ನಾಳೆಯಿಂದ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದಿಂದ ಮಹಾ ಶಿವರಾತ್ರಿ ಮಹೋತ್ಸವ
Maha Shivaratri festival to be held from Brahmakumari Ishwari University from tomorrow
ಕೊಪ್ಪಳ 12: ನಗರದ ದೇವರಾಜ ಅರಸ್ ಕಾಲೋನಿ, ಬಡಾವಣೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ದ ಸಭಾಭವನದಲ್ಲಿ ಇದೇ ತಿಂಗಳ ದಿನಾಂಕ 14ರ ಶುಕ್ರವಾರ ದಿಂದಮಹಾಶಿವರಾತ್ರಿ ಮಹೋತ್ಸವದ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ವರ್ಷವೂ ಸಹ ಜರುಗಲಿದೆ ಎಂದು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಯೋಗೀನೀ ಅಕ್ಕನವರು ತಿಳಿಸಿದ್ದಾರೆ. ದಿ,14. ರಿಂದ ಪ್ರಾರಂಭಗೊಳ್ಳುತ್ತವೆ. ಅಂದು ಸಂಜೆ 04:00 ಗಂಟೆಗೆ ಶಿವಧ್ವಜಾರೋಹಣ, 12 ಜ್ಯೋತಿರ್ಲಿಂಗಗಳನ್ನು ಹೊತ್ತ "ಶಿವ ಸಂದೇಶ" ರಥ ಯಾತ್ರೆಯ ಭವ್ಯ ಮೆರವಣಿಗೆ ಕೊಪ್ಪಳದ ಮುಖ್ಯ ಬೀದಿಗಳಲ್ಲಿ ಸಾಗಿ ಬರಲಿದೆ.
ಮಹಾ ಶಿವರಾತ್ರಿ ಪ್ರಯುಕ್ತ ದಿ, 15. ರಿಂದ ಇದೇ ತಿಂಗಳ ದಿ, 20. ರ ವರೆಗೆ ಪ್ರತಿ ದಿನ ಸಂಜೆ 05:00 ರಿಂದ ರಾತ್ರಿ 10:00 ಗಂಟೆಯವರೆಗೆ ದೇವರಾಜ ಅರಸು ಕಾಲೋನಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆವರಣದಲ್ಲಿ ವೈವಿದ್ಯಮಯ ಆಕರ್ಷಣೆಗಳು ನಡೆಯಲಿದೆ,40 ಅಡಿ ಎತ್ತರದ ಗೋಪುರರಾಮೇಶ್ವರ ಜ್ಯೋತಿರ್ಲಿಂಗ ದರ್ಶನಶಿವ ಮತ್ತು ಶಂಕರ ಚೈತನ್ಯ ದೃಶ್ಯ ಮಂಟಪ,ಪ್ರೊಜೆಕ್ಟರ್ ಶೋ ಮೂಲಕ ಶಿವರಾತ್ರಿ ರಹಸ್ಯ,ಅಧ್ಯಾತ್ಮ ಚಿತ್ರ ಪ್ರದರ್ಶನದಿಂದ ಮೌಲ್ಯ ಜಾಗೃತಿ,ವೈವಿಧ್ಯಮಯ ಶಿವಲಿಂಗಗಳ ದರ್ಶನ: ವಜ್ರಲಿಂಗ, ಸ್ವರ್ಣಲಿಂಗ, ಮುತ್ತುರತ್ನಗಳ ಅಂಗ. ಬೆಳಕಿನ ಲಿಂಗ. ಸಹಸ್ರಲಿಂಗ, ರುದ್ರಾಕ್ಷಿ ಲಿಂಗ.ಶಿವನೊಂದಿಗೆ ಸಲ್ಪಿ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ,ದಿ, 15. ರಂದು ಉದ್ಘಾಟನಾ ಮಹೋತ್ಸವದಲ್ಲಿ ಶಾಸಕರಾದ ಕೆ, ರಾಘವೇಂದ್ರ ಹಿಟ್ನಾಳ, ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯರಾದ ಶ್ರಿಮತಿ ಹೇಮಲತಾ ನಾಯಕ, ಮಾಜಿ ಸಂಸದ, ಸಂಗಣ್ಣ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್, ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಭಾಗವಹಿಸುವರು ಎಂದು ವಿವರಿಸಿದರು,
ದಿ: 16. ರಂದು ಭಾವೈಕ್ಯತಾ ಮಹೋತ್ಸವ ಕಾರ್ಯಕ್ರಮವನ್ನು ಸಂಸದರಾದ ಕೆ, ರಾಜಶೇಖರ ಹಿಟ್ನಾಳ್ ಉದ್ಘಾಟಿಸುವರು. ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಘನ ಉಪಸ್ಥಿತಿಯಲ್ಲಿರುವರು. ಅಧ್ಯಕ್ಷತೆ ಸಿ ವಿ ಚಂದ್ರಶೇಖರ ವಹಿಸುವರು. ಮುಖ್ಯ ಅತಿಥಿಗಳಾಗಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣಪ್ಪ ಚೌಹಾಣ್ ಉಪಸ್ಥಿತರಿರುವರು. ಜಿಲ್ಲಾ ಪತ್ರಿಕಾ ಮಾಧ್ಯಮದವರಿಗೆ ಗೌರವಾರೆ್ಣ ಕಾರ್ಯಕ್ರಮವನ್ನು ಏರಿ್ಡಸಲಾಗಿದೆ.ದಿ, 17,ರಂದು ಶಿವಶಕ್ತಿ ಚೈತನ್ಯ ಸಾಕ್ಷಾತ್ಕಾರ ಕಾರ್ಯಕ್ರಮದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯವರಿಗೆ ಗೌರವಾರೆ್ಣ ಏರಿ್ಡಸಲಾಗಿದೆ. ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಠಾಣಾಧಿಕಾರಿ ಜಯಪ್ರಕಾಶ , ಭಾಗ್ಯನಗರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುರೇಶ್ ಬಬಲಾದ್ , ಪಟ್ಟಣ ಪಂಚಾಯತ್ ಭಾಗ್ಯನಗರ ಅಧ್ಯಕ್ಷರಾದ ರಮೇಶ್ ಹ್ಯಾಟಿ , ಜಿಲ್ಲಾ ಕಾರಾಗೃಹ ಅಧೀಕ್ಷಕ ಅಮರೇಶ್ ಪೂಜಾರ್ ಮುಂತಾದವರುಭಾಗವಹಿಸುವರು.
ದಿ: 18. ರಂದು ಸಾಂಸ್ಕೃತಿಕ ಮಹೋತ್ಸವ ವಿವಿಧ ಶಾಲಾ ಕಾಲೇಜು ಮಕ್ಕಳಿಂದ ಜರುಗಲಿದೆ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್ ಚಾಲಕರಿಗೆ ಈಶ್ವರೀಯ ಸನ್ಮಾನ ಕಾರ್ಯಕ್ರಮನಡೆಯಲಿದೆ,ದಿ,19. ಅಧ್ಯಾತ್ಮ ಮಹೋತ್ಸವ ದಿನ ದಂದು ಆಶಾ ಕಾರ್ಯಕರ್ತೆಯರಿಗೆ ಈಶ್ವರೀಯ ಸನ್ಮಾನ ಕಾರ್ಯಕ್ರಮ ಜರುಗಲಿದೆದಿ, 20. ರಂದು ಮೌಲ್ಯ ಜಾಗೃತಿ ಮಹೋತ್ಸವ ದಿ, 21. ರಿಂದ ಬರುವ ಮಾರ್ಚ್ ದಿ, 21. ರ ವರಿಗೆ ಶಿವಧ್ಯಾನ ಶಿಬಿರ ಮತ್ತು ಸಂಜೆ 6:30 ರಿಂದ 7:30 ಗಂಟೆಯವರೆಗೆ ಪ್ರತಿ ದಿನ ನಡೆಯಲಿದೆ, ಎಲ್ಲರಿಗೂ ಉಚಿತ ಪ್ರವೇಶ, ಲಾಭ ಖಚಿತ ಸಾರ್ವಜನಿಕರು ಕಾರ್ಯಕ್ರಮದ ಲಾಭವನ್ನು ಪಡೆದುಕೊಳ್ಳಬೇಕೆಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕ ಕರೆನೀಡಿದರು. ಬಿ ಕೆ ಸ್ನೇಹಕ್ಕ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 