155.84 ಲಕ್ಷ ಅನುದಾನದಲ್ಲಿ ಒಳಚರಂಡಿ ಕಾಮಗಾರಿಗೆ ಶಾಸಕ ಪ್ರಕಾಶ ಕೋಳಿವಾಡ ಭೂಮಿ ಪೂಜೆ ನಡೆಸಿದರು
ರಾಣಿಬೆನ್ನೂರ 13: ಪಟ್ಟಣ ದಿನದಿಂದ ದಿನಕ್ಕೆ ಅತಿ ವೇಗದಲ್ಲಿ ಬೆಳೆಯುತ್ತಿದೆ. ನೂತನ ಬಡಾವಣೆಗಳು ಹೆಚ್ಚುತ್ತಿವೆ. ವರ್ಷಕ್ಕೆ ನೂರಾರು ಮನೆಗಳು ನಿರ್ಮಾಣಗೊಳ್ಳುತ್ತಿದ್ದು, ಜನಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಸಾರ್ವಜನಿಕರ ಸಮಸ್ಯೆಗೆ ಒಳಚರಂಡಿ ಪೈಪ್‌ಲೈನ್ ಮಾರ್ಗವನ್ನು ಸ್ಥಳಾಂತರಿಸುವುದರಿಂದ ಪರಿಹಾರ ಸಿಗಲಿದೆ. ಹಾಗಾಗಿ ಮೂಲ ಸೌಕರ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಇಲ್ಲಿನ ದೇವರಗುಡ್ಡ ರಸ್ತೆಯ ವಾರ್ಡ್ ನಂ.2 ರ ರೈಲ್ವೆ ಮೇಲು ಸೇತುವೆ ಬಳಿ ಒಳಚರಂಡಿ ಪೈಪ್‌ಲೈನ್ ಮಾರ್ಗವನ್ನು ಸ್ಥಳಾಂತರಿಸುವ 155.84 ಲಕ್ಷದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಒಳಚರಂಡಿ ಮಾರ್ಗಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಕಾಮಗಾರಿ ಅನುಕೂಲವಾಗಲಿದೆ ಎಂದರು.
ನಗರಸಭೆ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಪೂಜಾರ, ಶಶಿಧರ ಬಸೆನಾಯಕ, ಪೌರಾಯುಕ್ತ ಎಫ್.ವೈ.ಇಂಗಳಗಿ ಹಾಗೂ ಪರಿಸರ ಎಂಜಿನಿಯರ್ ಮಹೇಶ್ವರ, ಎಂಜಿನಿಯರ್ ಎಂ.ಎಸ್. ಗುಡಿಸಲಮನಿ, ನಿರ್ಮಲಾ, ಮಲ್ಲೇಶಪ್ಪ ಮದ್ಲೇರ, ಮಧು ಕೋಳಿವಾಡ, ಕೋಟೆಪ್ಪ ಹಾಗೂ ಗುತ್ತಿಗೆದಾರರು ಇದ್ದರು.