ಪಾರ್ಥನಹಳ್ಳಿಯಲ್ಲಿ ಶಾದಿ ಮಹಲಗೆ ಶಾಸಕ ರಾಜು ಕಾಗೆ ಶಂಕುಸ್ಥಾಪನೆ
MLA Raju Kage laid the foundation stone for Shadi Mahal in Parthanahalli
ಅಥಣಿ 05: ಅನಂತಪೂರ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿಯೂ ಹಂತ ಹಂತವಾಗಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು. ಅವರು ಪಾರ್ಥನಹಳ್ಳಿ ಗ್ರಾಮದಲ್ಲಿ ಶಾದಿ ಮಹಲ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ಈ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ನೀರಿನ ತೊಂದರೆ ಇದೆ ಹೀಗಾಗಿ ಬೇಸಿಗೆ ಅವಧಿಯಲ್ಲಿ ನೀರಿನ ಕೊರತೆಯಾಗುತ್ತದೆ ಹೀಗಾಗಿ ಈ ಭಾಗದ ಜನ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ ಎಂದು ಆಗ್ರಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನೀರಾವರಿ ಯೋಜನೆಗಳನ್ನು ಅನುಷ್ಠಾನ ಗೊಳಿಸುವುದಾಗಿ ಹೇಳಿದರು. ಜಿಲ್ಲಾ ಪಂಚಾಯತ ಇಲಾಖೆಯಡಿ ಮಂಜೂರಾದ 20 ಲಕ್ಷ ವೆಚ್ಚದ ಶಾದಿ ಮಹಲ ಕಟ್ಟಡದ ಉಪಯೋಗವನ್ನು ಮುಸ್ಲಿಂ ಸಮಾಜ ಬಾಂಧವರು ಮಾಡಿಕೊಳ್ಳಬೇಕು ಎಂದ ಅವರು ಕಾಮಗಾರಿ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಪಾರ್ಥನಹಳ್ಳಿ ಗ್ರಾಮದ ಮುಖಂಡ ರಫಿಕ್ ಪಟೇಲ್ ಗುದ್ದಲಿ ಪೂಜೆ ನೆರವೇರಿಸಿದರು. ಧುರೀಣರಾದ ಸಿದರಾಯ ತೇಲಿ, ಷರೀಫ ಮುಲ್ಲಾ, ಸದಾಶಿವ ಬಿರಾದಾರ, ಇಲಾಹಿ ಮೋಳೆ, ಬಂಡು ನಾಯಿಕ, ಕಾಡಪ್ಪಾ ಸಿಂಗಾಡಿ, ಸಿಕಂದರ ಪಟೇಲ್, ಇಸ್ಮಾಯಿಲ ಪಟೇಲ್, ರಮೇಶ ಕಾಂಬಳೆ, ಅಮೀರ್ ಪಟೇಲ್, ಇಬ್ರಾಹಿಂ ಮೋಳೆ, ಪಿ.ಡಿ.ಒ ಸುರೇಶ ದೊಡ್ಮನಿ ಸೇರಿದಂತೆ ಅನೇಕರು ಉಪಸಸ್ಥಿತರಿದ್ದರು.
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 