ಚಮಕೇರಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಾಜು ಕಾಗೆ ಚಾಲನೆ

ಚಮಕೇರಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಾಜು ಕಾಗೆ ಚಾಲನೆ MLA Raju Kage launches road development work in Chamakeri

ಕಾಗವಾಡ 27: ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕ್ಷೇತ್ರದ ಅಭಿವೃದ್ಧಿಗಾಗಿ 50 ಕೋಟಿ ಅನುದಾನ ನೀಡಿದ್ದು, ಇದರಲ್ಲಿ ನಿರ್ಧಿಷ್ಟ ಕೆಲಸಗಳಿಗೆ ಬಳಸಬೇಕೆಂಬ ನಿರ್ಭಂಧದಿಂದಾಗಿ ತೊಂದರೆಯಾಗುತ್ತದೆ. ಈ ಕುರಿತು ಸಿಎಂ ಅವರು, ಎಲ್ಲ ಶಾಸಕರ ಸಭೆ ಕರೆದಿದ್ದು, ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಸಾಕಷ್ಟು ಅನುದಾನದ ಅವಶ್ಯಕತೆ ಇದೆ. ಅದನ್ನು ಅವರ ಗಮನಕ್ಕೆ ತರುತ್ತೇನೆಂದು ಶಾಸಕ ರಾಜು ಕಾಗೆ ತಿಳಿಸಿದ್ದಾರೆ. 

ಅವರು ಶನಿವಾರ ದಿ. 26 ರಂದು ಮತಕ್ಷೇತ್ರದ ಚಮಕೇರಿ ಗ್ರಾಮದಲ್ಲಿ ಚಮಕೇರಿ-ಬ್ಯಾಡರಟ್ಟಿ-ಸಿಂಧೂರ ಮಹಾರಾಷ್ಟ್ರದ ಗಡಿ ವರೆಗಿನ 8.77 ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ ರೂ. 9 ಕೋಟಿ ಅನುದಾನದ ಕಾಮಗಾರಿ ಮತ್ತು ಬ್ಯಾಡರಹಟ್ಟಿ ಗ್ರಾಮದಲ್ಲಿ ಸದಾಶಿವಮುತ್ಯಾನ ಮಂದಿರದಲ್ಲಿ ರೂ. 20 ಲಕ್ಷ ಅನುದಾನದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. 

ಈಗ ಬಿಡುಗೊಂಡ 50 ಕೋಟಿ ಅನುದಾನದಲ್ಲಿ 25 ಕೋಟಿ ಲೋಕೋಪಯೋಗಿ ಇಲಾಖೆಗೆ, 12.5 ಕೋಟಿ ಪಂಚಾಯತ ರಾಜ್ಯ ಇಲಾಖೆಗೆ ಮತ್ತು ಇನ್ನೂಳಿದ 12.5 ಕೋಟಿ ಶಾಸಕರ ನಿಧಿಗೆ ಹಂಚಿಕೆ ಮಾಡಲಾಗಿದೆ. ವಜುಲೈ 31 ರ ಒಳಗಾಗಿ ಮುಖ್ಯಮಂತ್ರಿಗಳಿಗೆ ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಪಟ್ಟಿ ಕೊಡಬೇಕೆಂದು ಸಿಎಂ ಅವರು ಸೂಚನೆ ನೀಡಿದ್ದಾರೆ. ಜೊತೆಗೆ ಈ ಎಲ್ಲ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಆ. 15 ರ ಒಳಗಾಗಿ ಪೂರ್ಣಗೊಳ್ಳಲಿದೆ ಎಂದರು.  

ಈ ಸಮಯದಲ್ಲಿ ಲೋಕೋಪಯೋಗಿ ಇಲಾಖೆಯ ಮಲ್ಲಿಕಾರ್ಜುನ ಮಗದುಮ್ಮ,  ಜಿ.ಪಂ. ಇಲಾಖೆಯ ವೀರಣ್ಣಾ ವಾಲಿ, ಧುರೀಣರಾದ ಬಸವರಾಜ ಪಾಟೀಲ, ರಫಿಕ್ ಪಟೇಲ್, ಅಮಸಿದ್ಧ ಮಂಗರೂಳ, ಬಸವರಾಜ ಮಗದುಮ್, ಸಿದ್ಧಾರೂಢ ನೇಮಗೌಡ, ಶಿವಪುತ್ರ ನಾಯಿಕ, ರಾಜು ಮರಡಿ, ಸೋಹಿತ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.