ವಿಶ್ವ ಶಾಂತಿಗಾಗಿ ಮಹಾ ಚಂಡಿಯಾಗ ಯಶಸ್ವಿ
Maha Chandigarh is a success for world peace.
ವಿಶ್ವ ಶಾಂತಿಗಾಗಿ ಮಹಾ ಚಂಡಿಯಾಗ ಯಶಸ್ವಿ
ಯಮಕನಮರಡಿ 05: ಸ್ಥಳೀಯ ಮಾರ್ಕೆಟ್ ಯಮಕನಮರಡಿ ಕಾ ರಾಜ ಸಾರ್ವಜನಿಕ ಗಣೇಶ ಉತ್ಸವ ಕಮಿಟಿಯವರು ಗಣಪತಿ ಹಬ್ಬದ ಪ್ರಯುಕ್ತ ವಿಶ್ವ ಶಾಂತಿಗಾಗಿ ಹಾಗೂ ಗ್ರಾಮದಲ್ಲಿ ಶಾಂತಿ ನೆಮ್ಮದಿ ಆರೋಗ್ಯ ಯಾವುದೇ ತರದ ಪೀಡೆ ಬಾಧೆೆಗಳು ಬರಬಾರದು ಎಂದು ಸಂಕಲ್ಪಿಸಿ ದಿನಾಂಕ ನಾಲ್ಕರಂದು ಮಹಾಚಂಡಿ ಯಾಗವನ್ನು ಆಯೋಜಿಸಿದರು.
ಪೂಜಾ ಸಮಾರಂಭಕ್ಕೆ ದಾವಣಗೆರೆಯ ಸುಪ್ರಸಿದ್ಧ ಆಚಾರ್ಯ ಪ್ರಸನ್ನಾನಂದ ಗುರೂಜಿಯವರು ಎರಡು ದಿನಗಳ ಕಾಲ ಚಂಡಿ ಯಾಗವನ್ನು ಸಾಂಪ್ರದಾಯಕವಾಗಿ ಯಶಸ್ವಿಗೊಳಿಸಿದರು. ಇದರಿಂದಾಗಿ ಗ್ರಾಮದಲ್ಲಿ ಹೊಸ ಸಂಪ್ರದಾಯವನ್ನು ಮೂಡಿಸಿದಂತಾಗಿದೆ. ಪೂಜಾ ಸಮಾರಂಭದಲ್ಲಿ ಸುಮಾರು 11 ದಂಪತಿಗಳು ಉಪಸ್ಥಿತರಿದ್ದು ತಮ್ಮ ಸಂಕಲ್ಪವನ್ನು ಯಶಸ್ವಿಗೊಳಿಸಿಕೊಂಡರು.
ಅಪಾರ ಸುಮಂಗಲಿಯರು ಹಾಗೂ ಸ್ಥಳೀಯ ಹುಣಸಿಕೊಳ್ಳ ಮಠದ ಉತ್ತರಾಧಿಕಾರಿ ಸಿದ್ಧಬಸವ ದೇವರು ಹಾಗೂ ಹತ್ತರಗಿ ಕಾರಿಮಠ ಗುರು ಸಿದ್ದೇಶ್ವರ ಮಹಾಸ್ವಾಮಿಗಳು ಹತ್ತರಗಿ ಹರಿಮಂದಿರದ ಡಾ ಆನಂದ ಮಹಾರಾಜ್ ಗೋಸಾವಿಯವರು ಸಾನಿಧ್ಯವನ್ನು ವಹಿಸಿದ್ದರು. ನಂತರ ಸಕಲ ಭಕ್ತಾದಿಗಳಿಗೆ ಮಹಾಪ್ರಸಾದ ಆಯೋಜಿಸಲಾಗಿತ್ತು. ಚಂಡಿಯಾಗದಿಂದ ಗ್ರಾಮದಲ್ಲಿ ಹೊಸತನದ ವಾತಾವರಣ ಸೃಷ್ಟಿಯಾದಂತಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 