ಸರ್ಕಾರದ ಪ್ರಾಯೋಜಿತ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಂಸದ ಉದಾಸಿ ಸೂಚನೆ

ಹಾವೇರಿ: ಸರಕಾರಿ  ಪ್ರಾಯೋಜಿತ ಯೋಜನೆಗಳು ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆಯಾಗಿಲ್ಲ. ಪ್ರಾಯೋಜಿತ ಯೋಜನೆಗಳನ್ನು ಜಾರಿಗೆ ತರಲು ಬ್ಯಾಂಕ್ ಅಧಿಕಾರಿಗಳು ಹಾಗೂ ಲೈನ್ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಬೇಕು. ಸಾಲದ ಅಜರ್ಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸಂಸದರಾದ ಶಿವಕುಮಾರ ಉದಾಸಿ ಅವರು ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಬ್ಯಾಂಕ್ ಅಧಿಕಾರಿಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಸಲಹಾ ಸಮಿತಿಯ ತ್ರೈಮಾಸಿಕ ಸಭೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಸಕರ್ಾರದ ವಿವಿಧ ನಿಗಮಗಳಡಿ ಆಥರ್ಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಜೀವನ ಮಟ್ಟ ಸುಧಾರಣೆಗೆ ಹಲವು ಸ್ವಾವಲಂಬಿ ಯೋಜನೆಗಳಡಿ ಫಲಾನುಭವಿಗಳಿಗೆ ಸಹಾಯಧನ ಸಹಿತ ಸಾಲ ನೀಡುವ ಕಾರ್ಯಕ್ರಮಗಳಿವೆ. ಬಹಳಷ್ಟು ಜನರಿಗೆ ಬ್ಯಾಂಕ್ಗಳಲ್ಲಿ ಸಕಾಲಕ್ಕೆ ಸಾಲ ಸೌಲಭ್ಯ ದೊರಕುವುದಿಲ್ಲ. ಇಂತಹ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಿ ದುರ್ಬಲ ವರ್ಗದವರಿಗೆ ತ್ವರಿತವಾಗಿ ನೆರವು ಒದಗಿಸಲು ಸೂಚನೆ ನೀಡಿದರು.

ಸ್ವ ಉದ್ಯೋಗ ಯೋಜನೆಯಡಿ ಸಾಲ ಸಹಾಯಧನ ಕೋರಿ ಅಜರ್ಿ ಸಲ್ಲಿಸುವ ಬಹಳಷ್ಟು ಪ್ರಕರಣಗಳಲ್ಲಿ ವಯೋಬಲ್ ಇಲ್ಲ ಎನ್ನುವ ಕಾರಣಕ್ಕೆ ಅಜರ್ಿಗಳು ಬ್ಯಾಂಕ್ಗಳಲ್ಲಿ ತಿರಸ್ಕರಿಸಲಾಗುತ್ತದೆ. ಇದಕ್ಕೆ ಫಲಾನುಭವಿಗಳಿಗೆ ಮಾರ್ಗದರ್ಶನದ ಕೊರತೆ ಇರುತ್ತದೆ. ಈ ಕಾರಣಕ್ಕಾಗಿ ಎಲ್ಲ ಬ್ಯಾಂಕ್ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅನುಷ್ಠಾನಾಧಿಕಾರಿಗಳು ಪ್ರತಿ 15ದಿನಕ್ಕೊಮ್ಮೆ ಸಭೆ ನಡೆಸಿ ಯಾವ ಯಾವ ಉದ್ಯಮಗಳನ್ನು ಕೈಗೊಂಡರೆ ನೆರವು ದೊರೆಯುತ್ತದೆ ಎಂಬುದರ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಈ ಕುರಿತಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಆಸಕ್ತಿ ವಹಿಸಿ ಸಭೆ ನಡೆಸಲು ಕ್ರಮ ಜರುಗಿಸುವಂತೆ ಸೂಚಿಸಿದರು.

ಫಸಲ್ ಬೀಮಾ ಯೋಜನೆಯಡಿ ನೀರಾವರಿ ಬೆಳೆಗಳನ್ನು ಮಳೆ ಆಧಾರಿತ ಎಂದು ಹಾಗೂ ಮಳೆ ಆಧಾರಿತ ಬೆಳೆಗಳನ್ನು ನೀರಾವರಿ ಎಂದು ಆರ್.ಟಿ.ಸಿ.ಗಳಲ್ಲಿ ವಿಮಾ ಕಂಪನಿಗಳು ತಪ್ಪಾಗಿ ನಮೂದಿಸಿದ ಪ್ರಕರಣಗಳಿಂದ ರೈತರು ವಿಮಾ ವಂಚಿತರಾಗುತ್ತಿದ್ದಾರೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮವಹಿಸಬೇಕು. ಜಿಲ್ಲೆಯಲ್ಲಿ ಬೆಳೆ ವಿಮೆಗೆ ಸಂಬಂಧಿಸಿದ ಪರಿಹಾರ ಹಣ ಪಾವತಿಯ ಬಾಕಿ ಕುರಿತ ಪ್ರಕರಣಗಳು ಬ್ಯಾಂಕ್ಗಳಲ್ಲಿದ್ದರೆ ತ್ವರಿತವಾಗಿ ಪಾವತಿಗೆ ಕ್ರಮವಹಿಸುವಂತೆ ಸೂಚನೆ ನೀಡಿದರು.

ತ್ವರಿತವಾಗಿ ಬ್ಯಾಂಕ್ ಸೇವೆ ಜನರಿಗೆ ಲಭ್ಯವಾಗುವ ನಿಟ್ಟಿನಲ್ಲಿ ಗ್ರಾಮೀಣ ವಲಯದಲ್ಲಿ ಹೆಚ್ಚುವರಿ ಬ್ಯಾಂಕ್ ಶಾಖೆಗಳನ್ನು ಆರಂಭಿಸುವ ಅಗತ್ಯವಿದೆ. ಜಿಲ್ಲೆಯ 17 ಕಡೆ ಬ್ಯಾಂಕ್ ಶಾಖೆಗಳ ಆರಂಭಿಸಲು ಬೇಡಿಕೆ ಬಂದಿದೆ. ವಹಿವಾಟು, ಬ್ಯಾಂಕ್ ಖಾತೆಗಳ ಸಂಖ್ಯೆ ಆಧರಿಸಿ ಹೊಸ ಶಾಖೆಗಳನ್ನು ತೆರೆಯುವ ಕುರಿತಂತೆ ವರದಿ ಸಲ್ಲಿಸಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.

ಅಸಮಾಧಾನ: ಎಸ್.ಬಿ.ಐ. ಬ್ಯಾಂಕ್ ಠೇವಣಿ ಸಂಗ್ರಹಕ್ಕಿಂತ ಸಾಲ ನೀಡುವ ಪ್ರಮಾಣ ಕಡಿಮೆ ಇದೆ. ಠೇವಣಿ ಸಂಗ್ರಹಮಾಡುವ ಆಸಕ್ತಿ, ಸಾಲ ನೀಡುವಲ್ಲಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಈ ಕಾರಣಕ್ಕಾಗಿ ಸಕರ್ಾರದ ಡಿಪಾಜಿಟ್ಗಳನ್ನು ಎಸ್.ಬಿ.ಐ. ಹೊರತುಪಡಿಸಿ ಬೇರೆ ಬ್ಯಾಂಕ್ಗಳಲ್ಲಿ ಡೆಪಾಜಿಟ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೇಕಾರರ ಸಾಲ ಮನ್ನಾ ಕುರಿತಂತೆ ಎಷ್ಟು ಫಲಾನುಭವಿಗಳಿದ್ದಾರೆ, ಎಷ್ಟು ಸಾಲದ ಮೊತ್ತವಿದೆ, ಎಷ್ಟು ಹಣ ಬೇಕಾಗುತ್ತದೆ ಎಂಬ ಮಾಹಿತಿ ನೀಡಲು ವಿಫಲವಾದ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಸಹಾಯಕ ವ್ಯವಸ್ಥಾಪಕ ರಾಜೇಶ ಅವರು ಜಿಲ್ಲೆಯ ಬ್ಯಾಂಕುಗಳ ಪ್ರಗತಿ ಕುರಿತಂತೆ ವಿವರಣೆ ನೀಡಿ, ಜಿಲ್ಲೆಯಲ್ಲಿ ವಿವಿಧ ಬ್ಯಾಂಕಿಂಗ್ ಸಂಸ್ಥೆಯ 315 ಗ್ರಾಮೀಣ ವಲಯ , 120 ಅರೆನಗರ  ವಲಯ ಹಾಗೂ 23 ಶಾಖೆಗಳು ನಗರ ಪ್ರದೇಶದಲ್ಲಿ ಒಳಗೊಂಡಂತೆ ಒಟ್ಟಾರೆ 458 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಸೆಪ್ಟೆಂಬರ್ -2019ರ ಅಂತ್ಯಂಕ್ಕೆ ರೂ. 5511.04 ಕೋಟಿ ರೂ. ಠೇವಣಿ  ಹಾಗೂ ಮುಂಗಡ ರೂ.5667.97 ಕೋಟಿಗಳಾಗಿವೆ ಎಂದು ವಿವರಿಸಿದರು.

ಜೂನ್-2019ರ ವೇಳೆಗೆ ಆದ್ಯತಾ ವಿತರಣೆ ಗುರಿಯು ರೂ.1114.58 ಕೋಟಿಯಾಗಿದ್ದು, ಈ ಪೈಕಿ 503.07 ಕೋಟಿ ರೂ. ಸಾಲ ವಿತರಿಸಲಾಗಿದೆ. ಕೃಷಿಗೆ ರೂ.886.01 ಕೋಟಿ ಗುರಿಯಲ್ಲಿ ರೂ.319.41 ಕೋಟಿ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ವಾಣಿಜ್ಯ ಬ್ಯಾಂಕುಗಳು ಪ್ರತಿಶತ 12 ರಷ್ಟು ಸಾಲ ವಿತರಣೆ ಮಾಡಿದರೆ ಕೆ.ವಿ.ಜಿ.ಬ್ಯಾಂಕ್ 11 ರಷ್ಟು, ಕೆಸಿಸಿ ಮತ್ತು ಕೆ.ಎಸ್.ಎಫ್.ಸಿ. ಶೇ.8ರಷ್ಟು ಸಾಲ ವಿತರಣೆ ಮಾಡಿ ಸಾಧನೆ ಮಾಡಿದ್ದಾರೆ. ಜಿಲ್ಲೆಯಲ್ಲಿ ದುರ್ಬಲ ವರ್ಗದವರಿಗೆ ಈವರೆಗೆ ರೂ.1947.62 ಕೋಟಿ ಸಾಲ ವಿತರಣೆಯಾಗಿದೆ. ಮಹಿಳೆಯರಿಗೆ ರೂ.1156 ಕೋಟಿ, ಅಲ್ಪಸಂಖ್ಯಾತರಿಗೆ ರೂ.151 ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.

ಬಡತನ ನಿಮರ್ೂಲನಾ ವಿವಿಧ ಯೋಜನೆಗಳಡಿ ಇಲಾಖೆಯ ವಿವಿಧ ಅಭಿವೃದ್ಧಿ ಯೋಜನೆಗಳ ಸಾಧನೆ ತೃಪ್ತಿಕರವಾಗಿದೆ. ಈ ಯೋಜನೆಗಳಡಿ ಬಾಕಿ ಉಳಿದಿರುವ ಅಜರ್ಿಗಳನ್ನು ಡಿಸೆಂಬರ್ ಅಂತ್ಯಕ್ಕೆ ಇತ್ಯರ್ಥಪಡಿಸಲು ಸೂಚಿಸಿದರು.

2019-20ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ ಬೀಮಾ ಯೋಜನೆಯಡಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 62,612 ರೈತರು ನೋಂದಾಯಿಸಿಕೊಂಡಿದ್ದಾರೆ ಹಾಗೂ ಹಿಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ. ಎಂ.ಜಿ.ಎನ್.ಆರ್.ಇ.ಜಿ.ಎ. ಫಲಾನುಭವಿಗಳ ಎಸ್.ಬಿ. ಖಾತೆಗಳಿಗೆ ಆಧಾರ ಲಿಂಕೇಜ್ ಮಾಡುವಲ್ಲಿ ಪ್ರಗತಿ ಕಡಿಮೆ ಇದ್ದು ಈ ದಿಶೆಯಲ್ಲಿ  ಶೇ.100 ರಷ್ಟು ಸಾಧನೆ ಮಾಡಲು ವಿವಿಧ ಬ್ಯಾಂಕ್ಗಳ ಮುಖ್ಯಸ್ಥರಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿ.ಪಂ.ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ, ಬೆಂಗಳೂರಿನ ಆರ್.ಬಿ.ಐ. ಎಲ್.ಡಿ.ಓ ಎ.ವಿ.ಬಾಲಚಂದರ, ನಬಾಡರ್್ ಡಿ.ಡಿ.ಎಂ. ಮಹೇದ ಕೀತರ್ಿ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಪ್ರಭುದೇವ ಎನ್.ಜಿ.  ಹಾಗೂ ಜಿಲ್ಲೆಯ ವಿವಿಧ ಬ್ಯಾಂಕುಗಳ ಮುಖ್ಯಸ್ಥರು, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.