ಕೆರೆ ತುಂಬುವ ಪ್ರಾಯೋಗಿಕ ಯೋಜನೆಗೆ ಶಾಸಕ ಲಕ್ಷ್ಮಣ ಸವದಿ ಚಾಲನೆ
MLA Lakshman Savadi launches pilot project to fill lake
ಅಥಣಿ 03: ಅಥಣಿ ತಾಲೂಕು ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನದಿಂದ ಶೆ.96 ರಷ್ಟು ನೀರಾವರಿಯಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ ಯಲ್ಲಮ್ಮವಾಡಿ ಕರೆಯ ಮೂಲಕ 8 ಕೆರೆಗಳಿಗೆ ನೀರು ತುಂಬಿಸುವ 95 ಕೋಟಿ ಅಂದಾಜು ವೆಚ್ಚದ ಯೋಜನೆಗೆ ಪ್ರಾಯೋಗಿಕ ಚಾಲನೆ ನೀಡಿ ಮಾತನಾಡುತ್ತಿದ್ದರು.
ಅಥಣಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಜನಪರ ಯೋಜನೆಗಳನ್ನು ಅನುಷ್ಠಾನ ಗೊಳಿಸಬೇಕು ಎಂದು ಅಂದು ಕಾಂಗ್ರೆಸ್ ಪಕ್ಷದವರಿಂದ ವಾಗ್ದಾನ ಪಡೆದುಕೊಂಡು ಕಾಂಗ್ರೆಸ್ ಪಕ್ಷ ಸೇರೆ್ಡಯಾಗಿದ್ದೆ ಹೀಗಾಗಿ ಸಿ.ಎಮ್.ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಹಕಾರದಿಂದ ತಾಲೂಕಿನಲ್ಲಿ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿ ಈಗಾಗಲೇ ಶೇ.70 ರಷ್ಟು ಮುಗಿದಿದ್ದು, ಜನೇವರಿ ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದರು. ಅಮ್ಮಾಜೇಶ್ಚರಿ ಏತ ನೀರಾವರಿ ಹಾಗೂ ಕೆರೆ ತುಂಬುವ ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅಥಣಿಗೆ ಆಗಮಿಸಿ ಈ ಎರಡೂ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಈ ಎರಡೂ ಯೋಜನೆಗಳಿಗೆ ಮುಖ್ಯಮಂತ್ರಿಗಳು ಉದ್ಘಾಟಿಸುವ ಸಂದರ್ಭದಲ್ಲಿಯೇ ಕೃಷಿ ಮಹಾವಿದ್ಯಾಲಯದ ಕಾಮಗಾರಿಗೂ ಶಂಕುಸ್ಥಾಪನೆ ನೆರವೇರಿಸುವುದಾಗಿ ಹೇಳಿದರು. ಕರಿ ಮಸೂತಿ ನೀರಾವರಿ ಯೋಜನೆಯಿಂದ ಹೊರಗುಳಿದ 12 ಸಾವಿರ ಎಕರೆ ಸೇರಿದಂತೆ 75 ಸಾವೀರ ಎಕರೆ ಭೂಮಿ ಈ ಯೋಜನೆಗಳಿಂದ ನೀರಾವರಿಗೊಳಪಡಲಿದೆ. ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ, ಗುಣಮಟ್ಟದ ವಿದ್ಯುತ್, ನೀರು, ರೈತ ಬೆಳೆದ ಕೃಷಿ ಉತ್ಪನ್ನಗಳನ್ನು ಸಾಗಿಸಲು ಸುಸಜ್ಜಿತ ರಸ್ತೆ ಬೇಕು ಈ ನಿಟ್ಟಿನಲ್ಲಿ ನಾನು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ ಎಂದ ಅವರು ಶಾಸಕನಾಗಿ ನಾನು ಮೊದಲ ಬಾರಿ ಚುನಾವಣೆಯಲ್ಲಿ ಗೆದ್ದ ಸಂದರ್ಭದಲ್ಲಿ ಅಥಣಿ ತಾಲೂಕಿನ ಅಭಿವೃದ್ಧಿಗಾಗಿ ಕನಸು ಕಂಡಿದ್ದೆ ಆ ನಿಟ್ಟಿನಲ್ಲಿಯೇ ನಾನು ಕಾರ್ಯಪ್ರವೃತ್ತನಾಗಿದ್ದೇನೆ ಎಂದರು.
ಪಶು ಸಂತಾನ ಉಳಿಯಬೇಕು ಎಂದು ಅಥಣಿ ತಾಲೂಕಿಗೆ ಪಶುವೈದ್ಯಕೀಯ ಮಹಾವಿದ್ಯಾಲಯ ಮತ್ತು ಕೃಷಿಯ ಬಗೆಗೆ ಸರಿಯಾದ ಮತ್ತು ವೈಜ್ಞಾನಿಕ ಮಾಹಿತಿ 200 ಮೇಗಾವ್ಯಾಟ ವಿದ್ಯುತ್ ಉತ್ಪಾದಿಸುವ ಸೋಲಾರ್ ವಿದ್ಯುತ್ ಯೋಜನೆಗೂ ಇಷ್ಟರಲ್ಲಿಯೇ ಚಾಲನೆ ನೀಡುವೆ ಎಂದರು.
ವಿರೋಧ ಪಕ್ಷದ ಕೆಲ ನಾಯಕರು ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ವಿಫಲವಾಗಿದೆ ಎಂದು ಹೇಳಿಕೆ ಕೊಡುವ ಮೂಲಕ ರೈತರಲ್ಲಿ ಆತಂಕ ಮೂಡಿಸುತ್ತಿದ್ದು, ಈ ಯೋಜನೆ ಪೂರ್ಣಗೊಂಡ ನಂತರ ವಿಫಲ ಅಥವಾ ಸಫಲವಾಗುತ್ತದೆಯೋ ಎನ್ನುವದರ ಕುರಿತು ಚರ್ಚೆಯಾಗಬೇಕೆಂದರು. ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಪಂಚ ಗ್ಯಾರಂಟಿ ಅನುಷ್ಠಾನದಿಂದ ಆರ್ಥಿಕ ಅಡತಡೆ ಉಂಟಾಗಬಾರದೆನ್ನುವ ಕಾರಣದಿಂದ ನಾಬಾರ್ಡ ಯೋಜನೆಯಡಿ ಸೇರೆ್ಡಗೊಳಿಸಿರುವೆ ಎಂದರು.
ಕೆರೆ ತುಂಬುವ ಯೋಜನೆ ಪೂರ್ಣಗೊಳ್ಳಲು ಸಣ್ಣ ನೀರಾವರಿ ಯೋಜನೆಯ ನಿವೃತ್ತ ಸಹಾಯಕ ಅಭಿಯಂತರ ಶ್ರೀಕಾಂತ ಮಾಕಾಣಿ ಹಾಗೂ ಸದ್ಯದ ಅಭಿಯಂತರ ಪ್ರವೀಣ ಪಾಟೀಲ ಇವರ ಪರಿಶ್ರಮವೇ ಕಾರಣ ಎಂದ ಅವರು ಗುತ್ತಿಗೆದಾರ ಸಂತೋಷ ಗಾಣಿಗೇರ ಕೂಡ ಉತ್ತಮವಾಗಿ ಕಾಮಗಾರಿ ನಿರ್ವಹಿಸಿದ್ದ ಪರಿಣಾಮ ಈ ಯೋಜನೆ ಪೂರ್ಣಗೊಂಡಿದೆ ಎಂದರು.
ಲಕ್ಷ್ಮಣ ಸವದಿ ಮುಖ್ಯಮಂತ್ರಿಯಾಗಲಿ: ಅಭಿವೃದ್ಧಿ ಹರಿಕಾರರು, ಜನ,ಸಾಮಾನ್ಯರ, ರೈತರ ಯಶಸ್ವಿ ಮತ್ತು ಪ್ರಭಾವಿ ನಾಯಕ, ಶಾಸಕ ಲಕ್ಷ್ಮಣ ಸವದಿಯವರು ರಾಜ್ಯದ ಮುಖ್ಯಮಂತ್ರಿಯಾಗೇ ಆಗುತ್ತಾರೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದ ಬಸವರಾಜ ಸಿಂದೂರ ಅವರು ಒಂದು ಕಾಲದಲ್ಲಿ ಬರಗಾಲ ಪೀಡಿತ ಅಥಣಿ ಮತಕ್ಷೇತ್ರದಲ್ಲಿ ಹಲವು ನೀರಾವರಿ ಯೋಜನೆಗಳನ್ನು ಅನುಷ್ಠಾನ ಗೊಳಿಸುವ ಮೂಲಕ ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಸಿದರಾಯ ಯಲ್ಲಡಗಿ, ಶೇಖರ ನೇಮಗೌಡ, ಚಿಕ್ಕ ನೀರಾವರಿ ಇಲಾಖೆಯ ಗುರುಬಸವರಾಜ, ಮಾತನಾಡಿದರು. ಪುರಸಭಾ ಸದಸ್ಯರಾದ ದತ್ತಾ ವಾಸ್ಟರ್, ಮಲ್ಲೇಶ ಹುದ್ದಾರ, ಬೀರ್ಪ ಯಕ್ಕಂಚಿ, ರಾಜಶೇಖರ ಗುಡೋಡಗಿ, ರಮೇಶ ಪವಾರ, ಶಿವಾನಂದ ದಿವಾನಮಳ, ರಾಮ ಧರಿಗೌಡ, ಗುರು ದಾಸ್ಯಾಳ, ಶೇಖರ ಗೌಡ ನೆಮಗೌಡ್ , ಶಿದ್ರಾಯ್ ಯಲ್ಲಡಗಿ, ಅಮೋಘ ಸಿದ್ದ ಕೊಬ್ರಿ, ಅರ್ಜುನ್ ಪೂಜಾರಿ, ಬಸವರಾಜ್ ಸಿಂಧೂರ, ನುರಅಹಮದ. ಡೊಂಗರಗಾಂವ, ರಾಮನ ಗೌಡ ಪಾಟಿಲ, ಮಹಾಂತೇಶ ಬಾಡಗಿ, ಗ್ರಾಮ ಪಂಚಾಯತ ಅಧ್ಯಕ್ಷೆ ಶಾಲವ್ವ ಪೂಜಾರಿ, ಗುತ್ತಿಗೆದಾರ ಸಂತೋಷ ಗಾಣಿಗೇರ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 