ದಲಿತ ಫಲಾನುಭವಿ ಮನೆಯಲ್ಲಿ ಉಪಹಾರ ಸೇವಿದ ಶಾಸಕ ಮಾನೆ
MLA Mane had breakfast at the house of a Dalit beneficiary
ಹಾನಗಲ್ 12: ತಾಲೂಕಿನ ನೂತನ ಕಂದಾಯ ಗ್ರಾಮ ಪಾಂಡವಪುರದಲ್ಲಿ ಆಯೋಜಿಸಲಾಗಿದ್ದ ಹಕ್ಕುಪತ್ರ ವಿತರಣಾ ಸಮಾರಂಭದ ಸಂದರ್ಭದಲ್ಲಿ ಶಾಸಕ ಶ್ರೀನಿವಾಸ ಮಾನೆ ದಲಿತ ಫಲಾನುಭವಿಯೊಬ್ಬರ ಮನೆಯಲ್ಲಿ ಉಪಹಾರ ಸೇವಿಸುವ ಮೂಲಕ ಗಮನ ಸೆಳೆದರು. ಜಗದೀಶಪ್ಪ ಮೂಕನವರ ಎಂಬುವರ ಮನೆಯಲ್ಲಿ ಇಡ್ಲಿ, ಚಟ್ನಿ, ಸಾಂಬಾರ ಸೇವಿಸಿ ಕುಟುಂಬ ಸದಸ್ಯರ ಕುಶಲೋಪರಿ ವಿಚಾರಿಸಿದರು.
ಅಪ್ಪ, ಅಜ್ಜನ ಕಾಲದಿಂದಲೂ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದೇವೆ. ಆದರೆ ಯಾವುದೇ ದಾಖಲೆಗಳಿಲ್ಲದೇ ವಾಸಿಸುತ್ತಿದೆವು. ಮನೆ ಮಾಲಿಕತ್ವದ ಹಕ್ಕುಪತ್ರಕ್ಕಾಗಿ ಹಲವು ವರ್ಷಗಳಿಂದ ಹೋರಾಡುತ್ತಿದ್ದೇವೆ. ಅಮರಣಾಂತ ಉಪವಾಸ ಸಹ ಕೈಗೊಂಡಿದ್ದೇವೆ. ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿ ಸಾಕಷ್ಟು ಬಾರಿ ಅಲೆದಾಡಿದರೂ ಸಹ ಪ್ರಯೋಜನವಾಗಿಲ್ಲ. ಇಷ್ಟೆಲ್ಲ ಪ್ರಯತ್ನ ಮಾಡಿದರೂ ಸಹ ಪ್ರಯೋಜನವಾಗದ ಕಾರಣ ಮಾಲಿಕತ್ವದ ಕನಸು ಕಾಣುವುದನ್ನೇ ಕೈಬಿಟ್ಟಿದ್ದೆವು. ಆದರೆ ಈಗ ಮನೆ ಮಾಲಿಕತ್ವ ಸಿಕ್ಕಿರುವುದು ಸಂತೋಷ ತರಿಸಿದೆ. ಇಡೀ ಗ್ರಾಮವೇ ಅತಂತ್ರದ ಕಡೆಯಿಂದ ಸ್ವತಂತ್ರದ ಕಡೆಗೆ ಬಂದಿದೆ ಎಂದು ಈ ಸಂದರ್ಭದಲ್ಲಿ ಜಗದೀಶಪ್ಪ ಮೂಕನವರ ಹರ್ಷ ವ್ಯಕ್ತಪಡಿಸಿದರು.
ತಹಶೀಲ್ದಾರ್ ರೇಣುಕಾ ಎಸ್., ಜಿಪಂ ಮಾಜಿ ಸದಸ್ಯರಾದ ಟಾಕನಗೌಡ ಪಾಟೀಲ, ಕೊಟ್ರ್ಪ ಕುದರಿಸಿದ್ದನವರ, ಕೆಎಂಎಫ್ ನಿರ್ದೇಶಕ ಚಂದ್ರ್ಪ ಜಾಲಗಾರ, ಉಷಾ ಮಾನೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಕರಿಯಪ್ಪ ಗಂಟೇರ, ರಾಮಚಂದ್ರ ಕಲ್ಲೇರ, ಬಸನಗೌಡ ಪಾಟೀಲ, ಜಯಣ್ಣ ದ್ಯಾವಣ್ಣನವರ, ನಿರಂಜನ ಪಾಟೀಲ, ಮಾರುತಿ ಮೂಕನವರ, ಮಂಜುನಾಥ ಕಾಡನವರ, ಲಿಂಗರಾಜ ಹೊಳಿಯಣ್ಣನವರ, ಶಿವಲಿಂಗಪ್ಪ ಕುಬಟೂರ ಸೇರಿದಂತೆ ಅನೇಕರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 