ವಿದ್ಯಾರ್ಥಿಗಳ ಪಾಲಿನ ’ಜ್ಞಾನದಾನಿ’ಯಾದ ಜೋಗದ್ ನಾರಾಯಣಪ್ಪಸೇವಾ ಕೈಂಕರ್ಯಕ್ಕೆ ಶಾಸಕ ಜನಾರ್ದನ ರೆಡ್ಡಿ ಮೆಚ್ಚುಗೆ
MLA Janardhan Reddy praises Jogad Narayanappa for his service work as a 'giver of knowledge' for stu
ಗಂಗಾವತಿ 15: "ಶಿಕ್ಷಣವೇ ಜೀವನದ ಬುನಾದಿ. ಬಡತನದಲ್ಲಿ ಬೆಳೆದವರು ಕಷ್ಟದ ಬೆಲೆ ಬಲ್ಲವರು ಎನ್ನುವುದಕ್ಕೆ ಜೋಗದ್ ನಾರಾಯಣಪ್ಪನವರೇ ಸಾಕ್ಷಿ" ಎಂದು ಶಾಸಕ ಜನಾರ್ದನ ರೆಡ್ಡಿ ಬಣ್ಣಿಸಿದರು.ನಗರದ ಗ್ರಾಮ ದೇವತೆ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜೋಗದ್ ನಾರಾಯಣಪ್ಪ ಹಾಗೂ ಅವರ ಕುಟುಂಬದ ವತಿಯಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ "ನಾರಾಯಣಪ್ಪ ಅವರು ಕಳೆದ 15 ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಕೇವಲ ಸಮಾಜದ ಮೇಲಿನ ಕಳಕಳಿಯಿಂದ ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಿಸುತ್ತಿರುವುದು ಅತ್ಯಂತ ಶ್ಲಾಘನೀಯ. ಅವರ ಈ ಸೇವಾ ಮನೋಭಾವ ಇಂದಿನ ಸಮಾಜಕ್ಕೆ ದೊಡ್ಡ ಮಾದರಿಯಾಗಿದೆ" ಎಂದು ಪ್ರಶಂಸಿಸಿದರು.
ಬಡತನದ ಅನುಭವವೇ ಪ್ರೇರಣೆ: ಪ್ರಸ್ತಾವಿಕವಾಗಿ ಮಾತನಾಡಿದ ಜೋಗದ್ ನಾರಾಯಣಪ್ಪ ಅವರು, ತಮ್ಮ ಬಾಲ್ಯದ ಕಷ್ಟದ ದಿನಗಳನ್ನು ಭಾವುಕರಾಗಿ ಸ್ಮರಿಸಿದರು. "ನಾನು ಅತ್ಯಂತ ಬಡ ಕುಟುಂಬದಲ್ಲಿ ಬೆಳೆದವನು. ಶಿಕ್ಷಣ ಪಡೆಯಲು ಅನುಭವಿಸಿದ ಕಷ್ಟಗಳು ನನಗೆ ಇಂದಿಗೂ ನೆನಪಿವೆ. ಆರ್ಥಿಕ ಸಂಕಷ್ಟ ಶಿಕ್ಷಣಕ್ಕೆ ತಡೆಯಾಗಬಾರದು ಎಂಬ ದೃಢ ನಿರ್ಧಾರದಿಂದ, ಸರ್ಕಾರಿ ಶಾಲೆಯ ಮಕ್ಕಳಿಗೆ ನನ್ನಿಂದ ಸಾಧ್ಯವಿರುವ ಸಣ್ಣ ಸಹಾಯವನ್ನು ಕಳೆದ ಒಂದೂವರೆ ದಶಕದಿಂದ ಮಾಡುತ್ತಿದ್ದೇನೆ" ಎಂದು ತಿಳಿಸಿದರು.ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, "ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ನಾರಾಯಣಪ್ಪ ಅವರು ಕೈಗೊಂಡಿರುವ ಈ ಕಾರ್ಯ ನಿರಂತರವಾಗಿರಲಿ" ಎಂದು ಶುಭ ಹಾರೈಸಿದರು.
ಶಿಕ್ಷಣ ಪ್ರೇಮಿ ನೆಕ್ಕಂಟಿ ಸೂರಿಬಾಬು ಮಾತನಾಡಿ, "ಶಿಕ್ಷಣದ ಶಕ್ತಿಯನ್ನು ಅರಿತ ವ್ಯಕ್ತಿ ಮಾತ್ರ ಇಂತಹ ಸಮಾಜಮುಖಿ ಕೆಲಸ ಮಾಡಲು ಸಾಧ್ಯ" ಎಂದು ನುಡಿದರು.ಈ ಕಾರ್ಯಕ್ರಮದ ಮೂಲಕ ನೂರಾರು ವಿದ್ಯಾರ್ಥಿಗಳು ನೋಟ್ಬುಕ್ಗಳನ್ನು ಪಡೆದು ಸಂತಸ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ್ ನಾಗಪ್ಪ, ಮಾಜಿ ಸಂಸದ ಶಿವರಾಮೇಗೌಡ, ಪ್ರಮುಖರಾದ ಸಿಂಗನಾಳ ವಿರುಪಾಕ್ಷಪ್ಪ, ಅಮರ್ ಜ್ಯೋತಿ ನರಸಪ್ಪ, ವೀರಭದ್ರ್ಪ ನಾಯಕ್, ಹನುಮಂತಪ್ಪ ನಾಯಕ್, ಶಿಕ್ಷಣ ಅಧಿಕಾರಿ ನಟೇಶ್, ಹೊಸಮನಿ ಮಲ್ಲೇಶಪ್ಪ ಸೇರಿದಂತೆ ಹಲವು ಗಣ್ಯರು, ಶಿಕ್ಷಕರು, ಪೋಷಕರು ಮತ್ತು ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 