ಶಾಸಕ ನಾಗೇಂದ್ರ ಅನುದಾನದಲ್ಲಿ 720 ಲಕ್ಷ ರೂ. ರಸ್ತೆ ಕಾಮಗಾರಿಗಳಿಗೆ ಬಿ.ವೆಂಕಟೇಶ್ ಪ್ರಸಾದ್ ಭೂಮಿ ಪೂಜೆ

ಶಾಸಕ ನಾಗೇಂದ್ರ ಅನುದಾನದಲ್ಲಿ 720 ಲಕ್ಷ ರೂ. ರಸ್ತೆ ಕಾಮಗಾರಿಗಳಿಗೆ ಬಿ.ವೆಂಕಟೇಶ್ ಪ್ರಸಾದ್ ಭೂಮಿ ಪೂಜೆ MLA Nagendra grants Rs 720 lakh for road works. B. Venkatesh Prasad performs Bhoomi Puja

ಬಳ್ಳಾರಿ 25:  ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಸನ್ಮಾನ್ಯ ಬಿ. ನಾಗೇಂದ್ರ ಅವರ ಸಹೋದರರು ಹಾಗೂ ಜನಪ್ರಿಯ ನಾಯಕರಾದ ಮಾನ್ಯ ಬಿ.ವೆಂಕಟೇಶ್ ಪ್ರಸಾದ್ ಅವರು ಬಳ್ಳಾರಿ ಗ್ರಾಮಾಂತರ ಪ್ರದೇಶದ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.ಚೆಳ್ಳಗುರ್ಕಿ ಹಾಗೂ ಮಿಂಚೇರಿ ಗ್ರಾಮಗಳಲ್ಲಿ ಸುಮಾರು 50 ಲಕ್ಷ ರೂ., ಗೋಟೂರು ಹಾಗೂ ವಣೆನೂರು ಗ್ರಾಮಗಳಲ್ಲಿ ಸುಮಾರು 170 ಲಕ್ಷ ರೂ., ಹಾಗೂ ಹೊಸ ಯರಗುಡಿ ಮತ್ತು ಮೊಕ ಗ್ರಾಮಗಳಲ್ಲಿ ಸುಮಾರು 500 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಶಾಸಕರಾದ ಬಿ. ನಾಗೇಂದ್ರ ಅವರ ಅನುಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಗ್ರಾಮಗಳ ಅಭಿವೃದ್ಧಿಗೆ ರಸ್ತೆ ಕಾಮಗಾರಿಗಳು ಸಹಕಾರಿಯಾಗಲಿದ್ದು, ಜನರಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದರು.ಈ ಸಂಧರ್ಭದಲ್ಲಿ ಅಣ್ಣ ನಾಗರಾಜ್, ಮಲ್ಲಯ್ಯ, ಶ್ರೀನಿವಾಸ್, ವೀರಸೇನರೆಡ್ಡಿ, ಗೋವರ್ಧನ್ ರೆಡ್ಡಿ,ಇತರರು ಭಾಗವಹಿಸಿದ್ದರು.