ವಾರ್ಡಗಳ ಪರಿವಿಕ್ಷಣೆ ಮಾಡಿದ ಶಾಸಕ ಸಿದ್ದು ಸವದಿ
MLA Siddu Savadi inspects wards
ಲೋಕದರ್ಶನ ವರದಿ
ಮಹಾಲಿಂಗಪುರ 18: ತೇರದಾಳ್ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ನಗರದ ಹುಲಕುಂದ ಓಣಿ, ಪೋಸ್ಟ್ ಓಣಿ,ಬ್ಯಾಳಿ ಓಣಿ, ಬರಗಿ ಓಣಿಗಳಲ್ಲಿ ದಿನಾಂಕ 18 ರಂದು ಬೆಳ್ಳಿಗೆ ಎಂಟು ಗಂಟೆಗೆ ಪಕ್ಷದ ಕಾರ್ಯಕರ್ತರೊಂದಿಗೆ ಸಂಚರಿಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.
ನಂತರ ಮಾತನಾಡಿದ ಶಾಸಕ ಸಿದ್ದು ಸವದಿ ಸಾರ್ವಜನಿಕರು ತಮ್ಮ ನಿತ್ಯದ ಅವಶ್ಯಕತೆಗಳಾದ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ, ಗಟಾರ ಸ್ವಚ್ಛತೆ ಇಲ್ಲ ಕೆಲವೊಂದು ಓಣಿಯಲ್ಲಿ ನಡೆದಾಡಲು ಪರದಾಡುವ ಪರಿಸ್ಥಿತಿ ಇದದ್ದು ಕಂಡು ಬಂತು, ಕೆಲವೊಂದಿಷ್ಟು ಜನ ತಮ್ಮ ಅವಶ್ಯಕತೆ ಮುಗಿದ ಮೇಲೆ ನೀರನ್ನು ಗಟಾರಕ್ಕೆ ಬಿಟ್ಟು ಮುಂದಿನವರಿಗೆ ನೀರು ಹೋಗಲಿ ಎನ್ನುವ ಕನಿಷ್ಠ ಮಾನವಿತೆಯನ್ನು ಕಳೆದುಕೊಂಡಿದ್ದು ಕಂಡು ಬಂತು, ಸಾರ್ವಜನಿಕರು ಸಹಕಾರ ಮನೋಭಾವನೆ ಬೆಳೆಸಿ ಕೊಂಡು ತಮ್ಮ ಅವಶ್ಯಕತೆ ಮುಗಿದ ಮೇಲೆ ಮುಂದಿನವರಿಗೆ ಅನುಕೂಲ ಆಗುವಂತೆ ನಲ್ಲಿಗಳನ್ನು ಬಂದ ಮಾಡಿ ಸಹಕರಿಸಬೇಕು ಎಂದು ಶಾಸಕರು ಹೇಳಿದರು.
ಅಲ್ಲದೆ ಅವಶ್ಯಕತೆ ಇಲ್ಲದ ಜಾಗೆಯಲ್ಲಿರುವ ನೀರಿನ ಟ್ಯಾಂಕಗಳನ್ನು ಅವಶ್ಯಕತೆ ಇರುವ ಕಡೆಗೆ ಸ್ಥಳಾಂತರಿಸಿ. ಮತ್ತು 24 * 7 ನೀರಿನ ಜೋಜನೆಯವರು ಪೈಪ ಅಳವಡಿಕೆ ಸಲುವಾಗಿ ಸಿಕ್ಕ ಸಿಕ್ಕಲ್ಲಿ ರಸ್ತೆ ಅಗೆದು ಹಾಗೆ ಬಿಟ್ಟಿದ್ದಾರೆ. ಇದರಿಂದ ರಸ್ತೆಯಲ್ಲಿ ಜನರಿಗೆ ತಿರುಗಾಡಲು ತೊಂದರೆಯಾಗುತ್ತದೆ ಕಾರಣ ಎಲ್ಲ ರಸ್ತೆಗಳನ್ನು ಸ್ವಚ್ಚಗೋಳಿಸುವಂತೆ ಸಂಭಂದ ಪಟ್ಟ ಅಧಿಕಾರಿಗೆ ಸೂಚಿಸಿದರು. ಮತ್ತು ನಗರದಲ್ಲಿ ಕುಡಿಯುವ ನೀರು ಮತ್ತು ಗಟಾರ ಸ್ವಚ್ಚವಾಗಿರುವಂತೆ ನೋಡಿಕೊಳ್ಳಲು ಮುಖ್ಯಾಧಿಕಾರಿಯವರಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ,ಮಾಜಿ ಸದಸ್ಯರಾದ ಶೇಖರ ಅಂಗಡಿ, ಚನ್ನಬಸು ಯರಗಟ್ಟಿ, ಮುಖಂಡರಾದ, ಶಿವಾನಂದ ಅಂಗಡಿ, ಈರ್ಪ ದಿನ್ನಿಮನಿ,ಮಲ್ಲು ದಲಾಲ, ಪ್ರಶಾಂತ ಮುಖ್ಯನ್ನವರ, ಮಹೇಶ ಜಿಡ್ಡಿಮನಿ, ರಾಮು ಪಾತ್ರೋಟ, ಪುರಸಭೆ ಸಿಬ್ಬಂದಿ, ಉಪ ಸಿಬ್ಬಂದಿ, ನೀರು ಸರಬುರಾಜ ವಿಭಾಗ, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 