ಬ್ಯಾಡಗಿಯ ಮಹಾಂತೇಶ್ವರ ಪಿಯುಸಿ ಕಾಲೇಜು ವಿದ್ಯಾರ್ಥಿನಿ ರಾಜ್ಯಕ್ಕೆ 4 ನೇ ರಾ​‍್ಯಂಕ

  ಬ್ಯಾಡಗಿಯ ಮಹಾಂತೇಶ್ವರ ಪಿಯುಸಿ ಕಾಲೇಜು ವಿದ್ಯಾರ್ಥಿನಿ ರಾಜ್ಯಕ್ಕೆ 4 ನೇ ರಾ​‍್ಯಂಕ  Mahanteshwar PUC College student from Byadgi ranks 4th in the state

ಲೋಕದರ್ಶನ ವರದಿ 

ಬ್ಯಾಡಗಿ  01: ವಿದ್ಯಾರ್ಥಿಗಳು ಶೈಕ್ಷಣಿಕ ಅವಧಿಯಲ್ಲಿ ಮಹತ್ವಾಕಾಂಕ್ಷೆ ಗುರಿ ಮುಟ್ಟುವ ತವಕ ಬೆಳೆಸಿಕೊಂಡು ನಿರಂತರ ಅಧ್ಯಯನದಲ್ಲಿ ತೊಡಗಿದಾಗ ಯಶಸ್ವು ಸಾದ್ಯವಾಗಲಿದೆ. ನಿಷ್ಟೆ, ಶ್ರಮ, ಕೆಲಸದ ಶ್ರದ್ದೆಗಳಿಂದ ನಿಶ್ಚಿತ ಗುರಿ, ಸಾಧನೆಯತ್ತ ತೆರಳಬಹುದಾಗಿದೆ ಎಂದು ಹಾವೇರಿ ಶಿಕ್ಷಣ ಇಲಾಖೆಯ ಉಪನಿರ್ಧೆಶಕ ಅಶೋಕ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಮಹಾಂತೇಶ್ವರ ಪಿಯುಸಿ ಕಾಲೇಜು ವಿದ್ಯಾರ್ಥಿನಿ ಲಕ್ಷ್ಮೀ ವಾಲ್ಮೀಕಿ ರಾಜ್ಯಕ್ಕೆ 4 ನೇ ರಾ​‍್ಯಂಕ ಪಡೆದ ವಿದ್ಯಾರ್ಥಿನಿ ನಿವಾಸಕ್ಕೆ ತೆರಳಿ ಗೌರವ ಸನ್ಮಾನದ ಬಳಿಕ ಮಾತನಾಡಿದರು.  

ಹಾವೇರಿ ರಾಜ್ಯದಲ್ಲಿ 22 ಸ್ಥಾನದಲ್ಲಿದ್ದೇವು. ಬ್ಯಾಡಗಿಯ ಮಹಾಂತೇಶ್ವರ ಕಾಲೇಜು ವಿದ್ಯಾರ್ಥಿನಿ ಲಕ್ಷ್ಮೀ ವಾಲ್ಮೀಕಿ ಮರುಮೌಲ್ಯಮಾಪನ ಬಳಿಕ 594 (ಶೇ.99) ಅಂಕಪಡೆದ್ದಾಳೆ. ರಾಣೇಬೆನ್ನೂರು ಖನ್ನೂರು ಕಾಲೇಜು ವಿದ್ಯಾರ್ಥಿನಿ ಹಾಗೂ ಪೇಸ್ ಕಾಲೇಜು ವಿದ್ಯಾರ್ಥಿನಿಯರು 7 ನೇ ರಾ​‍್ಯಂಕ ಪಡೆದು ಜಿಲ್ಲೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದು ತಮಗೆ ಖುಷಿ ತಂದಿದೆ. ವಿದ್ಯಾರ್ಥಿಗಳ ಸಾಧನೆ ಹಿಂದೆ ಗುರು, ಗುರಿ ಜೊತೆ ಇಚ್ಚಾಶಕ್ತಿಯಿದ್ದಲ್ಲಿ ಶೈಕ್ಷಣಿಕ ಅವಧಿಯಲ್ಲಿ ದೊಡ್ಡ ಸಾಧನೆ ಸಾದ್ಯವಾಗಲಿದೆ. ಈ ಬಾರಿ ರಾ​‍್ಯಂಕ ಸೇರಿದಂತೆ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳ ಪೈಕಿ ಬಹುತೇಕರು ಕೂಲಿಕಾರರು, ಸಣ್ಣಸಣ್ಣ ಉದ್ಯೋಗದಲ್ಲಿರುವ ಕುಟುಂಬದಿಂದ ಬೆಳೆದವರು, ಬಡತನದಲ್ಲಿರುವ ನೂರಾರು ವಿದ್ಯಾರ್ಥಿಗಳು ಸಾಧನೆಯ ಕೀರ್ತಿ ಹಾರಿಸಿದ್ದಾರೆ. ಇಂತಹ ಮಕ್ಕಳಿಗೆ ಸರ್ಕಾರ, ಇಲಾಖೆ ಸೇರಿದಂತೆ ಲಭ್ಯವಿರುವ ಸೌಲಭ್ಯ ಕಲ್ಪಿಸಲಾಗುವುದು ಎಂದರು. 

ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ವಿದ್ಯಾರ್ಥಿನಿಯರು ಯಾವ ವಿಷಯ ಆಯ್ಕೆ ಮಾಡಿಕೊಳ್ಳಿ, ಬೇರೆ ಬೇರೆ ವಿಭಾಗದಲ್ಲಿ ಅಧ್ಯಯನ ಮಾಡಿ, ಆದರೆ ಮನಸ್ಸು ಕೊಟ್ಟು ಕಲಿಕೆಯಲ್ಲಿ ತೊಡಗಿಕೊಳ್ಳಿ. ಬಂಗಾರದಂತಹ ಶೈಕ್ಷಣಿಕ ಜೀವನ ಹಾಳುಮಾಡಿಕೊಳ್ಳದೆ, ಭವಿಷ್ಯ ಬರೆಯುವ ದಿನಗಳನ್ನು ಕಳೆದುಕೊಳ್ಳದೆ, ಜೀವನ ಸಾರ್ಥಕಪಡಿಸಿಕೊಳ್ಳಿ. ಕಡುಬಡತನ ಹಾಗೂ ಹಿಂದುಳಿದ ಪ್ರದೇಶದಲ್ಲಿ ಬೆಳೆದರೂ ಸಾಧನೆಯಲ್ಲಿ ಹಿಂದೆ ಬಿದ್ದಿಲ್ಲ. ಗುರುವಿನ ಮಾರ್ಗದರ್ಶನ ತಂದೆ ತಾಯಿ ಸ್ಪೂರ್ತಿಯ ಪರಿಣಾಮದಿಂದ ವಿದ್ಯಾರ್ಥಿನಿ ರಾಜ್ಯಕ್ಕೆ 4 ನೇ ರಾ​‍್ಯಂಕ ಬಂದಿರುವುದು ಹೆಮ್ಮೆಯಾಗಿದೆ. ಎಲ್ಲ ಶಾಲಾಕಾಲೇಜುಗಳಲ್ಲಿ ಇಂತಹ ವಿದ್ಯಾರ್ಥಿಗಳಿದ್ದು, ಅವರನ್ನು ಗುರ್ತಿಸಿ, ಪ್ರೇರೇಪಣೆ ನೀಡುವ ಮೂಲಕ ಅವರಿಗೆ ಸೂಕ್ತ ಮಾರ್ಗದರ್ಶನವನ್ನು ಶಿಕ್ಷಕರು, ಉಪನ್ಯಾಸಕರು ಕಲ್ಪಿಸಿದಾಗ ಮಕ್ಕಳ ಬಾಳು ಉಜ್ವಲವಾಗಲಿದೆ ಎಂದರು.  

ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್‌.ಎಸ್‌.ನಿಸ್ಸೀಮಗೌಡ್ರ, ವಕೀಲ ಶಿವರಾಜ ಅಂಗಡಿ, ಸಂಸ್ಥೆಯ ಅಧ್ಯಕ್ಷ ಸಂಜಯ ಅಂಗಡಿ, ಪ್ರಾಂಶುಪಾಲರು ಮಾರುತಿ ಎಂ, ಉಪನ್ಯಾಸಕರಾದ ಜ್ಯೋತಿ ಜಾಧವ, ಸಂಜೀವ ದೊಡ್ಡಮನಿ, ಉಪಪ್ರಾಚಾರ್ಯರು ಸುಭಾಸ ಎಲಿ ಇತರರಿದ್ದರು.