ವಿವಿಧ ರಸ್ತೆ ಕಾಮಗಾರಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ

ವಿವಿಧ ರಸ್ತೆ ಕಾಮಗಾರಿಗೆ  ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ MP Priyanka Jarkiholi launches various road works

ವಿವಿಧ ರಸ್ತೆ ಕಾಮಗಾರಿಗೆ  ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ 


ಚಿಕ್ಕೋಡಿ 02: ರಾಜ್ಯ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಸಮರ​‍್ಕ ಕೊಡುವುದರ ಜೊತೆಗೆ ಅಭಿವೃದ್ಧಿ ಕಾಮಗಾರಿಗೂ ವಿಶೇಷ ಅನುದಾನ ನೀಡುತ್ತಿದೆ. ಇದರಿಂದ ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಅಭಿವೃದ್ಧಿಗೆ ವಿಶೇಷ ಒತ್ತು ಕೊಡಲಾಗಿದೆ ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಹೇಳಿದರು. 

ಮಂಗಳವಾರ ನಿಪ್ಪಾಣಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಲೋಕೋಪಯೋಗಿ ಇಲಾಖೆ ಸಚಿವರು ಮತ್ತು ತಂದೆಯವರಾದ ಸತೀಶ ಜಾರಕಿಹೊಳಿ ಅವರು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ ಎಂದರು. 

ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ನಿಪ್ಪಾಣಿ ಮತ್ತು ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರಗಳಲ್ಲಿ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿ ಕಾರ್ಯಕ್ಕಾಗಿ 20 ಕೋಟಿ ರೂ. ಅನುದಾನ ಮಂಜೂರಾಗಿದೆ. ಈಗಾಗಲೇ ನಾಲ್ಕು ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಚಾಲನೆ ಕೊಡಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಮತ್ತು ಅಧಿಕಾರಿಗಳು ಸೂಕ್ತ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿದರು. 

ಬೋರಗಾಂವಾಡಿ ಕ್ರಾಸದಿಂದ ಬೋರಗಾಂವ ವೃತ್ತದವರೆಗೆ ರಸ್ತೆ ನಿರ್ಮಾಣಕ್ಕೆ 3.50 ಕೋಟಿ ರೂ ಅನುದಾನ ಮಂಜೂರು. ಭೋಜ ಕ್ರಾಸದಿಂದ ಭೋಜವರೆಗೆ ರಸ್ತೆ ನಿರ್ಮಾಣಕ್ಕೆ 4.70 ಕೋಟಿ ರೂ ಅನುದಾನ ಮಂಜೂರು. ಬೇಡಕಿಹಾಳ-ಗಳತಗಾ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ ಅನುದಾನ ಮಂಜೂರು ಮತ್ತು ಕುಪ್ಪಾಣವಾಡಿ ಕ್ರಾಸದಿಂದ ನಿಪ್ಪಾಣಿ-ಮುಧೊಳ ಕೂಡ ರಸ್ತೆಗೆ 9.80 ಕೋಟಿ ರೂ ಅನುದಾನ ಮಂಜೂರಾಗಿದೆ ಎಂದರು. 

ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮುಖಂಡ ಉತ್ತಮ ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಪಂಕಜ ಪಾಟೀಲ, ಅಣ್ಣಾಸಾಹೇಬ ಹವಲೆ, ಪಿಂಟೂ ಕಾಂಬಳೆ, ಬಸವರಾಜ ಪಾಟೀಲ, ಶಿವಾನಮದ ಬಿಜಲಿ, ಸಮಿತ್ರಾ ಉಗಳೆ, ಪ್ರಕಾಶ ವಂಟಮುತ್ತೆ, ರಾಜು ವಡ್ಡರ, ರಾಜು ವಂಟಮುತ್ತೆ, ವಿಜಯ ಮಾಂಜ್ರೇಕರ,ಮಹಾದೇವ ಕವಲಾಪೂರೆ ಮುಂತಾದವರು ಇದ್ದರು.