ಶಾಸಕ ಲಕ್ಷ್ಮಣ ಸವದಿಗೆ ಗುಂಡೇವಾಡಿಯ ಎರಡೂ ಸಹಕಾರ ಸಂಘಗಳ ಬೆಂಬಲ

ಶಾಸಕ ಲಕ್ಷ್ಮಣ ಸವದಿಗೆ ಗುಂಡೇವಾಡಿಯ ಎರಡೂ ಸಹಕಾರ ಸಂಘಗಳ ಬೆಂಬಲ  MLA Lakshman Savadi gets support from both Gundevadi cooperative societies

ಅಥಣಿ 23 : ಬಿಡಿಸಿಸಿ ಬ್ಯಾಂಕನ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿಯವರಿಗೆ ಗುಂಡೇವಾಡಿಯ ಕಾಡಸಿದ್ದೇಶ್ವರ ಕೃಷಿ ಸಹಕಾರ ಸಂಘ ಹಾಗೂ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳೆರಡೂ ಬೆಂಬಲ ವ್ಯಕ್ತ ಪಡಿಸಿದವು ಎಂದು ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ನಿರ್ದೇಶಕ ಮತ್ತು ಕಾಡಸಿದ್ಧೇಶ್ವರ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಘೂಳಪ್ಪ ಜತ್ತಿ ಹೇಳಿದರು.          

ಅವರು ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಬಿಡಿಸಿಸಿ ಬ್ಯಾಂಕನ ಆಡಳಿತ ಮಂಡಳಿಗೆ ಅಕ್ಟೋಬರ 19 ರಂದು ನಡೆಯಲಿರುವ ಚುನಾವಣೆಗೆ ಅಥಣಿ ತಾಲೂಕಿನ ವಿವಿಧೋದ್ಧೇಶಗಳ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಪ್ರತಿನಿಧಿ ಸ್ಥಾನದ ಚುನಾವಣೆಗೆ  ಶಾಸಕ ಲಕ್ಷ್ಮಣ ಸವದಿಯವರಿಗೆ ಗುಂಡೇವಾಡಿಯ ಎರಡೂ ಸಹಕಾರ ಸಂಘಗಳ ಬೆಂಬಲವನ್ನು ನೀಡುವುದಾಗಿ ಸರ್ವಸಾಧಾರಣ ಸಭೆಯಲ್ಲಿ ಘೋಶಿಸಿದರು.       ಸಹಕಾರ ಸಂಘದ ಅಧ್ಯಕ್ಷ ಶಿವಾನಂದ ಗೊಲಭಾವಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 7 ಕೋಟಿ  51 ಲಕ್ಷ 77 ಸಾವಿರದಷ್ಟು ಆರ್ಥಿಕ ವ್ಯವಹಾರ ಆಗಿದ್ದು, ಸದಸ್ಯರಿಂದ ವಿವಿಧ ಯೋಜನೆಗಳಲ್ಲಿ 12 ಲಕ್ಷ 41 ಸಾವಿರದಷ್ಟು ಠೇವಣಿ ಮತ್ತು 81 ಲಕ್ಷ 18 ಸವಿರದಷ್ಟು ಶೇರು ಬಂಡವಾಳ ಸಂಗ್ರಹಿಸಲಾಗಿದೆ ಎಂದ ಅವರು ಸದಸ್ಯರಿಗೆ 5 ಕೋಟಿ 79 ಲಕ್ಷ 18 ಸಾವಿರ ದಷ್ಟು ಹಣವನ್ನು ಸಾಲ ನೀಡಲಾಗಿದೆ ಎಂದರು.        ಸಂಘದಿಂದ ಪಡೆದುಕೊಂಡ ಸಾಲವನ್ನು ನಿಗದಿತ ಸಮಯದಲ್ಲಿ ಬಡ್ಡಿ ಸಹಿತ ಪಾವತಿಸಬೇಕು ಆಗ ಮಾತ್ರ ಸಹಕಾರ ಸಂಘ ಅಭಿವೃದ್ಧಿಯಾಗಿ ಲಾಭದಲ್ಲಿ ಮುನ್ನಡೆಯುತ್ತದೆ ಎಂದ ಅವರು ಪ್ರಸಕ್ತ ಸಾಲಿನಲ್ಲಿ ಸಹಕಾರ ಸಂಘ ಸದಸ್ಯರ ಸಹಕಾರದಿಂದ 4 ಲಕ್ಷ 24 ಸಾವಿರದಷ್ಟು ಲಾಭ ಗಳಿಸಿದೆ ಎಂದರು.         

ಸಭೆಯಲ್ಲಿ ಉಪಾಧ್ಯಕ್ಷರಾದ ಆನಂದ  ಕದಮ, ನಿರ್ದೇಶಕರಾದ ಶಿವಾನಂದ  ಪಾಟೀಲ, ಪಾಪಾಚಂದ  ಭೋಸಗೆ , ಹುಚ್ಚಪ್ಪ ಗುಂಜಿಗಾಂವಿ, ಖಂಡು ಧನಗರ (ಡೋಳ್ಳಿ) , ಶ್ರೀಮತಿ ಕಮಲಾ ಪವಾಡೆಪ್ಪಾ ಜತ್ತಿ, ಶ್ರೀಮತಿ ಸಂಗೀತಾ ಗುರಶಾಂತ ಗೆಜ್ಜಿ,  ಲಾಲಸಾಬ ಕುಡಚಿ, ಸದಾಶಿವ ಕಾಂಬಳೆ, ಪೀರ​‍್ಪ ಬೇರಡ, ಶ್ರೀಮತಿ ಸಕ್ಕುಬಾಯಿ ಶ್ರೀಮಂತ ವೀರ ಸೇರಿದಂತೆ ರೈತ ಮುಖಂಡರಾದ ನಾಗಪ್ಪ ಜತ್ತಿ, ಕುಮಾರಗೌಡ ಪಾಟೀಲ, ಮಹಾಬಲ  ಬೋಸಗಿ, ಅಣ್ಣಾಸಾಬ ಪಾಟೀಲ, ಅಬಾಸಾಬ ಚವ್ಹಾಣ ಮತ್ತು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಲಹೆ, ಸೂಚನೆ ನೀಡಿದರು.       ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಲೋಹಾರ ಸರ್ವರನ್ನು ಸ್ವಾಗತಿಸಿ ವರದಿ ವಾಚನ ಓದಿದರು, ಮಹಾಂತಯ್ಯ ಹಿರೇಮಠ ನಿರೂಪಿಸಿ, ವಂದಿಸಿದರು.