ಮಾರುತೇಶ್ವರ ದರ್ಶನ ಪಡೆದ ಶಾಸಕ ನಾಡಗೌಡ

ಮಾರುತೇಶ್ವರ ದರ್ಶನ ಪಡೆದ ಶಾಸಕ ನಾಡಗೌಡ  MLA Nad Gowda who visited Maruteshwara

ತಾಳಿಕೋಟಿ  12: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ಸಿ.ಎಸ್‌.ನಾಡಗೌಡ (ಅಪ್ಪಾಜಿ) ಅವರು ಹೊಸಳ್ಳಿ ಗ್ರಾಮದ ಶ್ರೀ ಮಾರುತೇಶ್ವರ ನೂತನ ಮಂದಿರಕ್ಕೆ ಭೇಟಿ ನೀಡಿದರು. ತಾಳಿಕೋಟಿ ತಾಲೂಕಿನ ಸುಕ್ಷೇತ್ರ ಹೊಸಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ಲೋಕಾರೆ​‍್ಣಗೊಂಡಿರುವ ಶ್ರೀ ಮಾರುತೇಶ್ವರರ ನೂತನ ಮಂದಿರಕ್ಕೆ ಶನಿವಾರ ಸಂಜೆ ಭೇಟಿ ನೀಡಿದ ಶಾಸಕ ಅಪ್ಪಾಜಿ ನಾಡಗೌಡರು ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರೀ ಮಾರುತೇಶ್ವರರ ನೂತನ ಮಂದಿರವನ್ನು ನಿರ್ಮಾಣ ಮಾಡಿ ಉಜ್ಜಯಿನಿ ಜಗದ್ಗುರುಗಳಿಂದ ಇದನ್ನು ಲೋಕಾರೆ​‍್ಣ ಗೊಳಿಸಿರುವುದು ಅತ್ಯಂತ ಪುಣ್ಯದ ಕಾರ್ಯವಾಗಿದೆ.

ಈ ಕಾರ್ಯಕ್ರಮದಲ್ಲಿ ನನಗೂ ಭಾಗವಹಿಸಬೇಕಾಗಿತ್ತು ಉಪಚುನಾವಣೆಯ ಕೆಲಸಗಳ ಒತ್ತಡದಿಂದಾಗಿ ಬರಲು ಸಾಧ್ಯವಾಗಲಿಲ್ಲ ನಿಷ್ಕಳಂಕ ಮನಸ್ಸಿನಿಂದ ಈ ದೇವಸ್ಥಾನದ ನಿರ್ಮಾಣದಲ್ಲಿ ಸಹಕರಿಸಿದ ಎಲ್ಲರಿಗೂ ಶ್ರೀ ಮಾರುತೇಶ್ವರ ಒಳ್ಳೆಯದನ್ನು ಮಾಡಲೆಂದು ಹಾರೈಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಶಾಸಕ ಅಪ್ಪಾಜಿ ನಾಡಗೌಡರನ್ನು ಗ್ರಾಮದ ಹಿರಿಯರು ಸನ್ಮಾನಿಸಿ ಗೌರವಿಸಿದರು. ಈ ಸಮಯದಲ್ಲಿ ಗಣ್ಯರಾದ ಸೋಮನಗೌಡ ಹಾದಿಮನಿ, ಬಸನಗೌಡ ಬಿರಾದಾರ, ಸಿದ್ದನಗೌಡ ಪಾಟೀಲ(ನಾವದಗಿ), ಪ್ರಭುಗೌಡ ಮದರಕಲ್ಲ,ಎಚ್‌.ಬಿ.ಬಿರಾದಾರ, ನಂದನಗೌಡ, ಮಲ್ಲನಗೌಡ ಬಿರಾದಾರ, ಹಣಮಂತ್ರಾಯಗೌಡ, ಪರ್ಥಗೌಡ ಮತ್ತಿತರರು ಇದ್ದರು.