ಗ್ರಾಮಗಳ ನಾನಾ ಅಭಿವೃದ್ಧಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ
MLA Srinivas Mane performs Bhoomi Pooja for various development of villages
ಹಾನಗಲ್ 21: ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುರಳೇಶ್ವರ ಮತ್ತು ಕುಂಟನ ಹೊಸಳ್ಳಿ ಗ್ರಾಮಗಳಲ್ಲಿ 2024-25 ನೇ ಸಾಲಿನ ಹಾಗೂ 2025-26 ನೇ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಒಟ್ಟು 55 ಲಕ್ಷ ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. ರಸ್ತೆ ಅಭಿವೃದ್ಧಿ, ಸಿಸಿರಸ್ತೆ, ಸಿಡಿ ನಿರ್ಮಾಣ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ, ಗ್ರಾಮಸ್ಥರ ಕುಂದು, ಕೊರತೆ ಸಹ ಆಲಿಸಿದ ಶಾಸಕ ಮಾನೆ, ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಒಂದು ಕಡೆ ಕುಳಿತು ಹಂಚಿಕೆ ಮಾಡದೇ ಪ್ರತಿಯೊಂದು ಗ್ರಾಮಗಳಿಗೂ ಸಹ ಭೇಟಿ ನೀಡಿ ಗ್ರಾಮಸ್ಥರ ಬೇಡಿಕೆಗೆ ಅನುಸಾರವಾಗಿ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಒಂದು ಕೋಟಿ ರೂ.ವರೆಗೆ ಅನುದಾನ ಹಂಚಿಕೆ ಮಾಡಲಾಗಿದೆ.
ಪ್ರಮುಖವಾಗಿ ರಸ್ತೆ ಅಭಿವೃದ್ಧಿ, ಸಿಸಿರಸ್ತೆ, ಸಿಡಿ ನಿರ್ಮಾಣದಂತ ಪ್ರಮುಖ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಗ್ರಾಪಂ ಅಧ್ಯಕ್ಷೆ ಯಂಕವ್ವ ಬಂಡಿವಡ್ಡರ, ಉಪಾಧ್ಯಕ್ಷ ನಾಗರಾಜ ತಳಗೇರಿ, ಸದಸ್ಯ ರೆಹೆಮತ್ ನೆಲ್ಲಿಕೊಪ್ಪ, ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಜಗದೀಶ ವಾಲ್ಮೀಕಿ, ಖಾಸೀಂಸಾಬ ಸಾವಿಕೇರಿ, ಬಸವರಾಜ ಹಾನಗಲ್, ಅಶೋಕ ಸುಭಾನಜಿ, ಅಬ್ದುಲಖಾದರ ಶಿರಗೋಡ, ಪರಸಪ್ಪ ನಾಯ್ಕ, ಬಸವರಾಜ ಮೈಲಾರದ, ಹನುಮಂತಪ್ಪ ನಾಯಕ, ಪರಸಪ್ಪ ನಾಯಕ, ಬಸನಗೌಡ ದೊಡ್ಡಗೌಡ್ರ, ಖಾದರಸಾಬ ಮಲ್ಲಿಗಾರ ಸೇರಿದಂತೆ ಅನೇಕರಿದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 