ದಿ. 17 ರಂದು ಮಹಾರಾಣಾ ಪ್ರತಾಪಸಿಂಹರ ಜಯಂತ್ಯೋತ್ಸವ ಕಾರ್ಯಕ್ರಮ

ದಿ. 17 ರಂದು ಮಹಾರಾಣಾ ಪ್ರತಾಪಸಿಂಹರ ಜಯಂತ್ಯೋತ್ಸವ ಕಾರ್ಯಕ್ರಮ Maharana Pratap Singh's birth anniversary celebration on the 17th

ಬೆಟಗೇರಿ 13 : ಇಲ್ಲಿಯ ರಜಪೂತ ಸಮಾಜ ಆಶ್ರಯದಲ್ಲಿ ರಾಷ್ಟ್ರ ವೀರ ಪುರುಷ ಮಹಾರಾಣಾ ಪ್ರತಾಪಸಿಂಹರ 486ನೇ ಜಯಂತಿಯನ್ನು ಬಾಲಾಜಿ ರಸ್ತೆಯಲ್ಲಿರುವ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ 17 ರ ಬುಧವಾರ ಮುಂಜಾನೆ 9 ಗಂಟೆಗೆ ಜರುಗಲಿರುವದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಬೆಟಗೇರಿ ರಜಪೂತ ಸಮಾಜದ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಜಿಮ್ಸ್‌ನ ಆರ್ಥೊ ಸರ್ಜನ್ ಡಾ. ಬೀಮಸಿಂಗ್ ವಿ. ಸಮೋರೇಕರ್ ಹಾಗೂ ಧಾರವಾಡದ ಜಿಲ್ಲಾ ಆಸ್ಪತ್ರೆ ಹಿರಿಯ ತಜ್ಞ ವೈದ್ಯರಾದ ಡಾ. ಸಂತೋಷಸಿಂಗ್ ಶಾ. ರಂಗವಾಲೆ ಆಗಮಿಲಿರುವರು. ಮಹಾರಾಣಾ ಪ್ರತಾಪಸಿಂಹರ ಕುರಿತು ನಿವೃತ್ತ ಮುಖ್ಯೋಧ್ಯಾಪಕ ಎಸ್‌.ಎ. ಜಮಾದಾರ ಉಪನ್ಯಾಸ ನೀಡಲಿರುವರು.  

ಅದರಂಗವಾಗಿ ಅಂದು ಮುಂಜಾನೆ 8 ಗಂಟೆಗೆ ಬಾಲಾಜಿ ಮಂದಿರದಲ್ಲಿ ಧ್ವಜಾರೋಹಣ ನಂತರ ಟೆಂಗಿನಕಾಯಿ ಬಜಾರದಲ್ಲಿರುವ ರಾಣಾ ಪ್ರತಾಪ ಸರ್ಕಲ್, ಕೋರ್ಟ ಅಂಡರ್ ಬ್ರಿಡ್ಜದಲ್ಲಿರುವ ಮಹಾರಾಣಾ ಪ್ರತಾಪಸಿಂಹ ಸರ್ಕಲ್‌ಗಳಲ್ಲಿ ಪೂಜೆ ಹಾಗೂ ರಜಪೂತ ಗಲ್ಲಿ ಮಲ್ಲಿಕಾರ್ಜುನ ರಸ್ತೆಯಲ್ಲಿ ಮಹಾರಾಣಾ ಪ್ರತಾಪರ ಭಾವಚಿತ್ರ ಪೂಜೆ ನಂತರ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮಹಾರಾಣಾ ಪ್ರತಾಪ ಸಿಂಹರ ಭಾವಚಿತ್ರ ಪೂಜಾ ಕಾರ್ಯಕ್ರಮದೊಂದಿಗೆ ಪ್ರಮುಖ ಕಾರ್ಯಕ್ರಮ ನೆರವೇರುವದು. ಈ ಸಂದರ್ಭದಲ್ಲಿ ಎಸ್‌.ಎಸ್‌.ಎಲ್‌.ಸಿ. ಹಾಗೂ ಪಿ.ಯು.ಸಿ. ತದನಂತರದ ಪದವಿ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಗದಗ ಬೆಟಗೇರಿ ರಜಪೂತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಲಿದೆ. ಕಾರಣ ಸಮಾಜ ಬಾಂಧವರು ರಾಣಾ ಪ್ರತಾಪರ ಅಭಿಮಾನಿಗಳು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸಮಾಜದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.