ತ್ರಿವರ್ಣ ಸೀರೆಯ ಮಹಾಲಕ್ಷ್ಮೀಯ ಪೂಜೆ
Mahalakshmi Puja in Tricolor Saree
ಜಮಖಂಡಿ : 27-2 ತಾಲೂಕಿನ ಮುತ್ತೂರು ಗ್ರಾಮದ ಅಧಿದೇವತೆ ಮಹಾಲಕ್ಷ್ಮೀಯನ್ನು ಗಣರಾಜ್ಯೋತ್ಸವದ ಪ್ರಯುಕ್ತ ತ್ರಿವರ್ಣ ಸೀರೆಯ ಅಲಂಕಾರದೊಂದಿಗೆ ಪೂಜಿಸಲಾಗಿತ್ತು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಷಫರ್ಡ್ ವಿಜ್ಞಾನ ಪಿಯು ಕಾಲೇಜಿನ ಆಡಳಿತಾಧಿಕಾರಿ ಹಾಗೂ ದೇವಿಯ ಭಕ್ತರಾಗಿರುವ ಅಮೀತಗೌಡ ಪಾಟೀಲ ಅವರು ಕಳೆದ 3 ವರ್ಷಗಳಿಂದ ಆಗಸ್ಟ 15 ಹಾಗೂ ಜನೇವರಿ 26ಕ್ಕೆ ಶ್ರೀದೇವಿಗೆ ತ್ರಿವರ್ಣ ಧ್ವಜದ ಅಲಂಕಾರ ಮಾಡಿಸಿ ವಿಶೇಷ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.
ಭಕ್ತರ ಕೋರಿಕೆಯಂತೆ ದೇವಿಯನ್ನು ತ್ರಿವರ್ಣ ಸೀರೆಯಿಂದ ಅಲಂಕರಿಸಲಾಗುತ್ತದೆ ಎಂದು ಅರ್ಚಕ ಸುರೇಶ್ ಆರ್,ಜಿ, ತಿಳಿಸಿದರು. ಶ್ರೀದೇವಿಯ ಅಲಂಕಾರ ವಿಶೇಷ ಪೂಜೆಗಳು ನಡೆದವು. ದೈವಿಭಕ್ತಿಯ ಜೊತೆಗೆ ದೇಶಭಕ್ತಿಯ ಅನನ್ಯ ಸಂಗಮವಾಗಿತ್ತು. ಇತಿಹಾಸ ಪರಂಪರೆ ಹೊಂದಿರುವ ಮುತ್ತೂರು ಮಹಾಲಕ್ಷ್ಮೀ ದೇವಿಗೆ ತ್ರಿವರ್ಣ ಧ್ವಜವನ್ನು ಹೋಲುವ ವಿಶೇಷ ಸೀರೆ ಅಲಂಕಾರದಲ್ಲಿ ಕಂಗೊಳಿಸಿದಳು. ದೇವಿಯಲ್ಲಿ ಭಾರತಾಂಬೆಯ ಪ್ರತಿರೂಪ ಕಾಣಲು ಭಕ್ತ ಸಾಗರವೇ ಹರಿದು ಬಂದಿತ್ತು. ವಿಶೇಷ ಪೂಜೆಗಳ ಕಾರ್ಯಕ್ರಮಗಳು ನಡೆದವು. ಅರ್ಚಕ ಹನುಮಂತ ಗುರುವ ತಂಡದವರು ದೇವರನ್ನು ಅಲಂಕರಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 