ಮಹದಾಯಿ: ಅನುಷ್ಠಾನ ತಡೆಗೆ ಗೋವಾ ತಂತ್ರ



ಬೆಂಗಳೂರು 20: ಮಹದಾಯಿ ನ್ಯಾಯಾಧೀಕರಣದ ತೀಪರ್ಿನಂತೆ  ಕನರ್ಾಟಕಕ್ಕೆ 13.5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದ ಬೆನ್ನಲ್ಲೇ,  ಕನರ್ಾಟಕದ ಮಹದಾಯಿ ಯೋಜನೆ ಅನುಷ್ಠಾನ ತಡೆಯಲು ಪರಿಣಾಮಕಾರಿ ಪಯರ್ಾಯ ಮಾರ್ಗಗಳನ್ನು ಗೋವಾ ಸಕರ್ಾರ ಹುಡುಕುತ್ತಿದೆ. ಇತ್ತೀಚಿನ ಹೊಸ ಬೆಳವಣಿಗೆಯೊಂದರಲ್ಲಿ ಕಸ್ತೂರಿ ರಂಗನ್ ವರದಿ ಅಧ್ಯಯನ ನಡೆಸಿದ್ದು, ಕನರ್ಾಟಕ ಸಕರ್ಾರದ  ಮಹದಾಯಿ ನದಿ ಜಲವಿದ್ಯುತ್ ಯೋಜನೆಗೆ ಮುಂದುವರಿಯದಂತೆ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಸ್ತುತ ಕರಾವಳಿ ರಾಜ್ಯದಲ್ಲಿ ಯಾವುದೇ ಪಯರ್ಾಯ ಮಾರ್ಗಗಳಿಲ್ಲ. ಕನರ್ಾಟಕ ಸಕರ್ಾರದ  ಜಲವಿದ್ಯುತ್ ಯೋಜನೆಯಿಂದ ಪಶ್ಚಿಮ ಘಟ್ಟದಲ್ಲಿನ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ  ಉಂಟಾಗಲಿದ್ದು, ಗೋವಾ ಮೇಲೂ ಪ್ರಭಾವ ಬೀರಲಿದೆ ಎಂದು ಗೋವಾ ಹೆಚ್ಚುವರಿ ಸಾಲಿಸಿಟರ್ ಜನರಲ್ ಆತ್ಮರಾಮ್ ನಾಡಕಣರ್ಿ ನೇತೃತ್ವದ ಕಾನೂನು ತಜ್ಞರ ಸಮಿತಿ ಆಕ್ಷೇಪಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ನ್ಯಾಯಾಧೀಕರಣದ ಹೊರಗಡೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯಲ್ಲಿ ಈ ವಿಷಯ ಸಂಬಂಧ ಚಚರ್ಿಸಲು ಹಾಗೂ ಕನರ್ಾಟಕದ ಜಲಿವಿದ್ಯುತ್ ಯೋಜನೆ  ನಿರ್ಬಂಧ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸಲು ಗೋವಾ ಸಕರ್ಾರ ನಿರ್ಧರಿಸಿದೆ  ಎಂಬ ಮಾಹಿತಿಗಳು ಕೇಳಿಬರುತ್ತಿವೆ.

ಮಹದಾಯಿ ನ್ಯಾಯಾಧೀಕರಣದ ತೀಪರ್ು ಪ್ರಶ್ನಿಸಿ ಕನರ್ಾಟಕ ಸಕರ್ಾರದ ವಿರುದ್ಧ  ಉನ್ನತ ನ್ಯಾಯಾಲಯದಲ್ಲಿ  ಇನ್ನೂ ಒಂದೆರಡು ದಿನಗಳಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು. ಕನರ್ಾಟಕ ಸಕರ್ಾರ ಈಗಾಗಲೇ ನೀರನ್ನು  ತನ್ನ ಕಡೆಗೆ ತಿರುಗಿಸಿಕೊಂಡಿರುವ ಬಗ್ಗೆ ಸಾಕ್ಷ್ಯಧಾರ ಒದಗಿಸಲಾಗುವುದು ಎಂದು ಆತ್ಮಾರಾಮ ನಾಡಕಣರ್ಿ ಹೇಳಿದ್ದಾರೆ.

ಮಹದಾಯಿ ನದಿ ವಿಚಾರದಲ್ಲಿ ಕನರ್ಾಟಕ ಗೆಲುವು ಸಾಧಿಸಿದ್ದರೂ ಗೋವಾಕ್ಕೂ ಈ ತೀಪರ್ು ಬಹುದೊಡ್ಡ ಗೆಲುವು ಎಂದು ಗೋವಾ ತಂತ್ರಜ್ಞರ ತಂಡ  ಹೇಳುತ್ತಿದ್ದಾರೆ. ಕನರ್ಾಟಕ ಸಕರ್ಾರ ಒಟ್ಟಾರೇ 36.55 ಟಿಎಂಸಿ ನೀರು ಕೇಳಿತ್ತು. ಆದಾಗ್ಯೂ, ನ್ಯಾಯಾಧೀಕರಣ 13. 42  ಟಿಎಂಸಿ ನೀರು ಹಂಚಿಕೆ ಮಾಡಿತ್ತು.  ಕುಡಿಯುವ ನೀರಿಗಾಗಿ 5.5 ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು.