ಹಾಲುಮತ ಸಮಾಜದಿಂದ ಶಾಸಕ ವಿಶ್ವಾಸ ವೈದ್ಯ ಅವರಿಗೆ ಭವ್ಯ ಸನ್ಮಾನ
MLA Vishwas Vaidya honored by Halumatha Samaj
ಸವದತ್ತಿ 24: ತಾಲೂಕಿನ ಹಾಲುಮತ ಸಮಾಜದ ಶ್ರೀ ಕನಕ ಸಮುದಾಯದ ಭವನ ಹಾಗೂ ವಿವಿಧೋದ್ದೇಶಗಳಿಗಾಗಿ ಯಡ್ರಾವಿ ರಸ್ತೆ ಮಾರ್ಗ 5 ಎಕರೆ ಜಮೀನು ಮಂಜೂರು ಮಾಡಿಸಿದ ಹಿನ್ನೆಲೆಯಲ್ಲಿ, ಶಾಸಕ ವಿಶ್ವಾಸ ವೈದ್ಯ ಅವರನ್ನು ಸಮಾಜದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಶಾಸಕ ವಿಶ್ವಾಸ ವೈದ್ಯ ಅವರ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಈ ಸಮಾರಂಭದಲ್ಲಿ ಕುರುಬ ಸಮಾಜದ ಮುಖಂಡರು ಸೇರಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಸಮಾಜದ ಶ್ರೇಯೋಭಿವೃದ್ಧಿಗೆ ಜಮೀನು ಒದಗಿಸಿಕೊಟ್ಟಿರುವುದು ನನಗೆ ವೈಯಕ್ತಿಕವಾಗಿ ದೊಡ್ಡ ಆತ್ಮತೃಪ್ತಿ ನೀಡಿದೆ. ಮಂಜೂರಾದ ಈ 5 ಎಕರೆ ಜಾಗದಲ್ಲಿ ಮುಂಬರುವ ದಿನಗಳಲ್ಲಿ ಸಮಾಜಕ್ಕೆ ಉಪಯುಕ್ತವಾಗುವಂತಹ ಸುಸಜ್ಜಿತ ಭವನ ನಿರ್ಮಾಣವಾಗಲಿ ಎನ್ನುವುದು ನನ್ನ ಆಶಯ. ಕ್ಷೇತ್ರದ ಪ್ರತಿಯೊಂದು ಸಮುದಾಯದ ಏಳ್ಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸಲು ನಾನು ಸದಾ ಬದ್ಧನಾಗಿದ್ದೇನೆ, ಎಂದು ಅವರು ಹೇಳಿದರು.ಇದೇ ಸಂದರ್ಭದಲ್ಲಿ ಡಿ.ಡಿ. ಟೊಪೋಜಿ ಮಾತನಾಡಿದ ಅವರು, ಸಮಾಜದ ಬಹುದಿನಗಳ ಬೇಡಿಕೆಯಾಗಿದ್ದ ಜಾಗವನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ಮುಖಾಂತರ ಮಂಜೂರು ಮಾಡಿಸುವಲ್ಲಿ ಅವರು ವಹಿಸಿದ ಶ್ರಮ ಶ್ಲಾಘನೀಯ. ಇದು ಸಮಾಜದ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ, ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಜಿ.ಜಿ.ಕಣವಿ,ಅಶ್ವಥ್ ವೈದ್ಯ, ಪ್ರವೀಣ ರಾಮಪ್ಪನವರ, ಕಲ್ಲಪ್ಪ ಪೂಜೇರ, ಮಾರುತಿ ಬಸಲಿಗುಂದಿ, ಹನಮಂತ ಸಿಂಗನವರ, ಸಂತೋಷ ನೊರೆಯವರ, ಗದಿಗ್ಯಪ್ಪ ಕುರಿ, ಮೈಲಾರ್ಪ ಹೊಸಮನಿ, ಈರ್ಪ ಚಿಕುಂಬಿ, ರವಿ ಯಾದವಾಡ, ಯಲ್ಲಪ್ಪ ಕುಲೂರ, ಬಸವರಾಜ ಜಗ್ಲಿ ಹಾಗೂ ಕಾರ್ಯಕರ್ತರು ಇದ್ದರು.
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು 