ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ಹಣದ ಹೊಳೆ, ಶಾಸಕ ಲಕ್ಷ್ಮಣ ಸವದಿ ತೀವೃ ಕಳವಳ
MLA Lakshman Savadi is deeply concerned about the flow of money in the elections of cooperative soci
ಅಥಣಿ 17: ಸಹಕಾರ ಕ್ಷೇತ್ರದ ಸಂಸ್ಥೆಗಳ ಚುನಾವಣೆಗಳಲ್ಲಿ ಇದೇ ಮಿದಕ ಬಾರಿಗೆ ಹಣದ ಹೊಳೆ ಹರಿಯುತ್ತಿದ್ದು, ಈ ವ್ಯವಸ್ಥೆ ಇಡೀ ಸಹಕಾರಿ ರಂಗವನ್ನೇ ಹಾಳು ಮಾಡುತ್ತಿದೆ ರೈತರು, ಸಹಕಾರಿಗಳು ಈ ವ್ಯವಸ್ಥೆಯನ್ನು ವಿರೋಧಿಸಬೇಕು ಇಲ್ಲದಿದ್ದಲ್ಲಿ ಸಹಕಾರಿ ರಂಗವೇ ಹಾಳಾಗುತ್ತದೆ ಎಂದು ಮಾಜಿ ಉಪ ಮುಖ್ಯ ಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಅಥಣಿ ತಾಲೂಕಾ ಪ್ರಾಥಮಿಕ, ಸಹಕಾರಿ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕನ ನವೀಕರಣ ಕಟ್ಟಡ ಉದ್ಘಾಟನೆ ಮತ್ತು 2024-25 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ರೈತರ ಅನಕೂಲಕ್ಕಾಗಿ ರಾಜ್ಯದಲ್ಲಿಯೇ ಮೊಟ್ಟ ಮೊದಲ ಕೃಷಿ ಸಹಕಾರಿ ಸಂಘ ಪ್ರಾರಂಭಗೊಂಡಿತು ಅಂದಿನಿಂದ ಇಂದಿನ ವರೆಗೂ ಈ ಸಹಕಾರಿ ರಂಗ ರೈತರ ಪಾಲಿನ ಕಾಮಧೇನುವಿನಂತೆ ಕಾರ್ಯನಿರ್ವಹಿಸುತ್ತಿದೆ ಆದರೆ ಇತ್ತೀಚಿಗೆ ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ಆಸೆ, ಅಮೀಷಗಳ ಹಣದ ಹೊಳೆ ಹರಿಸುತ್ತಿರುವುದು ಇಡೀ ಸಹಕಾರಿ ರಂಗಕ್ಕೆ ಅಪಾಯಕಾರಿ ಎಂದು ಪರೋಕ್ಷವಾಗಿ ಜಾರಕಿಹೊಳಿ ಸಹೋದರರಿಗೆ ಟಾಂಗ ಕೊಟ್ಟರು. ರೈತರಿಗೆ ವಿತರಿಸುವ ಶೂನ್ಯ ಬಡ್ಡಿ ದರದ ಸಾಲದ ಶೇಕಡಾವಾರು ಮೊತ್ತವನ್ನು ಪ್ರಸಕ್ತ ಅವಧಿಯಲ್ಲಿ ನಾಬಾರ್ಡ ಶೇ.10 ರಷ್ಟು ಮಾತ್ರ ಸಾಲ ನೀಡುತ್ತಿದ್ದು, ಇನ್ನುಳಿದ ಶೇ.90 ರಷ್ಟು ಸಾಲವನ್ನು ಜಿಲ್ಲಾ ಮಧ್ಯವರ್ತಿ ಬ್ಯಾಂಕ ರೈತರಿಂದ ಸಂಗ್ರಹಿಸಿದ ಠೇವಣಿ ಹಣದಲ್ಲಿಯೇ ರೈತರಿಗೆ ನೀಡುತ್ತಿದೆ ಎಂದ ಅವರು ಇಂದಲ್ಲ ನಾಳೆ ಟು ಟೈರ್ ವ್ಯವಸ್ಥೆ ಜಾರಿಗೊಳ್ಳುವುದು ನಿಶ್ಚಿತವಾಗಿದ್ದು, ರೈತರಿಂದ, ಸಹಕಾರಿಗಳ ವಿಶ್ವಾಸ ಗಳಿಸಿ ಠೇವಣಿ ಸಂಗ್ರಹಿಸಿ ಇಲ್ಲದೇ ಹೋದಲ್ಲಿ ಸಂಕಷ್ಟಕ್ಕೆ ಸಿಲುಕುತ್ತಿರಿ ಎಂದು ಪಿ.ಎಲ್.ಡಿ ಬ್ಯಾಂಕ ಆಡಳಿತ ಮಂಡಳಿ ಸದಸ್ತರಿಗೆ ಕಿವಿ ಮಾತು ಹೇಳಿದರು.
ಅಥಣಿ ಪಿ.ಎಲ್.ಡಿ ಬ್ಯಾಂಕ ಸಾಕಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ ಇದೇ ರೀತಿ ಇನ್ನಷ್ಟು ಪ್ರಗತಿ ಸಾಧಿಸಲು ಬ್ಯಾಂಕಿನ ಆಡಳಿತ ಮಂಡಳಿಯವರು ಮತ್ತು ಸದಸ್ಯರು ಒಂದಾಗಿ ಬ್ಯಾಂಕಿನ ಆರ್ಥಿಕ ಸ್ಥಿತಿಯನ್ನು ಗಟ್ಟಿಗೊಳಿಸಬೇಕು ಮತ್ತು ಪಿ.ಎಲ್.ಡಿ ಬ್ಯಾಂಕಿನಿಂದ ಸಾಲ ಪಡೆದ ರೈತರು ನಿಗದಿತ ಅವಧಿಯಲ್ಲಿಯೇ ಪಾವತಿಸಿ ಇಲ್ಲದೇ ಹೊದಲ್ಲಿ ಇಂದಲ್ಲ ನಾಳೆ ಸಂಕಷ್ಟ ತಪ್ಪಿದ್ದಲ್ಲ ಎಂದ ಅವರು ಪಿ.ಎಲ್.ಡಿ ಬ್ಯಾಂಕ ಆರ್ಥಿಕವಾಗಿ ಗಟ್ಟಿಗೊಳ್ಳಲು ಮೊದಲು ಆಡಳಿತ ಮಂಡಳಿ ಸದಸ್ಯರು ಠೇವಣಿ ಇಡಬೇಕು ಮತ್ತು ನನ್ನಿಂದ ನೀವು ಬಯಸುವ ಸಹಾಯ, ಸಹಕಾರ ಮಾಡುತ್ತೇನೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿದಿದ್ದ ಬ್ಯಾಂಕಿನ ಅಧ್ಯಕ್ಷ ದುಂಡಪ್ಪ ಅಸ್ಕಿ, ಸಾನಿಧ್ಯವನ್ನು ಶೆಟ್ಟರ ಮಠದ ಶ್ರೀ ಮರುಳಸಿದ್ಧ ಸ್ವಾಮೀಜಿ ಮತ್ತು ಜಮಖಂಡಿ ಓಲೇಮಠದ ಆನಂದ ಗುರುಜಿ ಅಗೂ ಅತಿಥಿಗಳಾಗಿ ಆಗಮಿಸಿದ್ದ ಪಿಕಾರ್ಡ ಬ್ಯಾಂಕಿನ ಜಿಲ್ಲಾ ನಿರ್ದೇಶಕ ರಾಜು ಭೈರುಗೋಳ ಮಾತನಾಡಿದರು.
ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಕೃಷ್ಣಾ ಸಕ್ಕರೆ ಕಾರಖಾನೆಯ ಅಧ್ಯಕ್ಷ ಪರ್ಪ ಸವದಿ, ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ಎಸ್. ಸಂಗಮೇಶ, ಅತಿಥಿಗಳಾಗಿ ಧುರೀಣರಾದ ಜ್ಯೋತಿಕುಮಾರ ಪಾಟೀಲ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರಾದ ಅಶೋಕ ಪಡನಾಡ, ಕಲಗೌಡ ಪಾಟೀಲ, ರವೀಂದ್ರ ಗಾಣಿಗೇರ, ವಿನಯ ಪಾಟೀಲ, ಅಪ್ಪಾಸಾಬ ವಾಘಮೋರೆ, ಶ್ರೀಮತಿ ತಂಗೆವ್ವ ಖೋತ, ಭರತ ಮಾಳಿ, ಮಹಾದೇವ ಮೇತ್ರಿ, ರಾಜಗೌಡ ಪಾಟೀಲ, ಮಾನಸಿಂಗ ಮಗರ, ಸತ್ಯಪ್ಪ ಬಿರಾದಾರ, ಶ್ರೀಶೈಲ ನಾಯಿಕ, ಶ್ರೀಮತಿ ಸುಜಾತಾ ಖಡಕಿ, ವ್ಯವಸ್ಥಾಪಕ ಆರ್.ಎಚ್.ತೆರದಾಳ, ಕ್ಷೇತ್ರಾಧಿಕಾರಿ ಎಸ್.ಎಮ್.ಬನಸೋಡೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 