ಖಣದಾಳ ಗ್ರಾಮದ ಮಹಾಲಕ್ಷ್ಮೀ ಕೊರವಂಜಿದೇವಿ ಜಾತ್ರಾ ಮಹೋತ್ಸವ
Mahalakshmi Koravanjidevi Jatra Festival in Khanadala village
ಲೋಕದರ್ಶನ ವರದಿ
ಸಂಕೇಶ್ವರ: ವರದಿ- ಎಂ.ಬಿ. ಘಸ್ತಿ
ರಾಯಬಾಗ 07 : ತಾಲೂಕಿನ ಪುಟ್ಟ ಗ್ರಾಮದ ಸುಕ್ಷೇತ್ರ ಖಣದಾಳ ಗ್ರಾಮದ ಚಿಗರಿ ತೋಟದಲ್ಲಿ ಶ್ರೀ. ಮಹಾಲಕ್ಷ್ಮೀ ಕೊರವಂಜಿದೇವಿ ಪವಾಡಗಳು ಮತ್ತು ಕೊರವಂಜಿದೇವಿ ಭಕ್ತರಾದ ರಾಮಣ್ಣ ಮಹಾರಾಜರು ಕೊರವಂಜಿದೇವಿಯ ಕೃಪಾ ಆಶೀರ್ವಾದದಿಂದ ಬೆಳಗಾವಿ ಜಿಲ್ಲೆಯ ಹಾಗೂ ರಾಯಬಾಗ ತಾಲೂಕಿನ ಎಲ್ಲ ಭಕ್ತರು ಬಂದು ರಾಮಣ್ಣ ಮಹಾರಾಜರ ಹಾಗೂ ಕೊರವಂಜಿದೇವಿಯ ಪುಟ್ಟ ದೇವಸ್ಥಾನದಲ್ಲಿ ದರ್ಶನ ಪಡೆದುಕೊಂಡು ತಮ್ಮ ಹರಕೆಗಳನ್ನು ಇಡೆರಿಸಿಕೊಳ್ಳುತ್ತಾ ಬರುತ್ತಿದ್ದಾರೆ ಅಲ್ಲಿಯ ಕೊರವಂಜಿದೇವಿ ಸುಕ್ಷೇತ್ರವು ಅತಿ ದೊಡ್ಡ ಪ್ರಮಾಣದಲ್ಲಿ ಬೆಳೆದು ಬಂದ ಭಕ್ತಾದಿಗಳಿಗೆ ಕೊರವಂಜಿದೇವಿಯ ಕೃಪೆಯಿಂದ ಎಲ್ಲ ಭಕ್ತರು ಅವರ ಆಶೀರ್ವಾದ ಪಡೆದುಕೊಂಡು ತಮ್ಮ ಕಷ್ಟ ಸುಖಗಳನ್ನು ದೇವಿಗೆ ಸಮರ್ಿಸಿ ಭಕ್ತರು ಪುನೀತರಾಗಿದ್ದಾರೆ ಇಲ್ಲಿ ಸುಮಾರು ಇಲ್ಲಿಯವರಗೆ ಸುಮಾರು 4000 ಜನರಿಗೆ ಮಧ್ಯವ್ಯಸನದಿಂದ ರಾಮಣ್ಣ ಮಹಾರಾಜರು ಮುಕ್ತಿಗೊಳಿಸಿದ್ದಾರೆ.
ಪ್ರತಿ ವರ್ಷದಂತೆ 7 ನೇ ವರ್ಷದಲ್ಲಿ ಮಹಾಲಕ್ಷ್ಮೀ ಕೊರವಂಜಿದೇವಿ ಜಾತ್ರೆಯು ದಿನಾಂಕ ಎಪ್ರೀಲ್ 4 ಮತ್ತು 5 ರಂದು ಅತಿ ವಿಜೃಂಭನೆಯಿಂದ ಜರುಗಿದೆ. ಎರಡು ದಿನಗಳ ಜಾತ್ರಾ ಮಹೋತ್ಸವದಲ್ಲಿ ಕೊರವಂಜಿದೇವಿ ಪಂಚಾಮೃತ ಅಭಿಷೇಕ ಹೋಮ ಹವನಗಳು ನಡೆದಿವೆ, ಹಾಗೂ 11 ಗ್ರಾಮಗಳ ಯಲ್ಲಮ್ಮದೇವೆ ಜಗದೊಂದಿಗೆ ಶ್ರೀ. ಮಹಾಲಕ್ಷ್ಮೀ ಕೊರವಂಜಿ ದೇವಸ್ಥಾನಕ್ಕೆ ಆಗಮಿಸುವುದು, ನಂತರ 12 ಗಂಟೆಗೆ 501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವು ಜರುಗಿತು, ಹಾಗೂ ಶಾಸಕರಿಗೆ ಹಾಗೂ ಗಣ್ಯಾತ ಗಣ್ಯ ವ್ಯಕ್ತಿಗಳಿಗೆ ಸತ್ಕಾರ ಸಮಾರಂಭ ಹಾಗೂ ಮಧ್ಯಾಹ್ನ 2.00 ಗಂಟೆಗೆ ಪೂಜ್ಯರಿಂದ ಪ್ರವಚನ ಕಾರ್ಯಕ್ರಮ ಹಾಗೂ ನಿರಂತರ ಅನ್ನಪ್ರಸಾದ ಸುಮಾರು 3-4 ಸಾವಿರು ಭಕ್ತರು ಪ್ರಸಾದ ಸ್ವೀಕರಿಸಿ ಕೊರವಂಜಿ ದೇವಿಯ ಆಶೀರ್ವಾದವನ್ನು ಪಡೆದುಕೊಂಡರು.
ಈ ಅದ್ದೂರಿ ಜಾತ್ರೆ ಮಹೋತ್ಸವದಲ್ಲಿ ಪೂಜ್ಯರಾದ ವಡರಟ್ಟಿಯ ಮಠದ ಗುರುಪ್ರಸಾದ ಮಹಾಸ್ವಾಮಿಗಳು, ಕುಂಚನೂರ ಮಠ ಜಕನೂರುದ ಡಾ: ಮಾದುಲಿಂಗ ಮಹಾರಾಜರು, ರಾಯಲಿಂಗೇಶ್ವರ ಸಂಸ್ಥಾನ ಮಠ ಕಕಮರಿಯ ಮಹಾಸ್ವಾಮಿಗಳಾದ ಗುರುಲಿಂಗಜಂಗಮ ಮಹಾಸ್ವಾಮಿಜಿ ಇವರ ಘನ ಅಧ್ಯಕ್ಷತೆ ವಹಿಸಿದ್ದು, ರಾಯಬಾಗ ತಾಲೂಕಿನ ಖಣದಾಳ ದೇವಸ್ಥಾನದ ಈರಯ್ಯಾ ಮಹಾಸ್ವಾಮಿಗಳು, ಸುಕ್ಷೇತ್ರ ತೇಲಸಂಗ ಮಠದ ಸಂಗಮೇಶ್ವರ ಮಹಾಸ್ವಾಮಿಗಳು, ಕೊಹಳ್ಳಿಯ ಪರಶುರಾಮ ಮಹಾರಾಜರು, ವಿ.ಹ.ಪ. ಉತ್ತರ ಕರ್ನಾಟಕದ ಧರ್ಮಾಚಾರ್ಯ ವೆಂಕಟೇಶ ದೇಶಪಾಂಡೆ, ಗುರುಸ್ವಾಮಿಗಳೂ ಮುಗಳಖೋಡದ ಸದಾಶಿವ ರಗಟಿ ಮಹಾಸ್ವಾಮಿಗಳು, ಬ್ಯಾಕೋಡದ ಸಂಗಪ್ಪಾ ಶರಣರು,
ಈ ಯಾತ್ರಾ ಮಹೋತ್ಸವದಲ್ಲಿ 4 ಶ್ರೀಗಳು ದಿವ್ಯಸಾನಿಧ್ಯದಲ್ಲಿ ಈ ಜಾತ್ರಾ ಮಹೋತ್ಸವವು ಜರುಗಿದೆ. ಈ ಸಮಾರಂಭದಲ್ಲಿ ಜೆ.ಡಿ.ಎಸ್. ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಯಬಾಗಿನ ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷರಾದ ಪ್ರತಾಪರವ ವಸಂತರಾವ ಪಾಟೀಲ, ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ, ಎಂ.ಆರ್.ಎಚ್.ಎಸ್. ಕರ್ನಾಟಕ ರಾಜ್ಯದ ಕಾರ್ಯದರ್ಶಿ ಮಹಾವೀರ ಐಹೊಳೆ, ಮಹಾದೇವ ಸ. ವಡಗಾಂವಿ, ರಾಯಬಾಗದ ಮಾಜಿ ಶಾಸಕ ಡಾ: ಬಿ.ಸಿ. ಸರಿಕರ, ಸುರೇಶ ಐಹೊಳೆ ರಾಷ್ಟ್ರೀಯ ಮುಖಂಡರು ರಾಯಬಾಗ ಕ್ಷೇತ್ರ, ಸವನೂರದ ಬಸವರಾಜ ತೇಲಗರ, ರಾಜು ಗು. ಮೈಶಾಳ, ಸಂಜು ಬಿ. ಹುಣಶಾಳೆ,
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 