ಮದಭಾವಿ ಕೃಷಿ ಪತ್ತಿನ ಸಂಘಕ್ಕೆ ಸದಸ್ಯರ ಸಹಕಾರದಿಂದ 84 ಲಕ್ಷ 34 ಸಾವಿರದಷ್ಟು ಲಾಭ: ನಿಜಗುಣಿ ಮಗದುಮ್
Madabhavi Agricultural Credit Association has benefited from the cooperation of its members by earni
ಅಥಣಿ 25: ಮದಭಾವಿಯ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ 2024-25 ನೇ ಸಾಲಿನಲ್ಲಿ 84 ಲಕ್ಷ 34 ಸಾವಿರದಷ್ಟು ಲಾಭವಾಗಿದ್ದು, ಇದರಲ್ಲಿ ಸದಸ್ಯರಿಗೆ ಶೇ.14 ಅ ರಷ್ಟು ಲಾಭಾಂಶ ಕೊಡಲು ನಿರ್ಧರಿಸಲಾಗಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ನಿಜಗುಣಿ ಮಗದುಮ ಹೇಳಿದರು. ಅವರು ಸಹಕಾರಿ ಸಂಘದ 66 ನೇ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರಸಕ್ತ ಸಾಲಿನಲ್ಲಿ ನಮ್ಮ ಸಹಕಾರಿ ಸಂಘ 83 ಕೋಟಿ 60 ಲಕ್ಷ ವಹಿವಾಟು ನಡೆಸಿದ್ದು, ಸದಸ್ಯರಿಂದ 15 ಕೋಟಿ 21 ಲಕ್ಷ ರೂ.ಗಳಷ್ಟು ಠೇವಣಿ, 40 ಕೋಟಿ 87 ಲಕ್ಷ 54 ಸಾವಿರ, 2 ಕೋಟಿ 20 ಲಕ್ಷ 29 ಸಾವಿರ ಶೇರು ಬಂಡವಾಳ ಹೊಂದಿದೆ ಎಂದ ಅವರು ಸಹಕಾರಿ ಸಂಘ ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ, ಕಾಗವಾಡ ಶಾಸಕ ರಾಜು ಕಾಗೆ, ಕಾಗವಾಡ ಮತಕ್ಷೇತ್ರದ ಧುರೀಣ ವಿನಾಯಕ ಬಾಗಡಿ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು. ನಮ್ಮ ಸಂಘದ ಸದಸ್ಯರಿಗೆ ಮಾರ್ಚ 2025 ರ ವರೆಗೆ 32 ಕೋಟಿ 81 ಲಕ್ಷ ಸಾಲ ವಿತರಿಸಲಾಗಿದ್ದು, ಈ ಪೈಕಿ 23 ಕೋಟಿ 50 ರೂ.ಗಳಷ್ಟು ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ ಎಂದ ಅವರು ಸದಸ್ಯರು ತಾವು ಪಡೆದುಕೊಂಡ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಸಹಕಾರ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಅಕ್ಟೋಬರ್ 19 ರಂದು ನಡೆಯಲಿರುವ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಥಣಿ ತಾಲೂಕಿನಿಂದ ಸ್ಪರ್ಧೆ ಮಾಡಿರುವ ಶಾಸಕ ಲಕ್ಷ್ಮಣ ಸವದಿ ಹಾಗೂ ಕಾಗವಾಡ ತಾಲೂಕಿನಿಂದ ಸ್ಪರ್ಧೆ ಮಾಡಿರುವ ಶಾಸಕ ರಾಜು ಕಾಗೆ ಇವರಿಗೆ ನಮ್ಮ ಗ್ರಾಮದಲ್ಲಿರುವ ಎರಡೂ ಕೃಷಿ ಪತ್ತಿನ ಸಹಕಾರಿ ಸಂಘಗಳ ಬೆಂಬಲ ಕೊಡುವುದಾಗಿ ನಿಜಗುಣಿ ಮಗದುಮ್ ಘೋಷಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಅಶೋಕ ಪೂಜಾರಿ, ನಿರ್ದೇಶಕರಾದ ಅರ್ಜುನ ಇಬ್ರಾಹಿಂಪುರ, ಭೀಮು ಚೌಗಲಾ, ಅಮಸಿದ್ಧ ರೂಗಿ, ಮನೋಹರ ಪೂಜಾರಿ, ವಿಠ್ಠಲ್ ಅವಳೆ, ಮಲ್ಲಪ್ಪ ದೇವಕತ್ತೆ, ಸಿದರಾಯ ಪತಂಗಿ, ರಾವಸಾಬ ಮಗದುಮ್, ಭೀಮಗೌಡ ಪಾಟೀಲ, ಪ್ರಮೀಳಾ ಮೆಂಡಿಗೇರಿ, ಭಾಗ್ಯಶ್ರೀ ಸೂರ್ಯವಂಶಿ, ಧುರೀಣರಾದ ಅಪ್ಪು ಚೌಗಲಾ, ಸೋಮನಿಂಗ ಮಗದುಮ್, ಉದಯ ಪವಾರ, ಸಾತಪ್ಪಾ ನಿವಲಗಿ, ಶಿವಾನಂದ ಮಗದುಮ್, ಅಪ್ಪಣ್ಣಾ ಮಹದುಮ್, ಈಶ್ವರ ಕುಂಬಾರೆ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಂಡು ಸಲಹೆ, ಸೂಚನೆ ನೀಡಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 