ಹಂಪಿ ಪ್ರವಾಸಿ ತಾಣಗಳ ಮೂಲಸೌಕರ್ಯ ಮೇಲ್ದರ್ಜೆಗೆ ಮತ್ತು ಕನ್ನಡ ವಿವಿ ಅಭಿವೃದ್ಧಿಗೆ ಸಂಸದ ತುಕಾರಾಮ್ ಭರವಸೆ

ಹಂಪಿ ಪ್ರವಾಸಿ ತಾಣಗಳ ಮೂಲಸೌಕರ್ಯ ಮೇಲ್ದರ್ಜೆಗೆ ಮತ್ತು ಕನ್ನಡ ವಿವಿ ಅಭಿವೃದ್ಧಿಗೆ ಸಂಸದ ತುಕಾರಾಮ್ ಭರವಸೆ  MP Tukaram promises to upgrade the infrastructure of Hampi tourist destinations and develop Kannada

ಲೋಕದರ್ಶನ ವರದಿ 

ವಿಜಯನಗರ(ಹೊಸಪೇಟೆ)  24: ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯ ಸ್ಮಾರಕಗಳ ರಕ್ಷಣೆ, ಪ್ರವಾಸಿಗರ ಮೂಲಸೌಕರ್ಯ ಹಾಗೂ ಕನ್ನಡ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದ ಈ.ತುಕಾರಾಮ್ ಅವರು ಭರವಸೆ ನೀಡಿದರು.  ತಾಲೂಕಿನ ಕಮಲಾಪುರ ಪುರಾತತ್ವ ವಸ್ತುಸಂಗ್ರಹಲಯಕ್ಕೆ ಬುಧವಾರ ಬೇಟೆ ನೀಡಿ ಹಂಪಿ ವೃತ್ತದ ವಿವಿಧ ಪ್ರದೇಶಗಳಿಗೆ ಸುದೀರ್ಘ ಪರೀಶೀಲನೆ ನಡೆಸಿದರು.  

ಪ್ರಮುಖವಾಗಿ ಕಮಲಾಪುರದ ಪುರಾತತ್ವ ವಸ್ತುಸಂಗ್ರಹಾಲಯ, ಮಹಾನವಮಿ ದಿಬ್ಬ, ಹಜಾರರಾಮ ದೇವಾಲಯ, ದಾನಾಯಕ ಆವರಣ ಹಾಗೂ ವಿರೂಪಾಕ್ಷ ದೇವಾಲಯಕ್ಕೆ ಭೇಟಿ ನೀಡಿದ ಅವರು, ಪ್ರವಾಸಿಗರ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಸಂಸದರು ಆರಂಭದಲ್ಲಿ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ ಹಂಪಿಯ ವಿಶ್ವ ಪಾರಂಪರಿಕ ಇತಿಹಾಸವನ್ನು ಬಿಂಬಿಸುವ ವಿಡಿಯೋ ಪ್ರದರ್ಶನ ವೀಕ್ಷಿಸಿದರು. ಪ್ರಸ್ತುತ ಇಂಗ್ಲಿಷ್‌ನಲ್ಲಿರುವ ಇತಿಹಾಸದ ವಿಡಿಯೋವನ್ನು ಸ್ಥಳೀಯ ಹಾಗೂ ರಾಜ್ಯದ ಪ್ರವಾಸಿಗರ ಅನುಕೂಲಕ್ಕಾಗಿ ಕನ್ನಡ ಭಾಷೆಯಲ್ಲೂ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು.