ರಡ್ಡೇರಹಟ್ಟಿಯಲ್ಲಿ ಸಂಸದೆ ಪ್ರಿಯಾಂಕಾ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ರಡ್ಡೇರಹಟ್ಟಿಯಲ್ಲಿ ಸಂಸದೆ ಪ್ರಿಯಾಂಕಾ ರಸ್ತೆ ಕಾಮಗಾರಿಗೆ ಭೂಮಿ ಪೂಜೆ MP Priyanka performs groundbreaking ceremony for road work in Radderahatti

 ಅಥಣಿ 17 : ರಡ್ಡೆರಹಟ್ಟಿ ಎಸ್ಟಿ ಕಾಲೋನಿಯಲ್ಲಿ 25 ಲಕ್ಷ ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿಪೂಜೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಸತೀಶ ಜಾರಕಿಹೊಳಿ ನೆರವೇರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಕುಮಾರಿ ಪ್ರಿಯಾಂಕಾ ಸತೀಶ ಜಾರಕಿಹೊಳಿ ಯವರನ್ನು ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿಕೊಂಡರು. ಭೂಮಿಪೂಜೆಗೆ ಮುನ್ನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಗ್ರಾಮದ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗ್ರಾಮಸ್ಥರಿಂದ ವಿವಿಧ ಸಾರ್ವಜನಿಕ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಮನವಿ ಪತ್ರಗಳನ್ನು ಸ್ವೀಕರಿಸಿದ ಅವರು, ಸಂಬಂಧಿತ ಇಲಾಖೆಗಳ ಮೂಲಕ ಪರೀಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಅಗತ್ಯವಿದ್ದಲ್ಲಿ ಗೋಕಾಕ್ ಕಚೇರಿಗೆ ಮನವಿಗಳನ್ನು ಸಲ್ಲಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ಎಸ್ಟಿ ಸಮುದಾಯದ ಹಿರಿಯರು ಸಂಸದೆಯನ್ನು ಭಾರತಿ ಗಸ್ತಿ ಸವಿತಾ ಸನದಿ ಸತ್ಕರಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ, ರಮೇಶ್ ಸಿಂದಗಿ, ರಾಸಾಯಬ್ ಐಹೊಳೆ, ಸಚಿನ್ ಬುಟಾಳಿ, ಆಶಾ ಪಾಟೀಲ್, ರೇಖಾ ಪಾಟೀಲ್, ರೆಡ್ಡೇರಹಟ್ಟಿ ಗ್ರಾಮದಬಾಬು ಹುಲ್ಯಾಳ, ಲಕ್ಷ್ಮಣ ಸನದಿ, ಲಕ್ಕಪ್ಪ ನಾಯಕ, ಶ್ರೀಶೈಲ್ ಗಸ್ತಿ, ಸಂಗಮೇಶ್ ಖೋತ, ಬಾಬಣ್ಣ ಸಾರ್ವಾಡ್, ಗೀರೀಶ್ ನಾಯಕ್, ಮುದುಕಪ್ಪ ಸಾರ್ವಾಡ್, ಗುತ್ತಿಗೆದಾರ ಚೆನ್ನಪ್ಪ ಬಂಡಿವಡ್ಡರ ಸೇರಿದಂತೆ ಗ್ರಾಮದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಎಸ್ಟಿ ಸಮುದಾಯದ ಹಿರಿಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಶಿವಾನಂದ ಮೇಲಗಡೆ ಅತಿಥಿಗಳನ್ನು ಸ್ವಾಗತಿಸಿದರು, ಶಿವಾನಂದ ಗಲಗಲಿ ಕಾರ್ಯಕ್ರಮ ನಿರೂಪಿಸಿದರು.