ಖಿಳೇಗಾಂವ ಏತ ನೀರಾವರಿ ಯೋಜನೆಯ ಎರಡು ಮೋಟಾರ್ ಗಳಿಗೆ ಶಾಸಕ ರಾಜು ಕಾಗೆ ಚಾಲನೆ
MLA Raju Kage launches two motors of the Khilegaon Lift Irrigation Project
ಅಥಣಿ 19 : ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಪ್ರಥಮ ಹಂತದ ಎರಡು ಮೋಟಾರಗಳಿಗೆ ಚಾಲನೆ ನೀಡುವುದರಿಂದ ಸುಮಾರು 15 ಸಾವೀರ ಹೆಕ್ಟೇರ್ ಅಥವಾ 40 ಸಾವೀರ ಎಕರೆ ಭೂಮಿ ನೀರಾವರಿಗೊಳಪಡಲಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು. ಅವರು ಐನಾಪುರದ ಜಾಕಲವೆಲ್ಲನಲ್ಲಿ ಕಾಲುವೆಗೆ ನೀರು ಹರಿಸಲು ಬಟನ್ ಒತ್ತುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು. ಒಟ್ಟು 1300 ಕೋಟಿ ವೆಚ್ಚದ ಈ ಯೋಜನೆಗೆ ಈಗಾಗಲೇ ಸುಮಾರು 1200 ಕೋಟಿ ಹಣ ಬಿಡುಗಡೆಯಾಗಿದ್ದು, ಇನ್ನೂ 100 ರಿಂದ 200 ಕೋಟಿ ರೂ.ಹಣ ಬಿಡುಗಡೆಯಾಗಬೇಕು ಆಗ ಮಾತ್ರ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದ ಅವರು ಈ ಯೋಜನೆ ಪೂರ್ಣಗೊಂಡ ನಂತರ ಅತ್ಯಂತ ಬರಗಾಲ ಪೀಡಿತ ಸುಮಾರು 25 ರಿಂದ 30 ಗ್ರಾಮಗಳ 27460 ಹೆಕ್ಟೇರ ಅಥವಾ 65 ರಿಂದ 70 ಸಾವೀರ ಎಕರೆ ಭೂಮಿ ನೀರಾವರಿಗೊಳಪಡಲಿದೆ ಎಂದು ಹೇಳಿದರು.
ಈ ಯೋಜನೆಗೆ 2017 ರಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಯೋಜನೆ ಈಗಾಗಲೇ ಮುಕ್ತಾಯಗೊಳ್ಳಬೇಕಿತ್ತು ಆದರೆ ಅನುದಾನ ಬಿಡುಗಡೆಯಲ್ಲಿ ವಿಳಂಬ, ಗುತ್ತಿಗೆದಾರರಿಂದ ಅಡತಡೆ ಸೇರಿದಂತೆ ಅನೇಕ ಅಡಚಣೆಗಳು ಬಂದ ಪರಿಣಾಮ ಈ ಯೋಜನೆ ಅನುಷ್ಠಾನಕ್ಕೆ ವಿಳಂಬವಾಗಿದೆ ಎಂದ ಅವರು ಕೆಲವೇ ತಿಂಗಳಲ್ಲಿಯೇ ಈ ಯೋಜನೆಗೆ ಬೇಕಾಗುವ ಅನುದಾನ ಬಿಡುಗಡೆಯಾಗಿ ಯೋಜನೆ ಪೂರ್ಣಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ನೀರಾವರಿ ನಿಗಮದ ಸಿ.ಇ ನಾಗರಾಜ ಬಿ.ಎ, ಕಾ.ಇ. ಪ್ರವೀಣ ಹುಣಸಿಕಟ್ಟಿ, ಸ.ಕಾ.ಇ ಪ್ರಶಾಂತ ಪೊತದಾರ, ಸಹಾಯಕ ಅಭಿಯಂತರ ಬಸವರಾಜ ಗಲಗಲಿ, ಗಾಯತ್ರಿ ಕನ್ಸಟ್ರಕ್ಷನ್ಸನ ಎಸ್.ಜೆ.ಎಮ್. ಎಮ್.ವ್ಹಿ.ಶೇಖರ, ಜಿ.ಎಮ್. ನಾಗೇಶ ಕೆ. ಧುರೀಣರಾದ ಘೂಳಪ್ಪ ಜತ್ತಿ, ದಿಗ್ವಿಜಯ ಪವಾರ ದೇಸಾಯಿ, ಶಿವಾನಂದ ಗೊಲಭಾವಿ, ಅಶೋಕ ಕೌಲಗುಡ್ಡ, ಕುಮಾರ ಪಾಟೀಲ, ಅರುಣ ಗಾಣಿಗೇರ, ಪ್ರಕಾಶ ಕೊರಬು, ವಿಶ್ವನಾಥ ನಾಮದಾರ, ಅರವಿಂದ ಕಾರ್ಚಿ, ಚಂದ್ರಕಾಂತ ಇಮ್ಮಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 