ಕಪ್ಪಲಗುದ್ದಿ 23ರಂದು ಮಹರ್ಷಿ ಭಗೀರಥ ದೇವರ ಜಯಂತ್ಯೋತ್ಸವ
Maharishi Bhagirath's birthday celebration on Kappalaguddi 23rd
ಪಾಲಬಾವಿ 22 : ರಾಯಬಾಗ ತಾಲೂಕು ಕಪ್ಪಲಗುದ್ದಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಗುರುವಾರ ದಿ.23ರಂದು ಮುಂಜಾನೆ 11 ಗಂಟೆಗೆ ರಾಜಋಷಿ ಮಹರ್ಷಿ ಭಗೀರಥ ಜಯಂತ್ಯೋತ್ಸವವು ಸಡಗರ ಸಂಭ್ರಮದಿಂದ ಜರುಗುವುದು. ಗುರುವಾರ ದಿ.23ರಂದು ಬೆಳಗ್ಗೆ 6 ಗಂಟೆಗೆ ಮಹರ್ಷಿ ಭಗೀರಥ ದೇವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಜಲಾಭಿಷೇಕ, ಧೂಪ, ದೀಪ, ನೈವೇದ್ಯ, ವಸ್ತ್ರಧಾರಣೆ, ವಿಶೇಷ ಪೂಜೆ ನೆರವೇರುವುದು. ನಂತರ ಸುಮಗಲೆಯರಿಂದ ಪೂರ್ಣಕುಂಭ, ಆರತಿಯೊಂದಿಗೆ ವಿವಿಧ ವಾಧ್ಯ ಮೇಳದೊಂದಿಗೆ ಭವ್ಯ ಮೆರವಣಿಗೆ ಮೂಲಕ ಕಪ್ಪಲಗುದ್ದಿ ಗ್ರಾಮಕ್ಕೆ ್ರ್ರಥಮ ಬಾರಿಗೆ ಆಗಮಿಸುತ್ತಿರುವ ಪರಮಪೂಜ್ಯ ಶಿಲಾಪುರಿ ಮಹಾಸಂಸ್ಥಾನ ಮಠ, ಭಗಿರಥ ಪೀಠದ ಜಗದ್ಗುರು ಡಾ: ಪುರುಷೋತ್ತಮಾನಂದಪುರಿ ಮಹಾಸ್ವಾಮೀಗಳನ್ನು ಸೇರಿದಂತೆ ಎಲ್ಲ ಪೂಜ್ಯ ಮಹಾತ್ಮರನ್ನು ಬರಮಾಡಿಕೊಳ್ಳುವುದು.
ಮುಂಜಾನೆ 11ಗಂಟೆಗೆ ದೇವಸ್ಥಾನದ ಮುಂಭಾಗದ ಪ್ರಾಂಗಣದಲ್ಲಿ ಹಾಕಲಾದ ಭವ್ಯವೇದಿಕೆಯಲ್ಲಿ ಮಹಾತ್ಮರಿಂದ ಪ್ರವಚನ ಕಾರ್ಯಕ್ರಮವು ಜರುಗುವುದು. ಹೊಸದುರ್ಗ ಚಿನ್ಮೂಲದ್ರಿ ಶಿಲಾಪುರಿ ಮಹಾಸಂಸ್ಥಾನ ಮಠ, ಭಗಿರಥ ಪೀಠದ ಜಗದ್ಗುರು ಡಾ: ಪುರುಷೋತ್ತಮಾನಂದಪುರಿ ಮಹಾ ಸ್ವಾಮೀಗಳು ದಿವ್ಯ ಸಾನಿಧ್ಯವಹಿಸುವರು. ಬಬಲಾದಿ ಮೂಲ ಸಂಸ್ಥಾನ ಮಠದ ಪೀಠಾಧಿಪತಿ ವೇದಮೂರ್ತಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಸಾನಿಧ್ಯವಹಿಸುವರು. ಇಂಚಗೇರಿ ಮಠದ ಸದ್ಗುರು ಸಮರ್ಥ ಶಶಿಕಾಂತ ಗುರೂಜಿ ಸನ್ನಿದಾನವಹಿಸುವರು. ಕಟಕಬಾವಿ ಧರಿದೇವರ ಪುಣ್ಯಾಶ್ರಮದ ಪೀಠಾಧಿಪತಿ ಅಭಿನವ ಧರೇಶ್ವರ ಮಹಾಸ್ವಾಮೀಜಿ, ಸದಲಗಾದ ಧರಿದೇವರ ಮಹಾಸ್ವಾಮೀಜಿ, ಉಪ್ಪಾರಟ್ಟಿ ಸಿದ್ದಾರೂಢ ಮಠದ ಪೀಠಾಧಿಪತಿ ನಾಗೇಂದ್ರ ಮಹಾಸ್ವಾಮೀಜಿ, ಚಿಕ್ಕಲಕಿ ಕ್ರಾಸ್ ಭಗೀರಥ ತಪೋವನದ ಪೀಠಾಧಿಪತಿ ಶಿವಾನಂದ ಮಹಾಸ್ವಾಮೀಜಿ, ಕಪ್ಪಲಗುದ್ದಿ ಗುರುಮಠದ ಪಂಚಾಕ್ಷರಿ ಮಹಾಸ್ವಾಮೀಜಿ ಉಪಸ್ಥಿತರಿದ್ದು ಭಕ್ತರನ್ನುದ್ದೇಶಿಸಿ ಪ್ರವಚನ ನೀಡುವರು.
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಬರಮಣ್ಣ ಉಪ್ಪಾರ, ರಾಯಬಾಗ ತಾಲೂಕು ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ಪ್ರಕಾಶ ಹುಕ್ಕೇರಿ ಸೇರಿದಂತೆ ಅನೇಕ ಮಹನೀಯರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಮಧ್ಯಾಹ್ನ 1 ಗಂಟೆಗೆ ದಾಸೋಹದ ಮಹಾಮನೆಯಲ್ಲಿ ಅನ್ನಸಂರೆ್ಣ ನೆರವೇರುವುದು. ರಾತ್ರಿ 9ಗಂಟೆಗೆ ಮೂಡಲಗಿಯ ಸ್ವರ ಸಂಗಮ ಮೆಲೋಡಿಸ್ ಆರ್ಕೆಸ್ಟ್ರಾ ಇವರ ಸಾರಥ್ಯದಲ್ಲಿ ಹಾಸ್ಯ ರಸಮಂಜರಿ ಕಾರ್ಯಕ್ರಮವು ಜರಗುವುದೆಂದು ಭಗೀರಥ ಸೇವಾ ಸಮಿತಿಯವರು ಪ್ರಕಟಿನಲ್ಲಿ ತಿಳಿಸಿದ್ದಾರೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 