ಕಪ್ಪಲಗುದ್ದಿ ಪಿಕೆಪಿಎಸ್ ಅಧ್ಯಕ್ಷ ಶಿವಪ್ಪ ದಡ್ಡಿಮನಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಸನ್ಮಾನ

ಕಪ್ಪಲಗುದ್ದಿ ಪಿಕೆಪಿಎಸ್ ಅಧ್ಯಕ್ಷ ಶಿವಪ್ಪ ದಡ್ಡಿಮನಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಸನ್ಮಾನ MLA Mahendra Tammannavar felicitates Kappalaguddi PKPS President Shivappa Daddimani

 

ಪಾಲಬಾವಿ 14 : ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ ವಿವಿಧೇಶ ಗ್ರಾಮೀಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ  ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ತಾಪಂ ಮಾಜಿ ಸದಸ್ಯ ಶಿವಪ್ಪ ದಡ್ಡಿಮನಿ ಅವರನ್ನು ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಸನ್ಮಾನಿಸಿದರು. ಶಾಸಕರು ಶಿವಪ್ಪ ದಡ್ಡಿಮನಿಗೆ ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿದರು. ಈ ಸಂದರ್ಭದಲ್ಲಿ ಕಪ್ಪಲಗುದ್ದಿ ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟುಗೌಡ ನಾಯಿಕ, ಭೀಮಪ್ಪ ಮಂಟೂರ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಭರಮಪ್ಪ ಉದ್ದಪ್ಪಗೋಳ, ಪಿಕೆಪಿಎಸ್ ನಿರ್ದೇಶಕ ಮಹಾದೇವ ತಳವಾರ, ಪಕ್ಷದ ಮುಖಂಡ ಮಹಾದೇವ ನಾಯಿಕ, ಸಚಿನ್ ಹಳಕಲ್ಲ, ಗಿರಿಮಲ್ಲ ನಾಯಿಕ ಹಾಗೂ ಭೀಮಸಿ ಮಾನೋಜಿ ಉಪಸ್ಥಿತರಿದ್ದರು.