ಮಹಾ ಶಿವರಾತ್ರಿ: ವಿವಿಧ ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮ
Maha Shivratri: Various religious-cultural events
ಲೋಕದರ್ಶನ ವರದಿ
ತಾಂಬಾ 14: ಸುಕ್ಷೇತ್ರ ಬಂಥನಾಳದ ಶ್ರೀ ವೃಷಭಲಿಂಗೇಶ್ವರ ಮಹಾ ಸಂಸ್ಥಾನ ಮಠದಲ್ಲಿ ಮಹಾ ಶಿವರಾತ್ರಿ ಹಾಗೂ ಶ್ರೀ ವೃಷಭಲಿಂಗೇಶ್ವರ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಇದೇ ಫೆಬ್ರುವರಿ 15 ರಿಂದ 18ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಫೆ.15 ರಂದು ಬಂಥನಾಳ ಮಠದ ಪೀಠಾಧೀಶರಾದ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಫೆ. 17 ರಂದು ಶಿವರಾತ್ರಿ ಅಮಾವಾಸ್ಯೆ ನಿಮಿತ್ಯ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಯಲಿದೆ. ಬಳಿಕ ಬೆಳಗ್ಗೆ ರಾಷ್ಟ್ರ ಧ್ವಜಾರೋಹಣ ನೆರವೇರಲಿದೆ. ಸಿಂದಗಿ ಶಾಸಕ ಅಶೋಕ ಮನಗೂಳಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಡಿ. ಪಾಟೀಲ ಭಾಗವಹಿಸಲಿದ್ದಾರೆ.
ವಿಶೇಷ ಉಪನ್ಯಾಸಕರಾಗಿ ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡಕರ ಭಾಗವಹಿಸಲಿದ್ದಾರೆ. ಬಳಿಕ ಇಂಡಿ ಹಾಗೂ ಸಿಂದಗಿ ತಾಲೂಕಿನ ವಿವಿಧ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಕ್ಕೆ ಇಂಡಿ ತಾಲೂಕಿನ 2ನೇ ಕನ್ನಡ ಜನಪದ ಸಮ್ಮೇಳ ನಡೆಯಲಿದೆ. ರಾತ್ರಿ 9ಕ್ಕೆ ಬಂಥನಾಳ ಪೂಜ್ಯರ ಅಮೃತ ಹಸ್ತದಿಂದ ಅಗ್ನಿ ಪುಟುವು ಕಾರ್ಯಕ್ರಮ ನೆರವೇರಲಿದೆ. 10ಕ್ಕೆ ಬಳಗಾನೂರಿನ ಆಧ್ಯಾತ್ಮಿಕ ಸಾಧಕ ಎಂ. ಎಂ. ಉಪ್ಪಾರ ಅವರಿಂದ ಆಧ್ಯಾತ್ಮಿಕ ಪ್ರವಚನ ಜರುಗಲಿದೆ. ಬಳಿಕ 10.30ಕ್ಕೆ ತಾಂಬಾ ಗ್ರಾಮದ ಶ್ರೀ ವೀರಭದ್ರೇಶ್ವರ ಭಜನಾ ಕಲಾ ತಂಡದವರಿಂದ ಶಿವ ಭಜನೆ ನಡೆಯಲಿದೆ. ಫೆ.18 ರಂದು 9.30ಕ್ಕೆ ರೇಬೀನಾಳದ ಪಲ್ಲಕ್ಕಿ ಆಗಮನ ವಾಗಲಿದೆ, 10ಗಂಟೆಗೆ ಜಗದ್ಗುರು ಪೀಠದ ಪೂಜ್ಯರಿಂದ ಅಗ್ನಿ ಶಮನ ನೇರವೆರುವದು. ನಂತರ ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರಿಂದ ದಿಕ್ಷಾ ಕಾರ್ಯಕ್ರಮ ಜರುಗಲಿದೆ. ನಂತರ ಸಂಜೆ 4ಕ್ಕೆ ಮಹಾರಥೋತ್ಸವ ಜರುಗುವದು. ಸಂಜೆ 6ಕ್ಕೆ ಸಾಹಿತ್ಯ ಚಿಂತನ ಕಾರ್ಯಕ್ರಮ ಜರಗುವದು. ಶ್ರೀಮಠದ ಡಾ.ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಯರನಾಳದ ಶ್ರೀಗುರು ಸಂಗನಬಸವ ಮಹಾಸ್ವಾಮಿಜಿ, ಬಬಲಾದಿ ದೇವಾಪುರದ ಶ್ರೀ ಶಿವಮರತಿ ಮಾಹಾಸ್ವಾಮೀಜಿ, ಅಭಿನವ ರಾಛೋಟೇಶ್ವರ ಶಿವಾಚಾರ್ಯರು, ಅಗರಖೇಢದ ಅಭೀನವ ಪ್ರಭುಲಿಂಗೇಶ್ವರ ಮಾಹಾಸ್ವಾಮಿಜಿ ಭಾಗವಹಿಸುವರು.
ನಂತರ ರಾತ್ರಿ 8ಗಂಟೆಗೆ ಸ್ಥಳಿಯ ಭಕ್ತರಾದ ರಾಮಣ್ಣ ಬ್ಯಾಳಿ ಮನೆತನದವರಿಂದ ಪೂಜ್ಯರ ತುಲಾಭಾರ ಮೋಹತ್ಸವ ನೇರವೆರಲಿದೆ. ಗ್ರಾಮದ ಶ್ರೀ ಸಂಗನಬಸವೇಶ್ವರ ನಾಟ್ಯ ಸಂಘದವರಿಂದ ತುತ್ತು ಕೊಟ್ಟ ರೈತನಿಗೆ ಕುತ್ತು ತಂದ ಸರಕಾರ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಗೋಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 