ಮಳೆಗೆ ಹಾನಿಯಾದ ಪ್ರದೇಶದಲ್ಲಿ ಅಭಿವೃದ್ಧಿಗೆ ಮಾನೆ ಚಾಲನೆ
Maane drive for development in rain damaged area
ಹಾನಗಲ್ 07 :ತಾಲೂಕಿನ ಸುರಳೇಶ್ವರ ಗ್ರಾಮದಲ್ಲಿ 2024-25 ನೇ ಸಾಲಿನ ಮಳೆ ಮತ್ತು ಪ್ರವಾಹದಿಂದ ಹಾನಿಯಾದ ಗ್ರಾಮೀಣ ರಸ್ತೆ, ಸೇತುವೆ ಮತ್ತು ಚರಂಡಿ ಅಭಿವೃದ್ಧಿ ಕ್ರಿಯಾ ಯೋಜನೆಯಡಿ 20 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.
ಗ್ರಾಮದ ಗುರುಮೂರ್ತಿ ಗೌಡರ ಅವರ ಮನೆಯಿಂದ ಶಿವಪ್ಪ ಪೂಜಾರ ಅವರ ಮನೆವರೆಗೆ ಸಿಸಿರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ ಶಾಸಕ ಮಾನೆ, ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಗಮನ ನೀಡಲಾಗಿದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ಗ್ರಾಪಂ ಸದಸ್ಯರು ಮತ್ತು ಗ್ರಾಮಸ್ಥರು ಈ ನಿಟ್ಟಿನಲ್ಲಿ ಕಾಳಜಿ ವಹಿಸಿದರೆ ಗ್ರಾಮೀಣಾಭಿವೃದ್ಧಿಯ ಕನಸು ಸಾಕಾರಗೊಳ್ಳಲಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಯಂಕಮ್ಮ ಬಂಡಿವಡ್ಡರ,ಉಪಾಧ್ಯಕ್ಷ ನಾಗಪ್ಪ ತಳಗೇರಿ, ಸದಸ್ಯ ರೆಹೆಮತ್‌ಅಲಿ ನೆಲ್ಲಿಕೊಪ್ಪ, ಮುಖಂಡರಾದ ಪರಸಪ್ಪ ನಾಯ್ಕ, ಬಸವರಾಜ ಮೈಲಾರದ, ಮಹದೇವಪ್ಪ ಬಂಡಿವಡ್ಡರ, ಗಣೇಶ ಸಂಬರಗಿ, ಕಾಸೀಂಸಾಬ ಸಾವಿಕೇರಿ, ಮೆಹಬೂಬ ಬ್ಯಾಡಗಿ, ದೇವೇಂದ್ರ್ಪ ನಾಯ್ಕ, ಯಲ್ಲಪ್ಪ ಸಂಬರಗಿ, ಮೌಲಾಲಿ, ನೂರಖಾನ್ ಶೇತಸನದಿ, ರಾಜೇಸಾಬ ಲಕ್ಷ್ಮೇಶ್ವರ, ಜಗದೀಶ ನಾಯ್ಕ, ಶಿವಪುತ್ರ್ಪ ಬಾರ್ಕಿ,ಪ್ರಕಾಶ ನಾಯಕ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 