ಸ್ಕೇಟಿಂಗ್ ವಿದ್ಯಾರ್ಥಿಗಳಿಗೆ ರಿಂಕ್ ಸೌಲಭ್ಯ ಕಲ್ಪಿಸಲು ಶಾಸಕ ನಾಡಗೌಡ ಮನವಿ

ಸ್ಕೇಟಿಂಗ್ ವಿದ್ಯಾರ್ಥಿಗಳಿಗೆ ರಿಂಕ್ ಸೌಲಭ್ಯ ಕಲ್ಪಿಸಲು ಶಾಸಕ ನಾಡಗೌಡ ಮನವಿ MLA Nadagowda appeals to provide rink facilities for skating students

ಮುದ್ದೇಬಿಹಾಳ 13 : ಜಿಲ್ಲೆಯಲ್ಲಿ ಸಂಚಲಕನ ಮೂಡಿಸಿರುವ ಸ್ಕೇಟಿಂಗ್ ತರಬೇತಿಗೆ ಪಟ್ಟಣದಲ್ಲಿ ಸ್ಕೇಟಿಂಗ್ ರಿಂಕ್ ಸೌಲಭ್ಯವನ್ನು ಒದಗಿಸಿಕೊಡಬೇಕು. ಅಲ್ಲಿಯವರೆಗೂ ಪಟ್ಟಣದ ಪ್ರವಾಸಿ ಮಂದಿರದ ಮುಂದಿನ ಉದ್ಯಾನವನದಲ್ಲಿ ಸ್ಕೇಟಿಂಗ್ ರಿಂಕ್ ರಿಂಕ್ ಮಾಡಿಸಿಕೊಡಬೇಕು ಎಂದು ಗುರುವಾರ ಪಾಲಕರು ಶಾಸಕ ಸಿ.ಎಸ್‌.ನಾಡಗೌಡ ಅಪ್ಪಾಜಿ ಅವರಿಗೆ ಮನವಿ ಸಲ್ಲಿಸಲಾಯಿತು. ಈಗಾಗಲೇ ಕಳೇದ ಮೂರು ವರ್ಷದಿಂದ ಏಕಲವ್ಯ ಸ್ಕೋಲರ್ ಅಕಾಡೆಮಿ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಸ್ಕೇಟಿಂಗ್ ತರಬೇತಿಯನ್ನು ಪಡೆದಿರುವ ಸಾವಿರಾರು ವಿದ್ಯಾರ್ಥಿಗಳು ಜಿಲ್ಲಾ, ರಾಜ್ಯ ಹಾಗೂ ರಾಷ್ಟೊಮಟ್ಟದಲ್ಲಿ ಪಂದ್ಯಾವಳಿಯಲ್ಲಿ ಪಾಲ್ಗೊಂಡು ನಮ್ಮ ಜಿಲ್ಲೆಯನ್ನು ರಾಜ್ಯವನ್ನೆ ತಿರುಗಿ ನೋಡುವಂತೆ ಮಾಡಲಾಗಿದೆ.

ಇಂತಹ ತರಬೇತಿ ನೀಡುವವರಿಗೆ ಸ್ಕೇಟಿಂಗ್ ತರಬೇತಿ ನೀಡಲು ಸೂಕ್ತ ಅವಕಾಶ ಒದಗಿಸಿದರೆ ಕ್ರೀಡೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಪಾಲಕರು ಶಾಸಕರಿಗೆ ಮನವಿ ಮಾಡಿದರು.ಸ್ಪಂಧನೆ ನೀಡಿದ ಶಾಸಕ ನಾಡಗೌಡ: ಪಾಲಕರು ಹಾಗೂ ವಿದ್ಯಾರ್ಥಿಗಳು ಮನವಿ ನೀಡಿದ ಸಂದರ್ಭದಲ್ಲಿ ತಕ್ಷಣದಲ್ಲಿಯೇ ಸ್ಪಂದನೆ ನೀಡಿದ ಶಾಸಕ ಸಿ.ಎಸ್‌.ನಾಡಗೌಡ ಅಪ್ಪಾಜಿ ಅವರು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಇದರ ಬಗ್ಗೆ ಕ್ರೀಯಾ ಯೋಜನೆಯನ್ನು ಸಿದ್ದಪಡಸುವಂತೆ ಸೂಚಿಸಿ ಸರಕಾರದಿಂದ ನಿಮ್ಮ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆಯನ್ನು ನೀಡಿದ ಅವರು ಹೆಚ್ಚಿನ ಅನುಕೂಲಕ್ಕಾಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸ್ಕೇಟಿಂಗ್ ವಿದ್ಯಾರ್ಥಿಗಳ ತರಬೇತಿ ಅನುಕೂಲಕ್ಕಾಗಿ ಅಲ್ಲಿರುವ ಸ್ಥಳದಲ್ಲಿ ಡಾಂಭರಿಕರಣ ಮಾಡಿಸಿಕೊಡಲಾಗುವುದು.

ಇದರಿಂದ ಈಗಾಗಲೇ ತರಬೇತಿಯಲ್ಲಿ ನೃರಿತರಾಗಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಏಕಲವ್ಯ ಸ್ಕೋಲರ್ ಅಕಾಡೆಮಿ ಸ್ಥಾಪಕ ಶಿವಕುಮಾರ ಶಾರದಳ್ಳಿ, ವಿದ್ಯಾರ್ಥಿಗಳ ಪಲಕರಾದ ನಂದಪ್ಪ ಅಸ್ಕಿ, ಅರವಿಂದ ಕೊಪ್ಪ, ಈರಣ್ಣ ಬಳಿಗಾರ, ನಾಗರಾಜ ಯರಗಲ್ಲ, ಚೇತನಾ ಹಾಲ್ಯಾಳ, ನಾಗರಾಜ ಕುಲಕರ್ಣಿ, ಬಸವರಾಜ ಪಾಟೀಲ, ಎಂ.ಎ.ಅಕ್ಕಲಕೋಟ, ನಟರಾಜ ಪಾಟೀಲ, ವಸಂತ ಶೇಟ್ಟಿ, ಮಂಜುನಾಥ ಹಿರೇಮಠ, ರವಿ ದೊಡಮನಿ ಇದ್ದರು.ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಕಾಲೋನಿಯ ಶಾಸಕ ಸಿ.ಎಸ್‌.ನಾಡಗೌಡ ಅಪ್ಪಾಜಿ ಅವರ ಕಛೇರಿಯಲ್ಲಿ ಗುರುವಾರ ಸ್ಕೇಟಿಂಗ್ ವಿದ್ಯಾರ್ಥಿಗಳಿಗೆ ಸೂಕ್ತ ರಿಂಕ್ ಮಾಡಿಸಿಕೊಡುವಂತೆ ಒತ್ತಾಯಿಸಿ ಪಾಲಕರು ಮನವಿ ಸಲ್ಲಿಸಿದರು.