ಅಮೀರಶಾವಲಿ ದರ್ಗಾ ಉರುಸು ಅಂಗವಾಗಿ ಶಾಸಕ ಮಾನೆವರು ದರ್ಗಾಕ್ಕೆ ಭೇಟಿ
MLA Manewar visits Dargah as part of Ameerashawali Dargah Urs
ಲೋಕದರ್ಶನ ವರದಿ
ಹಾನಗಲ್ 16 :ತಾಲೂಕಿನ ಅಕಿಆಲೂರಿನ ಅಮೀರಶಾವಲಿ ದರ್ಗಾ ಉರುಸು ಅಂಗವಾಗಿ ಶಾಸಕ ಶ್ರೀನಿವಾಸ ಮಾನೆ ದರ್ಗಾಕ್ಕೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಉರುಸು,ಜಾತ್ರೆಗಳಿಗೆ ತನ್ನದೇ ಆದ ವೈಶಿಷ್ಟ್ಯಪೂರ್ಣ ಹಿನ್ನಲೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕೂಡ ಆಧುನಿಕತೆಯ ಅಬ್ಬರದ ಮಧ್ಯೆಯೂ ಸಹ ಆಚರಣೆಗಳು ಜೀವಂತವಾಗಿವೆ. ಗ್ರಾಮೀಣ ಜನರ ಕಾಳಜಿಯ ಕಾರಣದಿಂದಲೇ ಭಾರತೀಯ ಸಂಸ್ಕೃತಿಯ ಬೇರುಗಳು ಇಂದಿಗೂ ಜೀವಂತವಾಗಿವೆ. ಧರ್ಮಗಳ ಮಧ್ಯೆ ಸಂಘರ್ಷ ಮೂಡಿಸುವರ ಬಗ್ಗೆ ಎಚ್ಚರಿಕೆ ವಹಿಸಿ ಶಾಂತಿ, ಸೌಹಾರ್ದ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹ ಗಮನ ನೀಡಬೇಕಿದೆ ಎಂದು ಶಾಸಕ ಮಾನೆ ಈ ಸಂದರ್ಭದಲ್ಲಿ ತಿಳಿಸಿದರು.
ಅಂಜುಮನ್ ಇಸ್ಲಾಂ ಅಧ್ಯಕ್ಷ ಮೆಹಬೂಬಅಲಿ ಬ್ಯಾಡಗಿ,ಉರುಸು ಕಮಿಟಿ ಅಧ್ಯಕ್ಷ ಮಕ್ಬೂಲ್‌ಅಹ್ಮದ್ ಬಾಳೂರ, ಪ್ರಮುಖರಾದ ಮಕುಲಾ ಶಿರಹಟ್ಟಿ, ಆರೀಫ್ ಸುತಾರ, ತಾಹೇರ ಪಾಟೀಲ, ಮೊದಿನ ಸೈಕಲಗಾರ, ಗುಲ್ಫರಾಜ್ ಜಾಲೇಗಾರ, ಗುಲ್ಜರ್ ಬಾಳೂರ, ಮುನ್ನಾ ಹಾನಗಲ್, ಶಾನು ಅಣ್ಣಿಗೇರಿ, ತೌಫಿಕ್ ಅತ್ತಾರ, ಸಯ್ಯದ್‌ಅಲಿ ಚೌದರಿ, ಜಾವಿದ್ ತಿಳವಳ್ಳಿ ಸೇರಿದಂತೆ ಅನೇಕರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 