ಮದರಸಾ ಧಾರ್ಮಿಕ ಶ್ರದ್ದಾ ಕೇಂದ್ರಗಳು : ಶ್ರೀಕಾಂತ ದುಂಡಿಗೌಡ್ರ
Madrasas are religious centers of worship: Srikanth Dundigowdra
ಶಿಗ್ಗಾವಿ 07 : ಮದರಸಾಗಳು ಇಸ್ಲಾಂ ಧರ್ಮದ ಮೂಲತತ್ವಗಳನ್ನು ಪಠಣ ಮಾಡುವ ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿವೆ ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ತಾಲೂಕಿನ ಬನ್ನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗೌಸಿಯಾ ಅರಬಿ ಮದರಸಾವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ತಮ್ಮ ಧರ್ಮದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಒಳ್ಳೆಯ ನಡತೆ ವಿಚಾರವನ್ನು ತಿಳಿಸುತ್ತವೆ ಅಲ್ಲದೇ ಯಾವುದೇ ಧರ್ಮದಲ್ಲಾಗಲಿ ನಾವು ಜನಿಸಿದ ಊರಿಗೆ ನಾಡಿಗೆ ಒಳಿತನ್ನು ಬಗೆಯಬೇಕು ಮತ್ತು ಏನನ್ನಾದರೂ ಕೊಡುಗೆ ನೀಡಬೇಕು ಹಾಗೂ ಎಲ್ಲರೂ ಸಹೋದರರಂತೆ ಬಾಳಿ ಬದುಕಿ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಬೇಕು ಎಂದರು.
ಈ ಸಂದರ್ಭದಲ್ಲಿ ಟಿ.ವಿ ಪಾಟೀಲ,ವೀರನಗೌಡ ಹೊನ್ನಗೌಡ್ರ, ಬಾಪುಗೌಡ್ರ ಪೋಲಿಸಗೌಡ್ರ, ವೀರಭದ್ರ ಅಗಡಿರಾಜೇಸಬ ಶೇತಸನದಿ,ಅಂಜುಮನ್ ಕಮಿಟಿ ಅಧ್ಯಕ್ಷ ಪಕರುದ್ದಿನ ಹಕ್ಕಿ,ಮುನಾಫ ದೊಡ್ಡಮನಿ, ಹಸನಸಾಬ ಶೇತಸನದಿ, ರಜಾಕ್ ಮದ್ದೂಷಣವರ, ಶಫೀ ಮಕ್ಕುಬಾಯಿ, ಜಾಫರ ಇಸ್ಮಿಯಾನವರ, ಜಮೀರ ದೊಡ್ಡಮನಿ, ಇಸಾಕ ಶೇತಸನದಿಮುನೀರ ಶೇತಸನದಿ,ಖಾದರಗೌಸ ದೊಡ್ಡಮನಿ, ಅಸ್ಕರಲಿ ನೆಲಗುಡ್ಡಭಾಷಾ ಕಮಡೊಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 