ಮಹಾರಾಷ್ಟ್ರ: ಒಂದೇ ದಿನ 67 ಪೊಲೀಸರಿಗೆ ಕರೋನ ಸೋಂಕು

ಮುಂಬೈ ಜೂನ್ 30 ಮಹಾರಾಷ್ಟ್ರದಲ್ಲಿ  ಕೊರೊನಾ ಸೋಂಕು ದಿನೇ, ದಿನೇ ವ್ಯಾಪಕವಾಗುತ್ತಿದೆ. ಈನಡುವೆ  ಖಾಕಿಪಡೆಯನ್ನು ಮಾರಕ ಸೋಂಕು ಬೆಂಬಿಡದೇ ಕಾಡುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 67 ಪೊಲೀಸರಿಗೆ ಸೋಂಕು ತಗುಲಿದೆ.ಒಂದೇ ದಿನ 67 ಪೊಲೀಸರಿಲ್ಲಿ ಸೋಂಕು ಕಾಣಿಸಿಕೊಂಡಿದೆ  ಈವರೆಗೆ 4810 ಮಂದಿ ಪೊಲೀಸರಲ್ಲಿ ಸೋಂಕು ಪತ್ತೆಯಾಗಿದೆ.  ಎಲ್ಲರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.  ಮಹಾರಾಷ್ಟ್ರದಲ್ಲಿ ಕಿಲ್ಲರ್ ಸೋಂಕಿಗೆ ಬಲಿಯಾದ ಪೊಲೀಸರ ಸಂಖ್ಯೆ 59ಕ್ಕೆ ಏರಿಕೆಯಾಗಿದೆ ಎಂದು ಮಹಾರಾಷ್ಟ್ರ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಇನ್ನೊಂದೆಡೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಶರವೇಗದಲ್ಲಿ ಕೊರೊನಾ ಸೋಂಕು ಹಬ್ಬುತ್ತಿದ್ದು, ಸದ್ಯ ಕಂಟೈನ್ ಮೆಂಟ್ ಜೋನ್ ಗಳ ಸಂಖ್ಯೆ 750ಕ್ಕೆ ಏರಿಕೆಯಾಗಿದೆ ಎಂದು ಬೃಹತ್ ಮುಂಬೈ ಮುನ್ಸಿಪಾಲ್ ಕಾರ್ಪೋರೇಷನ್ ಸ್ಪಷ್ಟಪಡಿಸಿದೆ.