ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
Maharashtra investor's batting for Nilannavar: Video of anger against police goes viral
ಬೆಳಗಾವಿ : ಬಹುಕೋಟಿ ವಂಚನೆ ಆರೋಪದಿಂದ ಬಂಧನವಾಗಿರುವ ಶಿವಾನಂದ ನೀಲಣ್ಣವರ ಯಾರಿಗೆ ಮೋಸ ಮಾಡಿಲ್ಲ. ಲಾಕ್ ಡೌನ್ ದಿಂದಲೂ ಎಲ್ಲ ಹೂಡಿಕೆದಾರರಿಗೆ ಅವರು ದುಡ್ಡು ಸರಿಯಾಗಿ ಮುಟ್ಟಿಸುವ ಕಾರ್ಯ ಮಾಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಎಲ್ಲ ಜನರನ್ನು ಜೊತೆ ಕರೆಕೊಂಡು ಹೋಗುತ್ತಿದ್ದಾರೆ ಎಂದು ಹೇಳುವ ಮೂಲಕ ಶಿವಾನಂದ ನೀಲಣ್ಣವರ ಪರವಾಗಿ ಬ್ಯಾಟ ಬಿಸಿರುವ ಮಹಾರಾಷ್ಟ್ರ ಮಾಜಿ ಸೈನಿಕನ ಹೆಸರಲ್ಲಿ ಬೆಳಗಾವಿ ಪೊಲೀಸರ ಹಾಗೂ ಕರ್ನಾಟಕ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ಒಂದು ವೈರಲ್ ಮಾಡಿದ್ದು, ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಮಹಾರಾಷ್ಟ್ರದ ಠಾಣೆ ಜಿಲ್ಲೆಯ ರೋಹಿತ್ ಅಗ್ರವಾಲ್ ಎಂಬುವ ಹೆಸರಿನಲ್ಲಿ ವೈರಲ್ ಆಗಿರುವ ಈ ಆಡಿಯೋ ಹಿಂದಿ ಭಾಷೆಯಲ್ಲಿ ಮಾತನಾಡಿದ್ದು, ತಾನೋಬ್ಬ ಮಾಜಿ ಸೈನಕನಾಗಿ ಶಿವಂ ಅಸೋಸಿಯೇಟ್ ನಲ್ಲಿ ನಾವು ಹೂಡಿಕೆ ಮಾಡಿದಾಗಿನಿಂದ ಎಲ್ಲರಿಗೆ ಶಿವಾನಂದ ನೀಲಣ್ಣವರ ಅವರು ಹಣ ಯಾರ ಜೊತೆ ಯಾವ ರೀತಿಯ ತಪ್ಪು ಮಾಡಿಲ್ಲ. ಪ್ರತಿ ಬಡವರನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
ನಾನೊಬ್ಬ ಮಾಜಿಸೈನಿಕನಾಗಿ ಹಣ ಹೂಡಿಕೆ ಮಾಡಿದ್ದೇನೆ. ಆದರೆ ಲಾಕ್ ಡೌನ್ ದಲ್ಲೂ ಕೂಡಾ ನಮಗೆ ಹಣ ನೀಡಿದ್ದಾರೆ. ಈಗಲು ಸತತವಾಗಿ ಹಣ ನೀಡಿದ್ದಾರೆ. ಅವರ ತಂಡ ಮುಂದೆ ವರೆಯುತ್ತಿದೆ. ಅವರ ಮೇಲೆ ಜನ ವಿಶ್ವಾಸ ಇಟ್ಟಿದ್ದಾರೆ. ಯಾರು ಹೂಡಿಕೆದಾರ ದೂರು ನೀಡಿದರೆ ಅಥವಾ ಖುದ್ದಾಗಿ ಎಫ್ ಐ ಆರ್ ಮಾಡಿದರೆ ನೀವು ಬಂಧನದಂತ ಕಾರ್ಯ ಮಾಡಬಹುದಿತ್ತು.
ಆದರೆ ಈಗ ನಡೆದಿರುವದು ರಾಜಕೀಯ ಗೀಮಿಕ್ಕಾಗಿದೆ. ಇದು ಪೋಲೀಸ ಅಥವಾ ರಾಜಕೀಯ ಜನರಿಂದ ಇದೆಲ್ಲಾ ನಡಿತಾ ಇದೆ ಎಂದು ವೈರಲ್ ಆದ ಅಡಿಯೋದಲ್ಲಿ ದೂರಿದ್ದಾನೆ.
ಸರಕಾರಕ್ಕೆ ಆಗಲಿ ಅಥವಾ ಯಾರಿಗಾದರು ಹೂಡಿಕೆದಾರರಿಗೆ ವಂಚನೆ ಮಾಡಿದರೆ ಈ ರೀತಿ ಕ್ರಮ ಕೈಗೊಳ್ಳಬಹುದು. ಆದರೆ ಪೊಲೀ ಇಲಾಖೆ ಸರಕಾರದ ಮುಷ್ಟಿಯಲ್ಲಿದೆ. ಹೀಗಾಗಿ ಈ ರೀತಿ ಕ್ರಮ ಮಾಡುತ್ತಿದೆ ಎಂದು ಅಡಿಯೋ ದಲ್ಲಿ ಹೇಳಿದ್ದಾನೆ.
ಈ ರೀತಿ ದೂರು ಯಾವ ಜನರಿಂದ ಬಂದಿಲ್ಲ. ಬೆಳೆಯುತ್ತಿರುವ ವ್ಯವಸ್ಥೆಯನ್ನು ಕಡಿಮೆ ಮಾಡುವ ಉದ್ದೇಶ ಇದಾಗಿದೆ ಎಂದಿದ್ದಾರೆ. ಅಲ್ಲದೆ ಕಾಂಗ್ರೆಸ್ ಸರಕಾರದ ಅಧಿಪತನ ಎಂದು ದೂರಿರುವ ಮಾಜಿ ಸೈನಿಕ ಎನ್ನುವ ರೋಹಿತ್ ಅಗ್ರವಾಲ್ ತಮ್ಮ ನಂಬರ ನೀಡಿ ಇದಕ್ಕೆ ಸಂಪರ್ಕ ಮಾಡಿ, ರಿಪ್ಲಾಯ್ ಮಾಡಿ ನಿಮಗೆ 1 ಸಾವಿರ ಅಲ್ಲ 10 ಸಾವಿರ ಜನ ಮಹಾರಾಷ್ಟ್ರ ದಿಂದ ರಿಪ್ಲಾಯ್ ಮಾಡುತ್ತಾರೆ. ನಿಮ್ಮ ರಾಜ್ಯದಲ್ಲೂ ಮಾಡೇ ಮಾಡುತ್ತಾರೆ ಎಂದು ವೈರಲ್ ಆದ ಅಡಿಯೋದಲ್ಲಿ ಹೇಳಿದ್ದಾರೆ.
ಅಲ್ಲದೆ ಕೊನೆಯಲ್ಲಿ ಜೈಹಿಂದ್, ಜೈ ಅಸೋಸಿಯೇಟ್, ಓಂ ನಮಃ ಶಿವಾಯ ಎಂದಿದ್ದಾರೆ.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 