಇದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 